Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಉದ್ಯಾವರದಿಂದ ಕಾಣೆಯಾಗಿದ್ದು ತಂದೆಯೋ, ಮಗಳೋ…?: ಎಸ್ಪಿ ಅಣ್ಣಾಮಲೈ ಅವರೇ ಹೇಳಬೇಕು !

”ಕಾಪು: ಪಿರ್ಯಾದಿ: ರೋಬರ್ಟ್ ಫೆರ್ನಾಂಡಿಸ್ (66) ತಂದೆ: ದಿ. ಬೆಸ್ತಮ್ ಫರ್ನಾಂಡಿಸ್ ವಾಸ: ಕಡವಿನ ಬಾಗಿಲು ಉದ್ಯಾವರ ರವರು ದಿನಾಂಕ 06.04.2015 ರಂದು ಸುಮಾರು 13.00 ಗಂಟೆಗೆ ಹಲ್ಲು ನೋವಿದೆ ಆಸ್ಪತ್ರೆಗೆ ಹೋಗಿ ಹಲ್ಲು ಕೀಳಿಸಿಕೊಂಡು ಬರುವುದಾಗಿ ತನ್ನ ತಾಯಿಯ ಬಳಿ ಹೇಳಿ ಮನೆಯಾದ ಉದ್ಯಾವರ ಗ್ರಾಮದ ಕಡವಿನ ಬಾಗಿಲು ಎಂಬಲಿಂದ ಹೋಗಿದ್ದು ಈ ತನಕ ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಆಸ್ಪತ್ರೆಯಲ್ಲಿ ಹೋಗಿ ವಿಚಾರಿಸಿದ್ದು, ಸಂಬಂದಿಕರ ಮನೆಯಲ್ಲಿ ಕೂಡಾ ವಿಚಾರಿಸಿದಲ್ಲಿಯೂ ಪಿರ್ಯಾದಿಯ ಮಗಳ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ. ಈ ಬಗ್ಗೆ ಕಾಪು: ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 91/2015 ಕಲಂ ಹುಡುಗಿ ಕಾಣೆ ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.”

# ಇದು, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ನೇರ ಉಸ್ತುವಾರಿಯಲ್ಲಿರುವ ಉಡುಪಿ ಜಿಲ್ಲಾ ಪೊಲೀಸ್ ಬ್ಲಾಗಿನಲ್ಲಿರುವ ಒಂದು ಪ್ರಕರಣದ ವಿವರ. ಇದನ್ನು ಓದಿ ಹೇಳಲು ಎಸ್ಪಿ ಅಣ್ಣಾಮಲೈ ಅವರೇ ಬರಬೇಕು.

ಉಡುಪಿ ಜಿಲ್ಲೆಗೆ ಅಣ್ಣಾಮಲೈ ಅವರು ಎಸ್ಪಿಯಾಗಿ ಬಂದ ಬಳಿಕ ಉಡುಪಿ ಜಿಲ್ಲಾ ಪೊಲೀಸ್ ಬ್ಲೋಗ್ ನ ಪರಿಸ್ಥಿತಿ ಶೋಚನೀಯವಾಗಿದೆ. ಮೊದಲೇ ಈ ಬ್ಲೋಗ್ ನ ಸ್ಥಿತಿ ಉತ್ತಮವಾಗಿರಲಿಲ್ಲ. ಯಾವ ವಿವರಗಳನ್ನು ಅಗತ್ಯ ನೀಡಬೇಕೋ ಆ ವಿವರಗಳನ್ನು ನೀಡದೆಯೇ, ಅಗತ್ಯವಿಲ್ಲದ ವಿವರಗಳನ್ನು ನೀಡುವುದು ಈ ಹಿಂದಿನಿಂದಲೂ ಪೊಲೀಸ್ ಬ್ಲೋಗಿನ ವಿಶೇಷತೆಯಾಗಿತ್ತು.

ಕೆಲವೊಮ್ಮೆ ಕೆಲವು ಪ್ರಕರಣಗಳ ಬಗ್ಗೆ ಇದರಲ್ಲಿ ಯಾವುದೇ ಮಾಹಿತಿಯೇ ಇರುವುದಿಲ್ಲ. ಯಾವುದಾದರೂ ಪ್ರಕರಣದ ಮಾಹಿತಿ ಇಲ್ಲ ಎಂದಾದರೆ, ಆ ಪ್ರಕರಣಕ್ಕೆ ಸಂಬಂಧಿಸಿದವರು ಎಸ್ಪಿ ಕಚೇರಿಯಲ್ಲಿ ಅಧಿಕೃತರೊಂದಿಗೆ ಡೀಲಿಂಗ್ ನಡೆಸಿದ್ದಾರೆ ಎಂದೇ ಅರ್ಥ.

ಎಸ್ಪಿ ಅಣ್ಣಾಮಲೈ ಬಂದ ಮೇಲೆ ಈ ಬ್ಲೋಗ್ ನ್ನು ಹೇಳುವವರು, ಕೇಳುವವರು ಇಲ್ಲದಂತಾಗಿದ್ದಾರೆ. ಅಣ್ಣಾಮಲೈ ಯವರಿಗೆ ಪ್ರಚಾರ ಸಿಗುವುದು ಬ್ಲೋಗಿನಿಂದ ಅಲ್ಲ. ಹಾಗಾಗಿಯೇ ಇರಲೂಬಹುದು, ಅವರಿಗೆ ಈ ಬ್ಲೋಗಿನ ಬಗ್ಗೆ ಕನಿಷ್ಟ ಕಾಳಜಿಯೂ ಇಲ್ಲ.

ಈ ಮೇಲಿನ ವರದಿಯನ್ನು ಒಮ್ಮೆ ಓದಿ. ಇದೊಂದು ಕೇವಲ ಉದಾಹರಣೆ ಮಾತ್ರ. ಈ ವರದಿ ಅಥವಾ ವರದಿಯ ಆರಂಭದ ಮಾಹಿತಿ ಪ್ರಕಾರ, ಉದ್ಯಾವರ ಗ್ರಾಮದ ಕಡವಿನ ಬಾಗಿಲು ನಿವಾಸಿ ರೋಬರ್ಟ್ ಫೆರ್ನಾಂಡಿಸ್ (66) ಎಂಬವರು ಮೇ 6ರಂದು ಮಧ್ಯಾಹ್ನ 1 ಗಂಟೆಗೆ ‘ಹಲ್ಲು ನೋವಿದೆ ಆಸ್ಪತ್ರೆಗೆ ಹೋಗಿ ಹಲ್ಲು ಕೀಳಿಸಿಕೊಂಡು ಬರುವುದಾಗಿ ತನ್ನ ತಾಯಿಯ ಬಳಿ ಹೇಳಿ ಮನೆಯಾದ ಉದ್ಯಾವರ ಗ್ರಾಮದ ಕಡವಿನ ಬಾಗಿಲು ಎಂಬಲಿಂದ ಹೋಗಿದ್ದು ಈ ತನಕ ಮನೆಗೆ ಬಂದಿರುವುದಿಲ್ಲ ಮತ್ತು ಹೀಗೆ ಬಾರದೆ ಕಾಣೆಯಾಗಿದ್ದಾರೆ.

ಮುಂದುವರಿದ ವಾಕ್ಯದ ಪ್ರಕಾರ, ರೋಬರ್ಟ್ ಫೆರ್ನಾಂಡಿಸ್ ಅವರ ಮಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲ. ತಂದೆ ಕಾಣೆಯಾದ ಬಗ್ಗೆ ದೂರು ಕೊಡಲು ಮಗಳು ಲಭ್ಯವಿಲ್ಲ. ಹಾಗಾಗಿ ಕಾಪು ಪೊಲೀಸರು ಹುಡುಗಿ ಕಾಣೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರಂತೆ !

