Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಉಡುಪಿ DAR ಪೊಲೀಸ್ ಶ್ರೀಕರ್ ಇಲಾಖಾ ಸೇವೆಯಿಂದ ವಜಾ

ಉಡುಪಿ: ಉಡುಪಿ ನಗರ ಠಾಣೆಯ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಉಡುಪಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ (ಡಿಎಆರ್) ಕಾನ್ ಸ್ಟೇಬಲ್ ಶ್ರೀಕರ (35) ಅವರನ್ನು ಇಲಾಖಾ ಸೇವೆಯಿಂದ ಖಾಯಂ ಆಗಿ ವಜಾ (ಡಿಸ್ ಮಿಸ್) ಗೊಳಿಸಿದ ವಿದ್ಯಾಮಾನ ಇತ್ತೀಚೆಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

2013ರ ಮಾರ್ಚ್ ನಲ್ಲಿ ದಾಖಲಾದ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ತಿಂಗಳ ಹಿಂದೆಯಷ್ಟೇ ಜಿಲ್ಲಾ ಪೊಲೀಸ್ ಅಧೀಕ್ಷಕರ ವರದಿಯಂತೆ ಇಲಾಖೆಯ ಉನ್ನತ ಅಧಿಕಾರಿಗಳು ಡಿಎಆರ್ ಪಿಸಿ ಶ್ರೀಕರ್ ಅವರನ್ನು ಸೇವೆಯಿಂದ ಶಾಶ್ಚತವಾಗಿ ವಜಾಗೊಳಿಸಿದ್ದಾರೆಂದು ತಿಳಿದುಬಂದಿದೆ. ಆದರೆ ಪೆನ್ಶನ್ ಇತ್ಯಾದಿ ಕೆಲವೊಮದು ಸೌಲಭ್ಯಗಳಿಗೆ ತೊಂದರೆಯಾಗದಂತೆ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆಂದು ಹೇಳಲಾಗಿದೆ.

ಶ್ರೀಕರ್ ವಿರುದ್ಧ ಮಾದಕ ಪದಾರ್ಥ ಗಾಂಜಾ ಅಕ್ರಮ ಸಾಗಾಟ ಮತ್ತು ಮಾರಾಟ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಎರಡು ಮೊಕದ್ದಮೆಗಳು ದಾಖಲಾಗಿದ್ದು, ಇವುಗಳಲ್ಲಿ ಒಂದು ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ ಎಂದು ತಿಳಿದುಬಂದಿದೆ.

ಶಿರ್ವ ಸಮೀಪದ ಪದವು ನಿವಾಸಿಯಾಗಿರುವ ಶ್ರೀಕರ್ ವಿರುದ್ಧ ಉಡುಪಿ ನಗರ ಠಾಣೆಯ ಪೊಲೀಸರು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ 2013ರ ಮಾರ್ಚ್ 9ರಂದು ಮೊಕದ್ದಮೆ ದಾಖಲಿಸಿಕೊಂಡಿದ್ದರು. ಮಾರ್ಚ್ 10 ರಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಈ ಹಿನ್ನೆಲೆಯಲ್ಲಿ, ಅಂದಿನ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಡಾ.ಬೋರಲಿಂಗಯ್ಯ ಎಂ.ಬಿ ಅವರು ಶ್ರೀಕರ್ ಅವರನ್ನು ಕರ್ತವ್ಯದಿಂದ ಅಮಾನತುಪಡಿಸಿ ಆದೇಶ ಹೊರಡಿಸಿದ್ದರು.

dr.boralingaiah ips

* ಡಾ.ಬೋರಲಿಂಗಯ್ಯ ಎಂ.ಬಿ., ಐಪಿಎಸ್

ಒಂದು ದಿನದ ನ್ಯಾಯಾಂಗ ಬಂಧನ ಅನುಭವಿಸಿದ ಬಳಿಕ ಜಾಮೀನು ಪಡೆದುಕೊಂಡು ಹೊರಗಡೆ ಬಮದ ಶ್ರೀಕರ, ಬಳಿಕ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ, ಮಾರ್ಚ್ 9ರಂದು ಉಡುಪಿ ನಗರ ಠಾಣೆಯ ಪೊಲೀಸರು ತನ್ನ ವಿರುದ್ಧ ಸುಳ್ಳು ಕೇಸು ದಾಖಲಿಸಿ, ಅಕ್ರಮ ಬಂಧನದಲ್ಲಿರಿಸಿ ದೈಹಿಕ ದೌರ್ಜನ್ಯ ನಡೆಸಿದರೆಂದು ಪೊಲೀಸರ ವಿರುದ್ಧವೇ ನ್ಯಾಯಾಲಯದ ಮೂಲಕ ಖಾಸಗಿ ಕೇಸು ದಾಖಲಿಸಿಕೊಂಡು ಪೊಲೀಸರಿಗೆ ಸಡ್ಡು ಹೊಡೆದ ಪ್ರಸಂಗವೂ ನಡೆದಿತ್ತು.

