Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ಅಕ್ರಮ ಮದ್ಯ ಸಾಗಾಟ: ಆರೋಪಿಗೆ ಶಿಕ್ಷೆ

ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ ಸಮಯದಲ್ಲಿ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಅಂಬಾಗಿಲು ರಸ್ತೆಯ ಮೂಡುಪೆರಂಪಳ್ಳಿ ಜಂಕ್ಷನ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಕೆಎ 20 ಎ 7657 ನಂಬ್ರದ ರಿಕ್ಷಾದಲ್ಲಿ ಅಕ್ರಮವಾಗಿ 49.200 ಲೀಟರ್ ಮದ್ಯ ಸಾಗಾಟ ಮಾಡಿದ ಪ್ರಕರಣದ ಆರೋಪಿ ಉಮೇಶ ಭಟ್ ಎಂಬಾತನಿಗೆ ಉಡುಪಿ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶೆ ವಿ. ಎನ್. ಮಿಲನ ಅವರು ಒಂದು ವರ್ಷ ಕಠಿಣ ಸಜೆ ಮತ್ತು 5 ಸಾವಿರ ರು. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

2012ರ ಮಾರ್ಚ್ 10ರಂದು ರಾತ್ರಿ ಗಂಟೆ 7.30ಕ್ಕೆ ಗಂಟೆಗೆ ಉಮೇಶ್ ಭಟ್ ಮದ್ಯ ಸಾಗಾಟ ಮಾಡಿದ್ದಾಗಿ ಆಪಾದಿಸಿ ಉಡುಪಿ ವಲಯದ ಅಬಕಾರಿ ಉಪನಿರೀಕ್ಷಕರು ಪ್ರಕರಣ ದಾಖಲಿಸಿಕೊಮಡಿದ್ದರು.

ಪ್ರಕರಣದ ವಿಚಾರಣೆ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ನಡೆದಿದ್ದು, ಆರೋಪಿ ಅಕ್ರಮ ಮದ್ಯ ಸಾಗಾಟ ನಡೆಸಿದ್ದು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶೆ ವಿ.ಎನ್. ಮಿಲನರವರು ಆರೋಪಿಗೆ 1 ವರ್ಷ ಕಠಿಣ ಸಜೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

Leave a Reply

Your email address will not be published. Required fields are marked *