Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬೈಕ್ ಡಿಕ್ಕಿ: ಶಾಲಾ ವಿದ್ಯಾರ್ಥಿ ಮೃತ್ಯು

ಮಂಜೇಶ್ವರ: ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ವಿದ್ಯಾರ್ಥಿಯೋರ್ವ ಚಿಕಿತ್ಸೆ ವಿಫಲಗೊಂಡು ಮೃತಪಟ್ಟಿದ್ದಾನೆ.

ಮಂಜೇಶ್ವರ ಸಮೀಪದ ಗುಡ್ಡೆ ನಿವಾಸಿ ಮೊಯ್ದೀನ್ ಬಿ.ಎಸ್ ಎಂಬವರ ಪುತ್ರ ಹಾಗೂ ಉಪ್ಪಳ ಎಜೆಐ ಶಾಲಾ ವಿದ್ಯಾರ್ಥಿ ಮುನೀರ್ (14) ಮೃತ ದುರ್ದೈವಿ.

ಜೂ.26ರಂದು ಸಾಮಗ್ರಿಗಳನ್ನು ಖರೀದಿಸಲು ಪೇಟೆಗೆ ಬಂದಿದ್ದ ಮುನೀರ್ ಗೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದನು. ಗಾಯಾಳು ಬಾಲಕನನ್ನು ಕೂಡಲೇ ಮಂಗಳೂರಿನ ಖಾಸಗೀ ಆಸ್ಪತ್ರೆಗೆ ಸಾಗಿಸಿ ದಾಖಲಿಸಲಾಗಿತ್ತು.

ಮೃತನು ತಂದೆ, ತಾಯಿ ಹಾಗೂ ಸಹೋದರನನ್ನು ಅಗಲಿದ್ದಾನೆ. ಉದ್ಯಾವರ ಸಾವಿರ ಜಮಾಅತ್ ಮಸೀದಿಯಲ್ಲಿ ಬಾಲಕನ ಅಂತ್ಯ ಸಂಸ್ಕಾರ ನೆರವೇರಿತು.

Leave a Reply

Your email address will not be published. Required fields are marked *