ಉಡುಪಿ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಲಿಂಗರಾಜು, ಎಎಸ್ಐಗಳಾದ ನರಸಿಂಹ ಶೆಟ್ಟಿ, ರೊಝಾರಿಯೊ ಡಿಸೋಜ, ಹೆಡ್ ಕಾನ್ಸ್ ಟೇಬಲ್ ಗಳಾದ ಸುಕುಮಾರ ಶೆಟ್ಟಿ, ಡೋಲ್ಫಿನ್, ಕಾನ್ಸ್ ಟೇಬಲ್ ಗಳಾದ ಸದಾನಂದ ಹಾಗೂ ಮಂಜುನಾಥ ಎಂಬವರು ತನ್ನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈಯ್ದು, ದಲಿತ ಜಾತಿ ನಿಂದನೆ ಮಾಡಿದ್ದಾರೆ ಎಂದು ಶ್ರೀಕರ ದೂರು ನೀಡಿದ್ದರು.

ಶ್ರೀಕರ್ ಅವರ ಈ ದೂರಿನಂತೆ, ನ್ಯಾಯಾಲಯದ ನಿರ್ದೇಶನದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಉಡುಪಿ ನಗರ ಠಾಣೆಯ ಪೊಲೀಸರ ವಿರುದ್ಧವೇ ಐಪಿಸಿ ಕಲಂ 323, 324, 504, 34 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲಾಗಿತ್ತು.

ಮಾ.9 ರಂದು ಸಂಜೆ ಗಂಟೆ 6 ರಿಂದ ರಾತ್ರಿ ಗಂಟೆ 10 ರ ವರೆಗೆ ಬ್ರಹ್ಮಾವರ ಾಕಾಶವಾಣಿ ಬಳಿ ಕರ್ತವ್ಯ ನಿರ್ವಹಿಸಿದ್ದ ಡಿಎಆರ್ ಪಿಸಿ ಶ್ರೀಕರ್, ಬಳಿಕ ಮನೆಗೆ ಹೋಗುವ ದಾರಿಯಲ್ಲಿ ಉಡುಪಿ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮಿತ್ರರೊಬ್ಬರು ಬೈಕ್ ತೆಗೆದುಕೊಂಡು ಬರುವುದಾಗಿ ತಿಳಿಸಿದ ಕಾರಣ ಕಾಯುತ್ತಿದ್ದ ನಿಂತಿದ್ದರು ಎನ್ನಲಾಗಿದೆ.

ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಉಡುಪಿ ನಗರ ಪೊಲೀಸ್ ಠಾಣೆಯ ರಾತ್ರಿ ಪಾಳಿಯ ಇಬ್ಬರು ಪೊಲೀಸ್ ಸಿಬ್ಬಂದಿಗಳಿಗೂ, ಶ್ರೀಕರ್ ಗೂ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ. ಬಳಿಕ, ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ಬಂದ ನಗರ ಠಾಣೆಯ ಇತರ ಸಿಬ್ಬಂದಿಗಳು ಶ್ರೀಕರ್ ರನ್ನು ಠಾಣೆಗೆ ಎಳೆದೊಯ್ದು ಲಾಕಪ್ ಗೆ ಹಾಕಿದ್ದೂ ಅಲ್ಲದೇ, ಧರಿಸಿದ್ದ ಬಟ್ಟೆಗಳನ್ನು ತೆಗೆಸಿ ಅರೆ ನಗ್ನ ಸ್ಥಿತಿಯಲ್ಲಿ ಗಂಭೀರವಾಗಿ ಹಲ್ಲೆ ನಡೆಸಿ ಗಾಯಗೊಳಿಸಿದ್ದರು ಎಂದು ಆರೋಪಿಸಲಾಗಿತ್ತು.

srikar dar pc-2

* ಶ್ರೀಕರ್

 

 

 

 

Leave a Reply

Your email address will not be published. Required fields are marked *