Realtime blog statisticsweb statistics
udupibits.in
Breaking News
ಮಾಹಿತಿ ಹಕ್ಕು ಪ್ರಕರಣ: ವಿಚಾರಣೆಗೆ ಖುದ್ದು ಹಾಜರಾಗಲು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಕರ್ನಾಟಕ ಮಾಹಿತಿ ಆಯೋಗ ಆದೇಶ.

ಹೆರಿಗೆ ಬಳಿಕ ಚಿಕಿತ್ಸೆಯಲ್ಲಿದ್ದ ಯುವತಿ ಮೃತ್ಯು

ಉಪ್ಪಳ(ಕಾಸರಗೋಡು): ಹೆರಿಗೆಯ ಬಳಿಕ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಉಪ್ಪಳ ಬಳಿಯ ಬಾಣಂತಿ ಯುವತಿ ಮಂಗಳೂರು ದೇರಳಕಟ್ಟೆಯ ಆಸ್ಪತ್ರೆಯಲ್ಲಿ ಮೃತಳಾದ ಘಟನೆ ನಡೆದಿದೆ.

ಉಪ್ಪಳ ಬಳಿಯ ಸುಬ್ಬಯ್ಯಕಟ್ಟೆ ನಿವಾಸಿ ಮಾಧವ ಎಂಬವರ ಪತ್ನಿ ವಿಜಯಶ್ರೀ (30) ಮೃತ ದುರ್ದೈವಿ. ಇವರು 15 ದಿನಗಳ ಹಿಂದೆ ದೇರಳಕಟ್ಟೆ ಖಾಸಗೀ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯ ಬಳಿಕ ವಿಜಶ್ರೀಯವರ ಸ್ಥಿತಿ ತೀವ್ರ ಚಂತಾಜನಕವಾಗಿದ್ದುದರಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಎಪ್ರಿಲ್ 10ರಂದು ಮೃತರಾದರು.

ಮಗುವಿನ ಸ್ಥಿತಿ ನಿಯಂತ್ರಣದಲ್ಲಿದೆ. ಬೇಕೂರು ಎಸ್ ಸಿ ಕಾಲನಿ ನಿವಾಸಿ ಕರಿಯ ಎಂಬವರ ಪುತ್ರಿಯಾದ ವಿಜಯಶ್ರೀ ತಾಯಿ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ. ಮೃತ ಯುವತಿ ಸಿಪಿಎಂ ಬೇಕೂರು ಬ್ರಾಂಚ್ ಸಮಿತಿ ಸದಸ್ಯೆಯಾಗಿ ಸಕ್ರಿಯವಾಗಿದ್ದರು.

Leave a Reply

Your email address will not be published. Required fields are marked *