Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಟಿಪ್ಪರ್ ಡಿಕ್ಕಿ: ಸ್ಕೂಟರ್ ಸವಾರ ಬಂಟ್ವಾಳ ನಿವಾಸಿ ಮೃತ್ಯು

ಉಡುಪಿ: ಕುಂದಾಪುರ ಶಾಸ್ತ್ರೀ ಸರ್ಕಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೆಎ 19 ಎಎ 8967 ನಂಬ್ರದ ಟಿಪ್ಪರ್ ಲಾರಿಯು ಕೆಎ 20 ಯು 2232 ನಂಬ್ರದ ಬೈಕಿಗೆ ಸ್ಕೂಟರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು, ರಸ್ತೆಗೆ ಬಿದ್ದ ಸ್ಕೂಟರ್ ಸವಾರರ ಹೊಟ್ಟೆ ಮತ್ತು ತೊಡೆಯ ಮೇಲೆ ಲಾರಿ ಸಂಚರಿಸಿಕೊಂಡು ಹೋದ ಪರಿಣಾಮವಾಗಿ ಸ್ಕೂಟರ್ ಸವಾರರಾದ ನರಸಿಂಹ ಐತಾಲ್ (45) ಎಂಬವರು ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾರೆ.

ಮೃತ ನರಸಿಮಹ ೈತಾಳ್ ಅವರು ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ದಾಸಬೈಲಿನವರಾಗಿದ್ದಾರೆ. ಟಿಪ್ಪರ್ ಲಾರಿಯು ತಲ್ಲೂರು ಕಡೆಯಿಂದ ಕೋಟೇಶ್ವರ ಕಡೆಗೆ ಸಂಚರಿಸುತ್ತಿದ್ದು, ಅದೇ ಕಡೆಗೆ ಸಂಚರಿಸುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತು.

ಈ ಬಗ್ಗೆ ಕಮಲಶಿಲೆಯ ನಾಗರಾಜ ಭಟ್ ನೀಡಿದ ದೂರಿನನ್ವಯ ಕುಂದಾಪುರ ಠಾಣೆಯ ಪೊಲೀಸರು ಟಿಪ್ಪರ್ ಲಾರಿ ಚಾಲಕನ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *