Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಹಿರಿಯ ಯಕ್ಷಗಾನ ಕಲಾವಿದ ಅಡೂರು ಶ್ರೀಧರ ರಾವ್ ಇನ್ನಿಲ್ಲ

ಉಡುಪಿ: ಹಿರಿಯ ಯಕ್ಷಗಾನ ಕಲಾವಿದರಾದ ಅಡೂರು ಶ್ರೀಧರ ರಾವ್ (78) ಇನ್ನಿಲ್ಲ. ಅಲ್ಪ ಕಾಲದಿಂದ ಅಸ್ವಸ್ಥರಾಗಿದ್ದ ಅವರು ಇಂದು ನಿಧನರಾದರು. ವೇಷಧಾರಿಯಾಗಿ, ಅರ್ಥಧಾರಿಯಾಗಿ, ಸಂಘಟಕರಾಗಿ ಪ್ರಸಿದ್ಧರಾಗಿರುವ ಇವರು ಕಾಸರಗೋಡಿನ ಅಡೂರಿನವರು.

ಅಡೂರು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಸಂಘದ ಮೂಲಕ ನೂರಾರು ಯಕ್ಷಗಾನ ಚಟುವಟಿಕೆಯನ್ನು ನಡೆಸಿದ ಶ್ರೀಧರ ರಾವ್ ಅವರು, ತೆಂಕುತಿಟ್ಟು ಯಕ್ಷಗಾನದ ಪಾರಂಪರಿಕ ಮುಖವರ್ಣಿಕೆಯ ತಯಾರಿಯಲ್ಲಿ ‘ಇದಮಿತ್ಥಂ’ ಎನ್ನುವ ನಿಲುವು ಹೊಂದಿದ್ದ ಅಪರೂಪದ ಸಾಧಕರು. ಸಾವಿರಾರು ಮುಖವರ್ಣಿಕೆಗಳು ಇವರಿಂದ ರೂಪುಗೊಂಡಿದ್ದವು.

ಅಧ್ಯಯನಶೀಲರಾಗಿದ್ದ ಅಡೂರು, ಮನೆಯಂಗಳದಲ್ಲಿ ಯಕ್ಷಗಾನದ ಸಮ್ಮೇಳನವನ್ನೂ ನಡೆಸಿ ಅಭಿನಂದನೆಗೆ ಪಾತ್ರರಾಗಿದ್ದರು. ಒಂದೆರಡು ಪ್ರಸಂಗಗಳನ್ನೂ ಬರೆದಿದ್ದ ಅಡೂರು ಶ್ರೀಧರ ರಾವ್ ಅವರು, ತನ್ನ ಮನೆಯಲ್ಲಿ ಕಲಾವಿದರಿಗೆ ಊಟ, ವಸತಿ ನೀಡುತ್ತಿದ್ದ ಸಹೃದಯರು. ‘ಯಕ್ಷಗಾನ ವರ್ಣ ವೈಭವ (ತೆಂಕು)’ ಎಂಬ ಕೃತಿಯನ್ನೂ ಅಡೂರು ರಚಿಸಿದ್ದರು.

ಪ್ರಸಿದ್ಧ ಹವ್ಯಾಸೀ ಯಕ್ಷಗಾನ ಕಲಾವಿದರೂ, ಬರಹಗಾರರೂ ಆದ ನಾ.ಕಾರಂತ ಪೆರಾಜೆ, ದೇವಕಾನ ಕೃಷ್ಣ ಭಟ್, ಕೇಶವ ಪ್ರಸಾದ್ ನಾಣಿತ್ತಿಲು ಸಹಿತ ಅನೇಕ ಮಂದಿ ಗಣ್ಯರು ಅಡೂರು ಶ್ರೀಧರ ರಾವ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *