Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಎಪ್ರಿಲ್ 12: ಅರುವ ಕೊರಗಪ್ಪ ಶೆಟ್ಟಿ ಪ್ರತಿಷ್ಠಾನದ ವಾರ್ಷಿಕೋತ್ಸವ

ಬೆಳ್ತಂಗಡಿ: ಶ್ರೀ ಅರುವ ಕೊರಗಪ್ಪ ಶೆಟ್ಟಿ ಸ್ಮಾರಕ ಪ್ರತಿಷ್ಠಾನ (ರಿ) ಇದರ 8ನೇ ವಾರ್ಷಿಕೋತ್ಸವವು ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎಪ್ರಿಲ್ 12ರಂದು ಸಂಜೆ 3 ಗಂಟೆಗೆ ಅರುವ ಗುರು ಸಭಾ ಭವನದಲ್ಲಿ ನಡೆಯಲಿದೆ.

ಖ್ಯಾತ ಯಕ್ಷಗಾನ ಸ್ತ್ರೀ ಪಾತ್ರಧಾರಿ ಪುಂಡರೀಕಾಕ್ಷ ಉಪಾಧ್ಯಾಯ, ಖ್ಯಾತ ಯಕ್ಷಗಾನ ಕಲಾವಿದ ಪುತ್ತೂರು ಶ್ರೀಧರ ಭಂಡಾರಿ, ಖ್ಯಾತ ವೈದ್ಯ ಡಾ.ಎನ್.ಎಂ.ತುಳುಪುಲೆ ಹಾಗೂ ಖ್ಯಾತ ವಾಸ್ತು ಶಿಲ್ಪಿ ಶ್ರೀಧರ ಆಚಾರ್ಯ ಪಿಲ್ಯ ಇವರಿಗೆ ‘ಅರುವ ಪ್ರಶಸ್ತಿ’ ಪ್ರಧಾನ ಸಮಾರಂಭ ನಡೆಯಲಿದೆ.

ಒಡಿಯೂರು ಸ್ವಾಮೀಜಿ, ಬಿ.ರಮಾನಾಥ ರೈ, ನಳಿನ್ ಕುಮಾರ್ ರೈ ಕಟೀಲ್, ವಸಂತ ಬಂಗೇರ, ಶ್ರೀಮತಿ ಭಾರತಿ ರವಿ ಬಂಗೇರ, ರಘುವೀರ ಎ.ಶೆಟ್ಟಿ ನಲ್ಲೂರು, ವರ್ಕಾಡಿ ತಾರಾನಾಥ ಬಲ್ಯಾಯ ಹಾಗೂ ಶ್ರೀಮತಿ ಸುನಂದ ಶೆಟ್ಟಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಾರ್ವಜನಿಕ ಉಚಿತ ಶ್ರೀ ಶನೀಶ್ವರ ಪೂಜೆ ಮತ್ತು ಅನ್ನ ಸಂತರ್ಪಣೆ ನಡೆಯಲಿದ್ದು, ತುಳು ನಾಟಕ ಪ್ರದರ್ಶನಗೊಳ್ಳಲಿದೆ.

 

 

One Comment

 1. tkgp4951@gmail.com'

  T.K.Gangadhar Pattar

  June 17, 2017 at 7:47 pm

  ಬಹುಮುಖ ಪ್ರತಿಭೆಯ ಯಕ್ಷ ಕಲಾವಿದ ಬರಹಗಾರ
  ವಿದ್ವಾನ್ ತಾರಾನಾಥ ವರ್ಕಾಡಿ
  *******************************************************
  ಕನ್ನಡಾಂಬೆಗೆ ದಿವ್ಯ ವರ “ಪ್ರಭಾವಳಿ”ಯಂತೆ/ ರಂಜಿಪ “ಕರಾವಳಿ”ಯು ರಮಣೀಯ ರಾಶಿ// ಜಿಲ್ಲೆ “ದಕ್ಷಿಣ ಕನ್ನಡ”ವು ಸ್ವರ್ಗಕೂ ಮಿಗಿಲು/ ಸಿರಿ ನಿಸರ್ಗದ ತವರು ಕಮನೀಯ ಕಾಶಿ//1//

  ಹೊಳೆ ಘಟ್ಟ ನಭ ಬೆಟ್ಟ ಭರತ ಇಳಿತದ ಶರಧಿ/ ಅಮೃತಫಲ ಕಲ್ಪತರು ಕರುನಾಡ ಕೀರ್ತಿ// ನೃತ್ಯ ನಾಟ್ಯಾಭಿನಯ ಗೀತ ನವರಸ ಕಾವ್ಯ/ ಹೆಜ್ಜೆ-ಗೆಜ್ಜೆ ಸುನಾದ ಗಂಧರ್ವ ಸ್ಫೂರ್ತಿ//2//

