Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನಾಪತ್ತೆಯಾಗಿದ್ದ ಐವರು ವಿದ್ಯಾರ್ಥಿಗಳು ಪತ್ತೆ

ಕುಂಬಳೆ(ಕಾಸರಗೋಡು): ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ನಾಪತ್ತೆಯಾದ 5 ಮಂದಿ ವಿದ್ಯಾರ್ಥಿಗಳ ಜಾಡು ಪತ್ತೆಯಾಗಿದ್ದು, ಕುಂಬಳೆ ಠಾಣೆಯ ಪೊಲೀಸ್ ಅಧಿಕಾರಿಗಳು ನಾಪತ್ತೆಯಾದವರನ್ನು ಜೂನ್ 30ರಂದು ಊರಿಗೆ ಕರೆತರುವರೆಂದು ತಿಳಿದುಬಂದಿದೆ.

ಮುಳ್ಳೇರಿಯಾ ಬಳಿಯ ವೆಳ್ಳಪ್ಪಾಡಿಯ ಅಬ್ದುಲ್ ಕರೀಂ ಎಂಬವರ ಪುತ್ರ ನೌಶಾದ್ (16), ಕುಂಬಳೆ ಬಳಿಯ ಪೆರ್ವಾಡ್ ಮೊಹಮ್ಮದ್ ಹನೀಫಾ ಎಂಬವರ ಪುತ್ರ ಮುರ್ಷಾದ್ (17), ಆರಿಕ್ಕಾಡಿ ಕೋಟೆ ಸನಿಹದ ನಿವಾಸಿ ಮುಹಮ್ಮದ್ ಹನೀಫಾ ಎಂಬವರ ಪುತ್ರ ಮುಹಮ್ಮದ್ ಇರ್ಷಾದ್(17), ಕುಂಬಳೆ ಬದ್ರಿಯಾ ನಗರದ ಇಬ್ರಾಹಿಂ ಎಂಬವರ ಪುತ್ರ ಮುಹಮ್ಮದ್ ಫಯಾಜ್ (16), ಆರಿಕ್ಕಾಡಿ ಬಾಡಿಗೆ ಮನೆಯಲ್ಲಿ ವಾಸಿಸುವ ಯೋಗೀಶ್ ಎಂಬವರ ಪುತ್ರ ಜಿತೇಶ್ (16) ನಾಪತ್ತೆಯಾದ ವಿದ್ಯಾರ್ಥಿಗಳಾಗಿದ್ದು, ಇವರು ಇಂದು ತೃಶೂರಿನಲ್ಲಿ ಪತ್ತೆಯಾಗಿದ್ದಾರೆ.

ಜೂನ್ 27ರಂದು ಸ್ಪೆಶಲ್ ಕ್ಲಾಸ್ ಇದೆಯೆಂದು ಮನೆಯಿಂದ ಹೊರಟಿದ್ದ ಇವರು, ಸಂಜೆಯಾದರೂ ಮನೆಗೆ ಮರಳದಿದ್ದಾಗ ಶಾಲೆಯ ಅಧಿಕೃತರನ್ನು ವಿಚಾರಿಸಿದಾಗ ನಾಪತ್ತೆಯಾಗಿರುವ ಬಗ್ಗೆ ತಿಳಿದು ಬಂತು. ಈ ಪೈಕಿ ಇರ್ಷಾದ್ ನ ಮನೆಯಲ್ಲಿ ಪತ್ರವೊಂದು ದೊರಕಿದ್ದು, ಇದರಲ್ಲಿ ನಮ್ಮನ್ನು ವಿಚಾರಿಸಬೇಡಿರೆಂದು, ನಾವು ಹಿಂತಿರುಗುವುದಾಗಿ ಬರೆಯಲಾಗಿತ್ತು. ಐವರು ನಾಪತ್ತೆಯಾದ ವಿದ್ಯಾರ್ಥಿಗಳ ಹೆತ್ತವರು ಈ ಬಗ್ಗೆ ಕುಂಬಳೆ ಠಾಣೆಯಲ್ಲಿ ದೂರು ನೀಡಿದ್ದರು.

ನಾಪತ್ತೆಯ ಬಗ್ಗೆ ಪೊಲೀಸರು ರಾಜ್ಯಾದ್ಯಂತದ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದರು. ಈ ನಡುವೆ, ಅನುಮಾನಾಸ್ಪದ ರೀತಿಯಲ್ಲಿ ತೃಶೂರಿನಲ್ಲಿ ಕಂಡುಬಂದ ಐವರು ವಿದ್ಯಾರ್ಥಿಗಳನ್ನು ಅಲ್ಲಿನ ಪೊಲೀಸರು ವಿಚಾರಿಸಿದಾಗ ನಿಜ ಬಣ್ಣ ಬಯಲಾಗಿದ್ದು, ಬಳಿಕ ಕಾಸರಗೋಡಿನ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಇದರನ್ವಯ ಇಂದು ಕುಂಬಳೆ ಪೊಲೀಸರು ತೃಶೂರಿಗೆ ತೆರಳಿದ್ದು, ನಾಪತ್ತೆಯಾದ ವಿದ್ಯಾರ್ಥಿಗಳನ್ನು ನಾಳೆ ಕರೆತರುವರು ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *