Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಾದಕದ್ರವ್ಯ ವಿರುದ್ಧ ಕ್ಯಾಂಪಸ್ ಗೆ ದಾಳಿ ನಡೆಸಲು ಪೂರ್ವಾನುಮತಿ ಬೇಡ: ಕೇರಳ ಸರಕಾರದ ದಿಟ್ಟ ಕ್ರಮ

ಕಾಸರಗೋಡು: ಕಾಲೇಜು ಕ್ಯಾಂಪಸ್ ಗಳು, ಶಾಲಾ ವಠಾರಗಳಲ್ಲಿ ಮಾದಕ ದ್ರವ್ಯಗಳ ವಿತರಣೆಯನ್ನು ಕಟ್ಟುನಿಟ್ಟಾಗಿ ತಡೆಗಟ್ಟುವ ನಿಟ್ಟಿನಲ್ಲಿ ಕೇರಳ ಸರಕಾರ ಕೆಲವೊಂದು ದಿಟ್ಟ ಕ್ರಮಗಳನ್ನು ಕೈಗೊಂಡಿದೆ. ಇನ್ನು ಮುಂದೆ ಕಾಲೇಜು ಪ್ರಾಂಶುಪಾಲರ ಪೂರ್ವಾನುಮತಿ ಪಡೆಯದೆಯೇ ಪೊಲೀಸ್ ಮತ್ತು ಸಂಬಂಧಪಟ್ಟ ಇತರ ಇಲಾಖಾಧಿಕಾರಿಗಳು ಕಾಂಪಸ್ ಗಳಿಗೆ ದಿಢೀರ್ ದಾಳಿ ನಡೆಸಿ, ಮಾದಕದ್ರವ್ಯ ವಿರುದ್ಧದ ಕಾರ್ಯಾಚರಣೆ ನಡೆಸಬಹುದಾಗಿದೆ.

ತಿರುವನಂತಪುರದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಗೃಹ ಖಾತೆ ಮತ್ತು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ತೀಮರ್ಾನ ಕೈಗೊಳ್ಳಲಾಯಿತು. ಮಾದಕದ್ರವ್ಯ ಪಿಡುಗಿನಿಂದ ವಿಶ್ವ ವಿದ್ಯಾನಿಲಯ, ಕಾಲೇಜು ಕ್ಯಾಂಪಸ್ ಗಳು, ಹೋಸ್ಟೆಲ್ ಗಳನ್ನು ಮುಕ್ತಗೊಳಿಸಲು ಹಾಗೂ ಇಲ್ಲಿನ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ಇಂಥ ಕ್ರಮಕ್ಕೆ ಸರಕಾರ ಮುಂದಾಗಿದೆ.

ಉನ್ನತ ಶಿಕ್ಷಣ ರಂಗದ ವಿದ್ಯಾರ್ಥಿ ವಲಯದಲ್ಲಿ ಮಾದಕ ದ್ರವ್ಯದ ಬಗ್ಗೆ ಒಲವು ಹೆಚ್ಚುತ್ತಿರುವುದು ಮತ್ತು ಮಾದಕ ದ್ರವ್ಯ ಜಾಲಕ್ಕೆ ಸಿಲುಕಿ ವಿದ್ಯಾರ್ಥಿಗಳು ಪರದಾಡುತ್ತಿರುವುದು ಈಗಾಗಲೇ ತನಿಖೆಯಿಂದ ದೃಢಪಟ್ಟಿದೆ. ಇಂತಹ ಕಾಲೇಜು ಸಹಿತ ಉನ್ನತ ವಿದ್ಯಾ ಸಂಸ್ಥೆಗಳಲ್ಲಿ ಘರ್ಷಣೆ, ಹಿಂಸಾ ಪ್ರವೃತ್ತಿ ಹೆಚ್ಚುತ್ತಿರುವುದನ್ನೂ ಕಂಡುಕೊಳ್ಳಲಾಗಿದೆ.

ಇದುವರೆಗೆ ಇಂತಹ ಶಿಕ್ಷಣ ಸಂಸ್ಥೆ, ಕಾಲೇಜು ಕ್ಯಾಂಪಸ್ ಗಳಿಗೆ ದಾಳಿ ನಡೆಸಬೇಕಾದರೆ ಆಯಾ ಕಾಲೇಜಿನ ಪ್ರಾಂಶುಪಾಲರ ಅನುಮತಿ ಪಡೆದುಕೊಳ್ಳುವುದು ಕಡ್ಡಾಯವಾಗಿತ್ತು. ಇದರಿಂದ ಪೊಲೀಸರಿಗೆ ಯಾವುದೇ ಸಮಯದಲ್ಲಿ ಕಾರ್ಯಾಚರಣೆಗಿಳಿಯುವುದು ಅಸಾಧ್ಯವಾಗಿತ್ತು. ಇದೀಗ ಸರಕಾರ ತೆಗೆದುಕೊಂಡ ತೀಮರ್ಾನದಿಂದಾಗಿ ಪೊಲೀಸರು ಯಾವುದೇ ಸಂದರ್ಭದಲ್ಲೂ ಕಾರ್ಯಾಚರಣೆ ನಡೆಸಿ, ಮಾದಕದ್ರವ್ಯ ವಿತರಣೆ, ಬಳಕೆ ತಡೆಗಟ್ಟಲು ಸಾಧ್ಯವಾದಂತಾಗಿದೆ.

ಕೇರಳ ರಾಜ್ಯ ಸರಕಾರದ ಈ ದಿಟ್ಟ ಕ್ರಮವನ್ನು ಪ್ರಜ್ಞಾವಂತ ಸಾರ್ವಜನಿಕರು ಹಾಗೂ ಪೋಷಕರು ಸ್ವಾಗತಿಸಿ, ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *