Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಅಣ್ಣನ ಕೊಲೆಗೈದ ತಮ್ಮನ ಬಂಧನ

ಉಡುಪಿ: ಕೊಡವೂರು ಗ್ರಾಮದ ಮಧ್ವನಗರದ ಕಂಬಳಕಟ್ಟ ಎಂಬಲ್ಲಿ ಅಣ್ಣ ಪ್ರಕಾಶ್ ಆಚಾರ್ಯ ಎಂಬವರನ್ನು ಕೊಲೆಗೈದ ತಮ್ಮ, ರಿಕ್ಷಾ ಚಾಲಕ ಉಮೇಶ್ ಆಚಾರ್ಯ (28)ನನ್ನು ಮಲ್ಪೆ ಪೊಲೀಸರು ಎಪ್ರಿಲ್ 20ರಂದು ಸಂಜೆ ಹೆಬ್ರಿಯಲ್ಲಿ ಸೆರೆ ಹಿಡಿಯುವಲ್ಲಿ ಯಶಶ್ವಿಯಾಗಿದ್ದಾರೆ.

ಈ ನಡುವೆ, ಪ್ರಕಾಶ್ ಆಚಾರ್ಯರ ಮೇಲೆ ಉಮೇಶ್ ಆಚಾರ್ಯ ಹಲ್ಲೆ ನಡೆಸುವಾಗ ಮನೆ ಮಂದಿ ಯಾಕೆ ತಡೆಯುವ ಕೆಲಸ ಮಾಡಿಲ್ಲ ಎಂಬ ಗಂಭೀರ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಹಲ್ಲೆ ನಡೆಸಿದ ದಿನವೇ ರಾತ್ರಿ ಪ್ರಕಾಶ್ ಮೃತಪಟ್ಟಿರುವುದಾಗಿಯೂ ಹೇಳಲಾಗಿದೆ.

ಕೊಲೆಗೀಡಾಗಿರುವ ಪ್ರಕಾಶ್ ಆಚಾರ್ಯ ವರ್ಷಗಳ ಹಿಂದೆ ಅಜೆಕಾರಿನಲ್ಲಿ ನಡೆದ ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದು, ಮನೆಯಲ್ಲಿ ಮನೆಯವರಿಗೆ ಭಾರೀ ಕಿರುಕುಳ ನೀಡುತ್ತಿದ್ದ ಎಂಬ ಮಾತುಗಳು ಸ್ಥಳೀಯವಾಗಿ ಕೇಳಿಬಂದಿದೆ. ಈತನ ಕಿರುಕುಳಕ್ಕೆ ಮನೆಯವರೂ ರೋಸಿ ಹೋಗಿದ್ದರು ಎಂದು ತಿಳಿದುಬಂದಿದೆ.

ಮನೆಯವರ ಅಧಿಕೃತ ಹೇಳಿಕೆಯಂತೆ, ಪೊಲೀಸರು ದಾಖಲಿಸಿದ ಕಡತಗಳ ಪ್ರಕಾರ, ಅಣ್ಣ ಪ್ರಕಾಶ್ ಆಚಾರ್ಯ ಕಳೆದ ಮೂರು ವರ್ಷಗಳಿಂದ ಜಾಗದಲ್ಲಿ ಮನೆ ಕಟ್ಟಿಸುತ್ತಿದ್ದು, ಆರ್ಥಿಕ ಅಡಚಣೆಯಿಂದಾಗಿ ಮನೆ ಕಾಮಗಾರಿ ಪೂರ್ತಿಗೊಳಿಸಲು ಆಗಿರಲಿಲ್ಲ. ಹಣದ ಅಡಚಣೆ ಮತ್ತು ಅವಶ್ಯಕತೆಯ ಹಿನ್ನೆಲೆಯಲ್ಲಿ ಅಣ್ಣ – ತಮ್ಮನ ನಡುವೆ ಆಗಾಗ ಜಗಳವಾಗುತ್ತಿತ್ತು. ಎಪ್ರಿಲ್ 19ರಂದು ರಾತ್ರಿ 10 ಗಂಟೆಗೆ ಇವರೊಳಗಿನ ಜಗಳ ವಿಕೋಪಕ್ಕೆ ತಿರುಗಿ, ಅಂತಿಮವಾಗಿ ತಮ್ಮ, ಮನೆಯೊಳಗಿನಿಂದ ಒಲೆಗೆ ಹಾಕುವ ಕಟ್ಟಿಗೆಯನ್ನು ತಂದು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳುತ್ತಾ ಅಣ್ಣನ ಮೇಲೆ ಹಲ್ಲೆ ನಡೆಸಿ ಮಾರಣಾಂತಿಕವಾಗಿ ಗಾಯಗೊಳಿಸಿದ್ದಾನೆ.

ಕೈ, ಕಾಲು ಮತ್ತು ತಲೆಗೆ ಗಂಭೀರ ಏಟು ಬಿದ್ದ ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಪ್ರಕಾಶ್ ಆಚಾರ್ಯರನ್ನು ರಾತ್ರಿಯೇ ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಗೆ ಸಾಗಿಸಿ ಒಳರೋಗಿಯಾಗಿ ದಾಖಲಿಸಲಾಯಿತು. ಆದರೆ, ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ, ಪ್ರಕಾಶ್ ಅವರು ಎಪ್ರಿಲ್ 20ರಂದು ಮಧ್ಯಾಹ್ನ 1 ಗಂಟೆಗೆ ಮೃತಪಟ್ಟರು.

ಪ್ರಕಾಶ್ ಆಚಾರ್ಯರು ಮನೆಯಲ್ಲಿ ಪತ್ನಿ, ತಮ್ಮ, ಮಗಳು ಹಾಗೂ ತಾಯಿಯೊಂದಿಗೆ ವಾಸವಿದ್ದರು. ಪ್ರಕಾಶ್ ಆಚಾರ್ಯರ ಕೊಲೆ ಪ್ರಕರಣದ ಬಗ್ಗೆ ಇವರ ಪತ್ನಿ ಉಮಾಶ್ರೀ ನೀಡಿದ ದೂರಿನಂತೆ ಉಮೇಶ್ ಆಚಾರ್ಯನ ವಿರುದ್ಧ ಮಲ್ಪೆ ಠಾಣೆಯ ಪೊಲೀಸರು ಕೊಲೆ ಮೊಕದ್ದಮೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *