Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಹೊಸಂಗಡಿಯ ಬಡಗಿಗೆ ಒಲಿದ ಕೇರಳದ ಕಾರುಣ್ಯ ಲಾಟರಿಯ 1 ಕೋಟಿ ಬಹುಮಾನ !

ಮಂಜೇಶ್ವರ: ಕೇರಳ ರಾಜ್ಯ ಕಾರುಣ್ಯ ಲಾಟರಿಯ ಒಂದು ಕೋಟಿ ರು. ಮೊತ್ತದ ಪ್ರಥಮ ಬಹುಮಾನ ಈ ಬಾರಿ ಮಂಜೇಶ್ವರದ ಮರದ ಕೆಲಸಗಾರರೊಬ್ಬರಿಗೆ ಒಲಿದುಬಂದಿದೆ.

ದಿನನಿತ್ಯ ಬೆವರು ಸುರಿಸಿ ಬಿಡಿಗಾಸು ಸಂಪಾದಿಸುವ ಶ್ರಮಜೀವಿ ಬಡಗಿ, ಅಂಗಡಿಪದವು ಬಳಿಯ ಶಾಂತಿನಗರದ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಶಿವ ಪ್ರಸಾದ್ (30) ಒಂದು ಕೋಟಿ ರು. ಲಾಟರಿಯ ಅದೃಷ್ಟಶಾಲಿಯಾಗಿದ್ದಾರೆ.

ಸೆಪ್ಟೆಂಬರ್ 4ರಂದು ಸಂಜೆ ಶಿವಪ್ರಸಾದ್ ರವರು ತಲಪಾಡಿಯಿಂದ ಖರೀದಿಸಿದ್ದ ಕೆ.ಇ 234922 ನಂಬ್ರದ ಲಾಟರಿ ಟಿಕೇಟಿಗೆ ಈ ಬಾರಿಯ ಪ್ರಥಮ ಬಹುಮಾನ ಎಂದು ಘೋಷಣೆಯಾಗಿದೆ. ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಶಿವ ಪ್ರಸಾದ್ ಮರದ ಕೆಸಲ ಮಾಡುತ್ತಾ ವಾಸವಾಗಿದ್ದಾರೆ.

Leave a Reply

Your email address will not be published. Required fields are marked *