Realtime blog statisticsweb statistics
udupibits.in
Breaking News
ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಮರಣ ?

ಬಾಲಕಿಯ ಮಾನಭಂಗ ಯತ್ನ: ಬಾಲಕನ ಬಂಧನ !

ಬದಿಯಡ್ಕ(ಕಾಸರಗೋಡು): 14ರ ಹರೆಯದ ಬಾಲಕಿಯನ್ನು ತಡೆದು ನಿಲ್ಲಿಸಿ ಮಾನಭಂಗಕ್ಕೆ ಯತ್ನಿಸಿದ ಪ್ರಕರಣ ನಡೆದಿದ್ದು, ಈ ಸಂಬಂಧ 15ರ ಹರೆಯದ ಬಾಲಕನ ವಿರುದ್ಧ ಬದಿಯಡ್ಕ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಬಂಧಿಸಿದ್ದಾರೆ.

ಮಾನಭಂಗ ಯತ್ನಕ್ಕೆ ಒಳಗಾಗಿರುವಾಕೆ ದಲಿತ ವರ್ಗಕ್ಕೆ ಸೇರಿದ್ದು, ಬದಿಯಡ್ಕ ಪರಿಸರ ವ್ಯಾಪ್ತಿಯ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾಳೆ.  ಮೇ. 24ರಂದು ಚೆಮ್ನಾಡು ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿಷಯಕ್ಕೆ ಸಂಬಂಧಿಸಿ ತರಬೇತಿ ನಡೆದಿತ್ತು. ಅಲ್ಲಿಂದ ಮನೆಗೆ ತೆರಳುತ್ತಿದ್ದಾಗ ಬಾಲಕ ಬಾಲಕಿಯನ್ನು ಹಿಂಬಾಲಿಸಿಕೊಮಡು ಹೋಗಿ ಕೈಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದನೆಂದು ದೂರಲಾಗಿದೆ.

ವಿಷಯವನ್ನು ಬಾಲಕಿ ಮನೆಯವರಿಗೆ ತಿಳಿಸಿದ್ದು, ಮನೆಯವರು ಚೈಲ್ಡ್ ಲೈನ್ ಗೆ ದೂರು ನೀಡಿದ್ದರು. ಚೈಲ್ಡ್ ಲೈನ್ ಅಧಿಕೃತರು ಬದಿಯಡ್ಕ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಪೊಲೀಸರು ಬಾಲಕನ್ನು ಬಂಧಿಸಿದ್ದಾರೆ.

Leave a Reply

Your email address will not be published. Required fields are marked *