  ಘಟ ಮೃದಂಗದ ತಾಳ ಚಂಡೆ ಮದ್ದಳೆ ಮೇಳ/ ತಕಿಟ ಧೀಂಕಿಟ ತನನ ಥಕ ಥೈಯ ತಾನ// ವೇಷಭೂಷಣ ಮುಕುಟ ಭುಜಕಿರೀಟದ ಝನನ/ ವಿಶ್ವ ಖ್ಯಾತಿಯ ಶ್ರೇಷ್ಠ ಕಲೆ “ಯಕ್ಷಗಾನ”//3//

  ಈ ನೆಲದ ಕುಡಿಯಾಗಿ ಯಕ್ಷ ಪ್ರತಿನಿಧಿಯಾಗಿ/ ಬೆಳೆದ “ತಾರಾನಾಥ ವರ್ಕಾಡಿ”ಯವರು// “ಧರ್ಮಸ್ಥಳ”ವೇ ಬೆಳಕು “ರಂಗಸ್ಥಳ”ವೇ ಬದುಕು/ ಹುಟ್ಟು ವಿದ್ವತ್ ಪ್ರತಿಭೆ ವಾಙ್ಮಯವೆ ಉಸಿರು//4//

  “ಅರ್ಥಗಾರಿಕೆ” ನಿಪುಣ “ವೇಷಗಾರಿಕೆ” ಜಾಣ/ “ತುಳು”-“ಕನ್ನಡ”ದಿ ಪ್ರೌಢ ಪಂಡಿತ ಪ್ರವೀಣ// ವೇದ ಆಗಮ ಶಾಸ್ತ್ರ ಉಪನಿಷತ್ ಜ್ಞಾನಗಣಿ/ “ಗ್ರಂಥನಿಧಿ” ಚೈತನ್ಯ ಧೀಶಕ್ತಿ ತಾಣ//5//

  ಹಿರಿ-ಕಿರಿಯರೆಲ್ಲರೂ ಮೆಚ್ಚುವಂತಹ ಶೈಲಿ/ ಕವನ ಲೇಖನ ಕಥನ ಪತ್ರಿಕಾ ಬರಹ// ಜನಪ್ರಿಯ “ಪ್ರಸಂಗ”ಗಳು “ಅಡಕಮುದ್ರಿಕೆ” ಸೃಷ್ಟಿ/ ಶ್ರೀ ಕಲಾರಾಧನೆಯೆ ಅನುದಿನದ ಮಣಿಹ//6//

  ಚೌಕಿಯಲಿ ಪೆಟ್ಟಿಗೆಗೆ ತಲೆಕೊಟ್ಟು ಮಲಗಿಯೂ/ ಒಡಲಾಳ ತತ್ವ ಚಿಂತನೆ ಮೊರೆವ ಕಡಲು// ಆ “ಸದಾಶಿವಗೆ ಅದೇ ಧ್ಯಾನ”ವೆನ್ನುವ ಹಾಗೆ/ ಜಿಹ್ವೆಯಲಿ ಅನವರತ ಪುಟಿವ ಪದ ಸಾಲು//7//

  “ಒಂದೊಂದು ನದಿಗೂ ಒಂದೊಂದು ಕಥೆ”-ಇತಿಹಾಸ-/ ಜನಪದ-ಪುರಾಣಗಳ ದೃಷ್ಟಾಂತ ಸಹಿತ// ಇನಿದು “ಕಬ್ಬಿನ ಕೋಲು” ಮಧುರ “ಮೊಗ್ಗಿನ ಜೇನು”/ ರಸದೌತಣದಿ ಜನರ ತಣಿಸುವರು ನಿರುತ//8//

  “ಗದ್ಯ” ಹೃದಯಂಗಮವು “ಪದ್ಯ” ಸುಮನೋಹರವು/ ನುಡಿ ಸುಗಂಧಕೆ ಸೂಸುವುದು ಮಂದಹಾಸ// ಬಹು ವಿಭಿನ್ನ ವಿಶಿಷ್ಟ ಸುಭಗ ಸುಲಲಿತ ರಚನೆ/ ರಸಿಕರೆದೆ ಮಂಥನಕೆ ನೀಡುವುದು ಗ್ರಾಸ//9//

  “ಯಕ್ಷ ಪ್ರಭೆ”ಯಲಿ ನಿಮ್ಮ “ವ್ಯಕ್ತಿತ್ವ” ವಿಕಸಿಸಲಿ/ ಶುದ್ಧ ಸಾಧನೆ ಪಥದಿ ಸಿದ್ಧಿಸಲಿ ತಪವು// ಆಯುರಾರೋಗ್ಯ ಸಿರಿ ಸೌಖ್ಯ ಸಮೃದ್ಧಿಸಲಿ/ ನಟರಾಜ ಕರುಣಿಸಲಿ ಬಾಳಿನಲಿ ಗೆಲುವು//10//

  -ಟಿ.ಕೆ.ಗಂಗಾಧರ ಪತ್ತಾರ
  **********************************************************

Leave a Reply

Your email address will not be published. Required fields are marked *