Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ಅಪರಿಚಿತ ಯುವಕನ ಶವ ಪತ್ತೆ: ಕೊಲೆ ಶಂಕೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ನಾವುಂದ ಪೆಟ್ರೋಲ್ ಬಂಕ್ ಬಳಿ ಇಂದು ರಾತ್ರಿ 1 ಗಂಟೆಗೆ ಅಂದಾಜು 22 ವರ್ಷ ಪ್ರಾಯದ ಯುವಕನೋರ್ವನ ಮೃತದೇಹ ರಕ್ತದ ಮಡುವಿನಲ್ಲಿ ಬಿದ್ದುಕೊಂಡಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಮೃತ ಯುವಕನ ಹೆಸರು ಇತ್ಯಾದಿ ಯಾವುದೇ ವಿವರಗಳೂ ಇದುವರೆಗೆ ಲಭ್ಯವಾಗಿಲ್ಲ. ಮೃತನ ತಲೆ ತೀವ್ರವಾಗಿ ಜಖಂಗೊಂಡಿದೆ. ಮಾತ್ರವಲ್ಲ, ಕಾಲು ಮತ್ತು ದೇಹದ ಇತರ ಭಾಗಗಳಲ್ಲಿ ಗಾಯಗಳಿವೆ. ಸ್ಥಳದಲ್ಲಿ ರಕ್ತ ಕೋಡಿಯಂತೆ ಹರಿದಿದೆ.

ಯುವಕನ ಮೃತದೇಹ ಬಿದ್ದಿರುವ ಸ್ಥಳದಿಂದ 25 ಅಡಿಯಷ್ಟು ಮುಂಭಾಗದಲ್ಲಿ ಎಂಎಚ್ 12 ಎಚ್ ಡಿ 5777 ನಂಬ್ರದ ಲಾರಿಯೊಂದು ನಿಂತಿದ್ದು, ಲಾರಿಗೆ ಸಂಬಂಧಿಸಿದ ಯಾರೊಬ್ಬರೂ ಸ್ಥಳದಲ್ಲಿ ಇಲ್ಲದೇ ಇರುವ ಕಾರಣ, ಈ ಲರಿಗೂ, ಮೃತ ಯುವಕನಿಗೂ ಸಂಬಂಧವಿರಬಹುದೆಂದು ಊಹಿಸಲಾಗಿದೆ.

ಮೃತ ಯುವಕ ಲಾರಿಯ ಚಾಲಕ ಅಥವಾ ಕ್ಲೀನರ್ ಆಗಿರುವ ಸಾಧ್ಯತೆ ಇದೆ. ಈತನನ್ನು ಲಾರಿಯಲ್ಲಿದ್ದವರು ಇಲ್ಲವೇ ಇತರ ಯಾರಾದರೂ ಹೊಡೆದು ಕೊಲೆ ನಡೆಸಿರಬಹುದೆಂದು ಸಂಶಯಿಸಲಾಗಿದೆ.

ಈ ಬಗ್ಗೆ ನಾವುಂದ ನಿವಾಸಿ ಇಸ್ಮಾಯಿಲ್ ನೀಡಿದ ದೂರಿನಂತೆ ಬೈಂದೂರು ಆಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ.

 

 

 

 

Leave a Reply

Your email address will not be published. Required fields are marked *