Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಡಿ.26-ಜ.1: ಪೆರಂಪಳ್ಳಿ ಟ್ರಿನಿಟಿ ಸ್ಕೂಲಲ್ಲಿ ಕಲ್ಯ ಾಣಪುರ ಮಿಲಾಗ್ರಿಸ್ ಕಾಲೇಜು ಎನ್.ಎಸ್.ಎಸ್.ಶಿಬಿರ

ಉಡುಪಿ: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರವು ಡಿ.26 ರಿಂದ ಜ.1 ರ ವರೆಗೆ ಶಿವಳ್ಳಿ ಗ್ರಾಮದ ಪೆರಂಪಳ್ಳಿಯ ಟ್ರಿನಿಟಿ ಸೆಂಟ್ರಲ್ ಸ್ಕೂಲ್ ನಲ್ಲಿ ನಡೆಯಲಿದೆ.
26 ರಂದು ಸಂಜೆ 4 ಗಂಟೆಗೆ ರೆ.ಫಾ.ರಿಚ್ಚರ್ಡ್ ಕ್ವಾಡ್ರಸ್ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ವೇ.ರೆ.ಫಾ.ಸ್ಟ್ಯಾನಿ ಬಿ.ಲೋಬೋ, ಡಾ.ನೇರಿ ಕರ್ನೆಲಿಯೋ, ರೆ.ಫಾ.ಜೆ.ಬಿ.ಸಿಕ್ವೇರಾ, ರೆ.ಫಾ.ಐವನ್ ರೋಡ್ರಿಗಸ್, ರಮೇಶ್ ನಾಯಕ್, ಅಶೋಕ್ ಕುಮಾರ್ ಹೆಗ್ಡೆ ಹಾಗೂ ಅಲೆನ್ ವಿನಯ್ ಲುವಿಸ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
27 ರಿಂದ 31 ರ ವರೆಗೆ ಪ್ರತಿದಿನ ಮಧ್ಯಾಹ್ನ 2 ರಿಂದ 3 ಗಂಟೆಯವರೆಗೆ ವಿವಿಧ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಶೈಕ್ಷಣಿಕ ಮಾಹಿತಿ ನೀಡಲಿದ್ದಾರೆ. ಶ್ರೀರಾಮ ದಿವಾಣ, ಪ್ರೊ.ಹಿಲ್ಡಾ ರೋಡ್ರಿಗಸ್, ಪ್ರೊ.ಮೆಲ್ವಿನ್ ಸಿ.ರೆಗೋ, ಪ್ರವೀಣ್ ಪಿಂಟೋ ಹಾಗೂ ಡಾ.ಆರ್.ಎನ್.ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ.
ಜ.1 ರಂದು ಬೆಳಗ್ಗೆ 11 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಡಾ.ನೇರಿ ಕರ್ನೆಲಿಯೋ, ಶ್ರೀಮತಿ ರೋಸಿ ಪಿಂಟೋ ಹಾಗೂ ರೆ.ಫಾ.ಜೆ.ಬಿ.ಸಿಕ್ವೇರಾ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

Leave a Reply

Your email address will not be published. Required fields are marked *