Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಚಿಣ್ಣರ ಮೇಳದಲ್ಲಿ ‘ಬನದಮ್ಮ’ ಪ್ರದರ್ಶನ

ಕುಂಬಳೆ(ಕಾಸರಗೋಡು): ಮಂಗಳೂರಿನ ಪಥ ಮತ್ತು ಪಂಜಿಮೊಗರುವಿನ ಭಗತ್ ಸಿಂಗ್ ಮೆಮೋರಿಯಲ್ ಟ್ರಸ್ಟ್ ಜಂಟಿಯಾಗಿ ಸ್ಥಳೀಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಎರಡು ದಿನಗಳ ಚಿಣ್ಣರ ಮೇಳವನ್ನು ಆಯೋಜಿಸಿತ್ತು.

ಮೇಳದ ಕೊನೆಯ ದಿನ ‘ಪಥ’ ತಂಡದ ಕಲಾವಿದರು, ನೀನಾಸಂ ಪದವೀಧರ ಮುರಹರಿ ಪಿ. ನಿರ್ದೇಶನದಲ್ಲಿ ‘ಬನದಮ್ಮ’ ಎಂಬ ಪೌರಾಣಿಕ ನಾಟಕವನ್ನು ಪ್ರದರ್ಶಿಸಿದರು. ನಾಟಕ ಜನಮೆಚ್ಚುಗೆಗೆ ಪಾತ್ರವಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದನ್ನು ಪ್ರಾಯೋಜಿಸಿತ್ತು.

ಕಲಾವಿದರಾಗಿ ಕಿರಣ್ ಕಲಾಂಜಲಿ, ಶಶಿಧರ ಎದುರ್ತೋಡು, ಶರತ್ ಕುಂಬಳೆ, ಪುರುಷೋತ್ತಮ ಭಟ್ ಕೆ., ಅಕ್ಷತಾ ಪಿ. ಭಟ್, ಸುರೇಶ್ ಬಟ್ಟೇಕಳ ಹಾಗೂ ಬಾಲ ಕಲಾವಿದರಾದ ಗಾನವೀ, ಕೀರ್ತನಾ, ಸುಮ, ಸುನಿಲ್, ರವಿ, ರಾಘವೇಂದ್ರ, ರೋಹಿತ್, ವಿದ್ಯಾ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *