Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಕ್ರೈಸ್ತರಿಂದ ‘ಪವಿತ್ರ ಶುಕ್ರವಾರ’ ಆಚರಣೆ

ಕಾಸರಗೋಡು: ಕ್ರೈಸ್ತ ಬಾಂಧವರು ಜಿಲ್ಲೆಯಾದ್ಯಂತ ಶುಕ್ರವಾರ ‘ಪವಿತ್ರ ಶುಕ್ರವಾರ’ ಹಬ್ಬವನ್ನು ಆಚರಿಸಿದರು. ಏಸು ಸ್ವಾಮಿ ಶಿಲುಬೆಗೇರಿದ ದಿನವನ್ನು ಪವಿತ್ರ ಶುಕ್ರವಾರ ಹಬ್ಬವಾಗಿ ಆಚರಿಸಲಾಗುತ್ತಿದೆ.

ಕಾಸರಗೋಡಿನ ಕೋಟೆಕಣಿ ಸೈಂಟ್ ಜೋಸೆಫ್ ಇಗರ್ಜಿ, ಬೇಳ ಶೋಕಮಾತಾ ಇಗರ್ಜಿ, ಕುಂಬಳೆಯ ಸಂತ ಮೋನಿಕಾ ಇಗರ್ಜಿ ಸಹಿತ ಮಂಜೇಶ್ವರ, ವರ್ಕಾಡಿ, ಬದಿಯಡ್ಕ, ಉಕ್ಕಿನಡ್ಕ, ನಾರಂಪಾಡಿ ಮುಂತಾದೆಡೆ ನಾನಾ ಕ್ರೈಸ್ತ ಆರಾಧನಾಲಯಗಳಲ್ಲಿ ವಿಶೇಷ ಕಾರ್ಯಕ್ರಮಗಳು ನೆರವೇರಿದುವು.

ಈ ಸಂದರ್ಭ ಯೇಸುವಿನ ಪವಿತ್ರ ಶಿಲುಬೆಯ ಮೆರವಣಿಗೆ, ಆರಾಧನಾಲಯಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಎಪ್ರಿಲ್ 5ರಂದು ಈಸ್ಟರ್ ಹಬ್ಬ ನಡೆಯಲಿದೆ.

Leave a Reply

Your email address will not be published. Required fields are marked *