Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕರ್ತವ್ಯದಲ್ಲಿದ್ದಾಗ ಕುಸಿದು ಬಿದ್ದು ಕುಂಬಳೆ ಎಎಸ್ಐ ಸುರೇಂದ್ರನ್ ಮೃತ್ಯು

ಕುಂಬಳೆ(ಕಾಸರಗೋಡು): ಪಯ್ಯನ್ನೂರು ಆಲೆಕ್ಕಾಡ್ ಕಂಮ್ಕಳ ನಿವಾಸಿಯಾದ ಸುರೇಂದ್ರನ್ ಕರ್ತವ್ಯ ನಿಮಿತ್ತ ದೂರೊಂದರ ಅನ್ವೇಷಣೆಗೆ ಪೆರ್ಮುದೆ ಬಳಿ ತೆರಳಿದ್ದವರು ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದು ಮೃತರಾದ ಘಟನೆ ನಡೆದಿದೆ.

ಘಟನೆಯ ಮಾಹಿತಿ ತಿಳಿದ ಜಿಲ್ಲಾ ಪೋಲೀಸ್ ವರಿಷ್ಠ ಡಾ.ಶ್ರೀನಿವಾಸ್, ಡಿವೈಎಸ್ಪಿ ಟಿ.ಪಿ ರಂಜಿತ್ ಸಹಿತ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಸ್ನೇಹಿತರು ಸುರೇಂದ್ರನ್ ಅವರ ಮೃತದೇಹವಿರಿಸಿದ್ದ ಆಸ್ಪತ್ರೆಗೆ ಭೇಟಿ ನೀಡಿ ಮೃತದೇಹವನ್ನು ವೀಕ್ಷಿಸಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಮೃತದೇಹವನ್ನು ಪಯ್ಯನ್ನೂರಿಗೆ ಕೊಂಡೊಯ್ದು ಅಂತಿಮ ವಿಧಿಗಳನ್ನು ನೆರವೇರಿಸಲಾಯಿತು.

1984ರಲ್ಲಿ ಪೊಲೀಸ್ ವೃತ್ತಿಗೆ ಸೇರ್ಪಡೆಗೊಂಡ ಸುರೇಂದ್ರನ್, ಎಂಟು ವರ್ಷ ಜಿಲ್ಲಾ ಪೊಲೀಸ್ ವರಿಷ್ಠರ ವಿಶೇಷ ತಂಡದಲ್ಲಿದ್ದರು. ಬಳಿಕ ಮುಂಬಡ್ತಿಗೊಂಡು ಕುಂಬಳೆ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕರ್ತವ್ಯದ ವೇಳೆ ಹೆಚ್ಚು ಜನರೊಡನೆ ಬೆರೆಯುತ್ತಿದ್ದ ಎಎಸ್ಐ ಸುರೇಂದ್ರನ್, ಜನಾನುರಾಗಿಯಾಗಿದ್ದರು. ಶವ ಮಹಜರು ನಡೆಸಿದ ಬಳಿಕ ಕುಂಬಳೆ ಠಾಣೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಮೃತದೇಹವನ್ನಿರಿಸಲಾಗಿತ್ತು. ಮೃತರು ತಾಯಿ, ಪತ್ನಿ ಹಾಗೂ ಒಬ್ಬಾಕೆ ಪುತ್ರಿಯನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *