Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕೇರಳದ ಮೀನುಗಾರರು ಮಲ್ಪೆ ಸಮುದ್ರದಲ್ಲಿ ಕಾಣೆ

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗಾಗಿ ಸಮುದ್ರಕ್ಕೆ ತೆರಳಿದ ನಾಲ್ವರು ಕೇರಳೀಯರು ಸಮುದ್ರದಲ್ಲಿ ಕಾಣೆಯಾಗಿದ್ದಾರೆ.

ಕೇರಳದ ರಾಜಧಾನಿ ತಿರುವನಂತಪುರ ಜಿಲ್ಲೆ ನೆಟೆಂಗೆರೆ ತಾಲೂಕು ಕಡಕುಳಂ ಗ್ರಾಮದ ಪೊಳಿಯೂರು ನಿವಾಸಿಗಳಾದ ಚಾರ್ಲಸ್ ಸ್ಯಾಂಡ್ರೋಸ್ (32) ಹಾಗೂ ಇತರ 3 ಮಂದಿ ಕಾಣೆಯಾದವರು.

ಇವರು, ಜೂನ್ 18ರಂದು ಬೆಳಿಗ್ಗೆ 11 ಗಂಟೆಗೆ ಮಲ್ಪೆಯ ಶಶಿಧರ ಡಿ.ಕುಂದರ್ ಎಂಬವರ ನಾಡದೋಣಿಯಲ್ಲಿ ನಾಲ್ವರು ಕೇರಳಿಯರು ಮೀನುಗಾರಿಕೆಗೆ ತೆರಳಿದ್ದರು.  ಹೀಗೆ ತೆರಳಿದವರು ವಾಪಾಸು ಮರಳದೆ ಕಾಣೆಯಾಗಿದ್ದಾರೆ.

ಈ ಬಗ್ಗೆ ಮಲ್ಪೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Leave a Reply

Your email address will not be published. Required fields are marked *