Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಆನೆ ದಾಳಿ: ಕೃಷಿ ಬೆಳೆಗಳ ನಾಶ

ಮುಳ್ಳೇರಿಯಾ: ದೇಲಂಪಾಡಿ ಗ್ರಾಮ ಪಂಚಾಯತಿಗೆ ಸೇರಿದ ಪಾಂಡಿ ಪ್ರದೇಶದಲ್ಲಿ ಆನೆಗಳ ಹಾವಳಿ ವ್ಯಾಪಕವಾಗಿದ್ದು ಅಪಾರ ಕೃಷಿ ನಾಶದ ಬಗ್ಗೆ ವರದಿಯಾಗಿದೆ.

ಪಾಂಡಿ ಬಳಿಯ ಚೂರ್ಲಡಿ ನಿವಾಸಿ ನಿವೃತ್ತ ಸೇನಾನಿ ನಂದ ಕುಮಾರ್ ಅವರ ತೋಟಕ್ಕೆ ನುಗ್ಗಿದ ಆನೆಗಳ ಹಿಂಡು 50 ಅಡಿಕೆ ಮರಗಳು, 500 ಬಾಳೆ ಗಿಡಗಳು, 10 ತೆಂಗಿನ ಮರಗಳು, 20 ರಬ್ಬರ್ ಮರಗಳನ್ನು, ತೋಟಕ್ಕೆ ನೀರು ಹಾಯಿಸುವ ಪೈಪ್ ಗಳನ್ನು ದ್ವಂಸ ಮಾಡಿದೆ.

ಆನೆಗಳ ಹಾವಳಿ ಹೆಚ್ಚಿದ ಹಿನ್ನೆಲೆಯಲ್ಲಿ ತಳಿಪ್ಪರಂಬದ 5 ಮಂದಿಯ (ಆರ್.ಆರ್.ಟಿ) ರ್ಯಾಪಿಡ್ ರೆಸ್ಪೋನ್ಸ್ ಟೀಂ ಪಾಂಡಿಗೆ ಆಗಮಿಸಿದ್ದು ಅರಣ್ಯ ಇಲಾಖೆ, ಸ್ಥಳೀಯರು ಸೇರಿಕೊಂಡು ಆನೆಗಳನ್ನು ಓಡಿಸುವ ಪ್ರಯತ್ನಕ್ಕೆ ತೊಡಗಿದ್ದಾರೆ. ಆನೆಗಳು ಅಥ್ರ್ಯ ಪ್ರದೇಶದಲ್ಲಿದ್ದು ತಂಡದವರು ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಎರಡು ದಿನಗಳ ಹಿಂದೆ ಕೇರಳ-ಕರ್ನಾಟಕ ಗಡಿ ಪ್ರದೇಶವಾದ ಮಂಡೆಕೋಲಿನಿಂದ ಆನೆಗಳ ಹಿಂಡು ಪಾಂಡಿಗೆ ಆಗಮಿಸಿರುವುದಾಗಿ ಹೇಳಲಾಗಿದೆ. ಕಳೆದ ವರ್ಷವೂ ಆನೆಗಳ ಹಿಂಡು ಅಡೂರು, ಪಾಂಡಿ ಪ್ರದೇಶಗಳಲ್ಲಿ ವ್ಯಾಪಕವಾಗಿ ಕೃಷಿ ನಾಶ ಮಾಡಿದ್ದುವು. ಕೊನೆಗೆ ಆರ್ ಆರ್ ಟಿ ತಂಡದ ನೆರವಿನಿಂದ ಆನೆಗಳನ್ನು ಓಡಿಸಲಾಗಿತ್ತು.

ಆನೆಗಳ ಹಿಂಡು ಪದೇ ಪದೇ ದಾಳಿ ಮಾಡುತ್ತಿದ್ದರೂ, ಇದಕ್ಕೊಂದು ಶಾಶ್ವತ ಪರಿಹಾರ ಈ ತನಕ ಸಾಧ್ಯವಾಗದ ಬಗ್ಗೆ ಸ್ಥಳೀಯರು ದೂರುತ್ತಲೇ ಇದ್ದಾರೆ. ಸೋಲಾರ್ ಬೇಲಿ ನಿರ್ಮಾಣವು ನಿಷ್ಕ್ರಿಯವಾಗುತ್ತಿರುವ ಕಾರಣ ಇದೊಂದು ಪ್ರಹಸನವಾಗುತ್ತಿದೆ. ಕೃಷಿಕರು ಕೂಗಿದಾಗ ಅಧಿಕೃತರು ಎಚ್ಚೆತ್ತರೂ, ನಂತರ ಈ ಬಗ್ಗೆ ಯಾರೂ ಕಣ್ಣೆತ್ತಿಯೂ ನೋಡದ ಕಾರಣ ಈ ಪ್ರದೇಶದ ಕೃಷಿಕರು ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸುತ್ತಲೇ ಇದ್ದಾರೆ.

Leave a Reply

Your email address will not be published. Required fields are marked *