Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಶಿವಮೊಗ್ಗದ ವ್ಯಕ್ತಿ ಕುಂದಾಪುರದಲ್ಲಿ ಹೊಳೆಗೆ ಬಿದ್ದು ಮೃತ್ಯು

ಉಡುಪಿ: ಹೊಳೆ ಬದಿಗೆ ಹೋದ ವ್ಯಕ್ತಿಯೊಬ್ಬರು, ಅಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮುಳುಗಿ ಮೃತರಾದ ಘಟನೆ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಕಂಡ್ಲೂರು ಎಂಬಲ್ಲಿ ನಡೆದಿದೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ  ಕಬ್ಬಿಗೆ ಬೈಲ್ ನಿವಾಸಿ ವಿಶ್ವನಾಥಪ್ಪ ಗೌಡ (66) ಮೃತ ದುರ್ದೈವಿ. ಕಬ್ಬಿಗೆ ಬೈಲಿನಿಂದ ಕುಂದಾಪುರಕ್ಕೆ ಬಸ್ ನಲ್ಲಿ ಬರುತ್ತಿದ್ದ ಇವರು, ಯಾವುದೋ ಕಾರಣಕ್ಕೆ ಮಾರ್ಗ ಮಧ್ಯೆ ಬಸ್ ಇಳಿದು ಹೊಳೆ ಬದಿಗೆ ಹೋದಾಗ ಈ ದುರ್ಘಟನೆ ನಡೆದಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Leave a Reply

Your email address will not be published. Required fields are marked *