ಎಸ್ಪಿ ಅಣ್ಣಾಮಲೈ ಅವರು ಇನ್ನಾದರೂ ಜಿಲ್ಲಾ ಪೊಲೀಸ್ ಇಲಾಕಖೆಯ ಘನತೆ, ಗೌರವವನ್ನು ಹೆಚ್ಚಿಸುವ ಪೊಲೀಸ್ ಬ್ಲೋಗ್ ಕಡೆಗೆ ಗಮನಹರಿಸಬೇಕಾಗಿದೆ. ಇಲ್ಲವಾದರೆ, ಇದೇ ಬ್ಲೋಗ್ ಪೊಲೀಸ್ ಇಲಾಖೆಯ ಮಾನವನ್ನು ಹರಾಜು ಹಾಕುವುದು ಗ್ಯಾರಂಟಿ. ಈ ಹಿಂದೆ ಒಂದೆರಡು ಬಾರಿ ಇದೇ ಬ್ಲೋಗಿನ ಬಗ್ಗೆ ವರದಿ ಮಾಡಲಾಗಿದೆ. ಮಾತ್ರವಲ್ಲ, ಒಂದೆರಡು ಬಾರಿ ಈ ಹಿಂದಿನ ಎಸ್ಪಿಯವರಲ್ಲಿ ಬ್ಲೋಗಿನ ದುರಂತ ವ್ಯವಸ್ಥೆಯ ಬಗ್ಗೆ ಗಮನ ಸೆಳೆಯಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.

ದೂರು ಕೊಟ್ಟವರನ್ನು ಸತ್ತವರೆಂದೂ, ಸತ್ತವರನ್ನು ದೂರು ಕೊಟ್ಟವರೆಂದೂ, ದೂರು ಕೊಟ್ಟವರನ್ನು ಕಾಣೆಯಾದವರೆಂದು ಬಿಂಬಿಸುವ ಪೊಲೀಸ್ ಬ್ಲೋಗ್ ನ್ನು ಈ ರೀತಿ ನಿರ್ಲಕ್ಷಿಸುವುದು ಎಷ್ಟು ಮಾತ್ರಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ಎಸ್ಪಿಯವರು ಈ ಕೂಡಲೇ ಬ್ಲೋಗಿಗೆ ಸುದ್ದಿ ಹಾಕುವವರಿಗೆ ಈ ಬಗ್ಗೆ ತರಬೇತಿ ಶಿಬಿರವನ್ನು ಏರ್ಪಡಿಸಬೇಕಾಗಿದೆ.

ಎಸ್ಪಿಯವರು ಅವಕಾಶ ನೀಡಿದರೆ, udupibits.in ವತಿಯಿಂದ ಉಚಿತವಾಗಿ ತರಬೇತಿ ನೀಡಲು ಸಂಸ್ಥೆ ಸಿದ್ದವಿದೆ. ಸಭೆ- ಸಮಾರಂಭ, ಉದ್ಘಾಟನೆ- ಸಮಾರೋಪ ಬೇಡ, ಆಮಂತ್ರಣ ಪತ್ರ ಮುದ್ರಿಸಬೇಕಾಗಿಲ್ಲ. ತರಬೇತಿಯ ಮದ್ಯೆ ಸಂಪನ್ಮೂಲ ವ್ಯಕ್ತಿಯೇ ಸ್ವಂತ ಹಣದಲ್ಲಿ ಚಾ ಕುಡಿಯುವರು. ಸಮಯಾವಕಾಶ ನಿಗದಿಪಡಿಸಿ ಆಹ್ವಾನಿಸಿದರೆ ಪೊಲೀಸ್ ಬ್ಲೋಗ್ ಗೆ ಸುದ್ಧಿ ಹಾಕುವವರಿಗೆ ಕಾರ್ಯಾಗಾರ ನಡೆಸಿಕೊಡಲು udupibits.in ಸಿದ್ದವಿದೆ ಎಂದು ಸಂಪಾದಕರಾದ ಶ್ರೀರಾಮ ದಿವಾಣ ತಿಳಿಸಿದ್ದಾರೆ.

Leave a Reply

Your email address will not be published. Required fields are marked *