Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ವನಜಾಕ್ಷಿ ಚಂಬ್ರಕಾನರವರ ‘ಮೌನಭಾವ’ ಕವನ ಸಂಕಲನ ಬಿಡುಗಡೆ

ಬದಿಯಡ್ಕ(ಕಾಸರಗೋಡು): ಗಡಿನಾಡು ಕಾಸರಗೋಡಿನ ಉದಯೋನ್ಮುಖ ಕವಯತ್ರಿ ವನಜಾಕ್ಷಿ ಪಿ.ಚಂಬ್ರಕಾನ ಅವರ ‘ಮೌನಭಾವ’ ಎಂಬ ಚೊಚ್ಚಲ ಕವನ ಸಂಕಲನದ ಬಿಡುಗಡೆ ಸಮಾರಂಭವು, ಬದಿಯಡ್ಕದ ಸಮತಾ ಸಾಹಿತ್ಯ ವೇದಿಕೆಯ ಆಶ್ರಯದಲ್ಲಿ ಸ್ಥಳೀಯ ನಿರಂತರ ಕಲಿಕಾ ಕೇಂದ್ರದಲ್ಲಿ ನಡೆಯಿತು.

ನಿವೃತ್ತ ಪ್ರಾಂಶುಪಾಲ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ಸೌಮ್ಯ ಪ್ರಸಾದ್ ಕೃತಿ ಪರಿಚಯಿಸಿದರು. ಕವಯತ್ರಿ ವನಜಾಕ್ಷಿ ಚಂಬ್ರಕಾನ ಪ್ರಸ್ತಾವನೆಗೈದರು.

ಶರ್ಮಿಳಾ ಬಜಕೂಡ್ಲು ಭಾವಗೀತೆ ಹಾಡಿದರು. ಹಿರಿಯ ಸಾಹಿತಿಗಳಾದ ಹರೀಶ್ ಪೆರ್ಲ, ರಾಧಾಕೃಷ್ಣ ಉಳಿಯತ್ತಡ್ಕ, ದಿವ್ಯಾಗಂಗಾ ಪಿ, ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ, ಮಣಿರಾಜ್ ವಾಂತಿಚ್ಚಾಲು, ಮಮತಾ ಬಜಕೂಡ್ಲು, ರಮೇಶ್ ಕುರೆಡ್ಕ, ರವಿಕಾಂತ ಕೇಸರಿ ಕಡಾರು ಮೊದಲಾದವರು ಉಪಸ್ಥಿತರಿದ್ದರು.

ಸುಂದರ ಬಾರಡ್ಕ ಸ್ವಾಗತಿಸಿದರು. ಸೌಮ್ಯ ಚಂಬ್ರಕಾನ ವಂದಿಸಿದರು. ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *