Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಮಣಿಪಾಲ್ ಪ್ರೆಸ್ ಮೆಷಿನ್ ಓಪರೇಟರ್ ನಾಪತ್ತೆ !

ಉಡುಪಿ: ಕೊಡವೂರು ಗ್ರಾಮದ ಮುಖ್ಯಪ್ರಾಣ ರಸ್ತೆಯ ಮಜಲು ನಿವಾಸಿ ನವೀನ ಕುಮಾರ್ ಶೆಟ್ಟಿ (30) ಎಂಬವರು ಮೇ 14ರಂದು ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟವರು ಮನೆಗೆ ಮರಳದೆ ನಾಪತ್ತೆಯಾಗಿದ್ದಾರೆ.

ಮಣಿಪಾಲದಲ್ಲಿರುವ ಯುನಿಟ್-5 ಪ್ರೆಸ್ ನಲ್ಲಿ ಮೆಷಿನ್ ಓಪರೇಟರ್ ಆಗಿ ಕೆಲಸ ಮಾಡುತ್ತಿದ್ದ ನವೀನ್ ಕುಮಾರ್ ಶೆಟ್ಟಿ ನಾಪತ್ತೆ ಪ್ರಕರಣದ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದೆ.

ಐಅಡಿ ಆರಿಂಚು ಎತ್ತರದ, ಕನ್ನಡ, ತುಳು, ಹಿಂದಿ ಭಾಷೆಗಳನ್ನು ಮಾತನಾಡುವ, ಬಿಳಿ ಮೈ ಬಣ್ಣದ ನವೀನ್ ಕುಮಾರ್ ಶೆಟ್ಟಿ, ಕಾಣೆಯಾದ ದಿನದಂದು ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಮತ್ತು ಕಂದು ಬಣ್ಣದ ಬಿಳಿ ಗೆರೆಯ ಚೆಕ್ಸ್ ಶರ್ಟ್ ಧರಿಸಿರುತ್ತಾರೆ.

ಕಾಣೆಯಾದವರ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಮಲ್ಪೆ ಪೊಲೀಸ್ ಠಾಣೆಯನ್ನು ಹಾಗೂ ದೂರವಾಣಿ ಸಂಖ್ಯೆ: 0820-2537999, 9480805447, ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿ, ಉಡುಪಿ ಇವರ ದೂರವಾಣಿ ಸಂಖ್ಯೆ: 0820-2520329, 9480805430 ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.

Leave a Reply

Your email address will not be published. Required fields are marked *