Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಐವರು ನಾಪತ್ತೆಯಾದ ಊರಿಂದ ಹೋಟೆಲ್ ಉದ್ಯಮಿ ನಾಪತ್ತೆ !

ಬದಿಯಡ್ಕ(ಕಾಸರಗೋಡು): ಎರಡು ವಾರಗಳ ಹಿಂದೆ 5 ಮಂದಿ ನಾಪತ್ತೆಯಾದ ಕುಂಬ್ಡಾಜೆ ಬಳಿಯ ಬಲೆಕ್ಕಳ ಬಳಿಯಿಂದ ಕಳೆದ ಕೆಲವು ದಿನಗಳ ಹಿಂದೆ ಮತ್ತೋರ್ವ ವ್ಯಕ್ತಿ ಕೂಡಾ ನಾಪತ್ತೆಯಾದ ಬಗ್ಗೆ ತಿಳಿದುಬಂದಿದೆ. ಸರಣಿ ನಾಪತ್ತೆಯಿಂದ ಗ್ರಾಮಸ್ಥರು ಭಯಗ್ರಸ್ಥರಾಗಿದ್ದಾರೆ.

ಬೆಳಿಂಜೆಯಲ್ಲಿ ಹೋಟೆಲ್ ವ್ಯಾಪಾರಿಯಾಗಿರುವ ಸ್ಥಳೀಯ ನಿವಾಸಿ ಚಂದ್ರಶೇಖರ ರೈ (45) ನಾಪತ್ತೆಯಾದವರು. ಈ ಬಗ್ಗೆ ಚಂದ್ರಶೇಖರ ರೈ ಯವರ ಪತ್ನಿ ಶಾರದಾ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಜೂನ್ 1ರಂದು ಬೆಳಿಗ್ಗೆ ಮನೆಯಿಂದ ಹೋಟೆಲಿಗೆಂದು ತೆರಳಿದ್ದ ರೈಗಳು, 11 ಗಂಟೆಯ ವೇಳೆ ಮನೆಗೆ ಮರಳಿದ್ದಾರೆ. ಮನೆಗೆ ಮರಳಿದ ಬಳಿಕ ಸ್ವಲ್ಪ ಹೊತ್ತಲ್ಲಿ ಮನೆಯಿಂದ ಹೊರಗೆ ಹೋದವರು ನಂತರ ಹಿಂತಿರುಗಿಲ್ಲವೆಂದು ಶಾರದಾ ದೂರಲ್ಲಿ ತಿಳಿಸಿದ್ದಾರೆ. ಜೊತೆಗೆ ಇವರ ಹೋಟೆಲ್ ನಲ್ಲಿ ಕಾರ್ಮಿಕೆಯಾಗಿದ್ದ ಅನಿತಾ ಹಾಗೂ ಮೂವರು ಮಕ್ಕಳೂ ನಾಪತ್ತೆಯಾಗಿದ್ದಾರೆಂದು ದೂರಲ್ಲಿ ತಿಳಿಸಲಾಗಿದೆ.

ಈ ನಡುವೆ, ನಾಪತ್ತೆಯಾಗಿರುವ ಅನಿತಾರನ್ನು ಫೋನ್ ಮೂಲಕ ಸಂಪರ್ಕಿಸಲು ಯತ್ನಿಸಿದ ಪೊಲೀಸರ ಕರೆಯನ್ನು ಸ್ವೀಕರಿಸಿದ ಅನಿತಾ, ತಾನು ಹಾಗೂ ಮಕ್ಕಳು ಮುಳ್ಳೇರಿಯಾದ ತನ್ನ ತಾಯಿ ಮನೆಯಲ್ಲಿರುವುದಾಗಿ ತಿಳಿಸಿದ್ದರಿಂದ ರೈಯವರ ನಾಪತ್ತೆಗೆ ಬೇರೆ ಕಾರಣಗಳೇನೆಂಬುದನ್ನು ತಿಳಿಯಲು ಪೊಲೀಸರು ಯತ್ನಿಸುತ್ತಿದ್ದಾರೆನ್ನಲಾಗಿದೆ.

ವಾರಗಳ ಹಿಂದೆ ಐವರು ನಾಪತ್ತೆಯಾದ ಬಲೆಕ್ಕಳದಿಂದ 3 ಕೀ.ಮೀ ದೂರದಲ್ಲಿ ಚಂದ್ರಶೇಖರ ರೈಯವರ ಮನೆ ಇರುವುದರಿಂದ, ಈ ನಾಪತ್ತೆ ಪ್ರಕರಣ ಕೂಡಾ ಕುತೂಹಲಕ್ಕೆ ಕಾರಣವಾಗಿದೆ.

ಬಲೆಕ್ಕಳದಲ್ಲಿ ನಾಪತ್ತೆಯಾದ ಐವರು ದ.ಕ ಜಿಲ್ಲಾ ವ್ಯಾಪ್ತಿ ಪ್ರದೇಶದಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲಿಯ ಸ್ಥಳೀಯ ಪೊಲೀಸರ ಸಹಾಯದಿಂದ ಅವರ ಪತ್ತೆ ಕಾರ್ಯಾಚರಣೆ ಮುಂದುವರಿಯುತ್ತಿದೆ. ರೈಯವರ ನಾಪತ್ತೆ ಪ್ರಕರಣದ ಹಿಂದೆ ವೈಯುಕ್ತಿಕ ಸಮಸ್ಯೆ ಇದೆ. ಅವನ್ನು ಬೇಧಿಸಿ ಶೀಘ್ರ ಸತ್ಯವನ್ನು ಹೊರಗೆಡಹಲಾಗುವುದು ಎಂದು ಬದಿಯಡ್ಕ ಠಾಣಾಧಿಕಾರಿ ದಾಮೋದರನ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *