Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಲ್ಲುಕೋರೆಗಳ ಅನಿರ್ಧಿಷ್ಟಾವಧಿ ಮುಷ್ಕರ: ನಿರ್ಮಾಣ ಕಾರ್ಯಕ್ಕೆ ಅಡಚಣೆ-ಕಾರ್ಮಿಕರು ಅತಂತ್ರ

ಕಾಸರಗೋಡು: ಕೇರಳ ರಾಜ್ಯ ಭೂಮಾಪನ ಇಲಾಖೆಯ ಹೊಸ ಮಾನದಂಡದಡಿಯಲ್ಲಿ ಕಾರ್ಯವೆಸಗಲು ಸಾಧ್ಯವಿಲ್ಲವೆಂದು ವಿರೋಧಿಸಿ ಇಂದಿನಿಂದ ರಾಜ್ಯಾದ್ಯಂತ ಕೆಂಪು ಕಲ್ಲು ಕೋರೆ ಮಾಲಕರು ಅನಿರ್ಧಿಷ್ಠಾವಧಿ ಮುಷ್ಕರಕ್ಕಿಳಿದಿದ್ದು, ಇದು ನಿರ್ಮಾಣ ವಲಯ ಸಹಿತ ಒಟ್ಟು ಜನಜೀವನದ ಮೇಲೆ ತೀವ್ರ ಪರಿಣಾಮ ಬೀರಲಿದೆಯೆಂದು ಅಂದಾಜಿಸಲಾಗಿದೆ.

ಐದು ಎಕ್ರೆಗಿಂತ ಅಧಿಕ ವ್ಯಾಪ್ತಿ ಇರುವ ಕೋರೆಗಳಿಗೆ ಮಾತ್ರ ಇನ್ನು ಪರವಾನಿಗೆ ನೀಡಲು ಸಾಧ್ಯ. ಉಳಿದ ಕೋರೆಗಳು ಕಾರ್ಯಾಚರಿಸುವಂತಿಲ್ಲ ಎಂದು ರಾಜ್ಯ ಭೂಮಾಪನ ಇಲಾಖೆ ಹೊಸ ಮಾನದಂಡದ ಕಾನೂನು ಜ್ಯಾರಿಗೊಳಿಸುತ್ತಿದೆ. ಆದರೆ ರಾಜ್ಯದಲ್ಲಿ ಶೇ.98; ಐದು ಎಕ್ರೆಗಿಂತ ಕೆಳಗಿನ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿದ್ದು, ಇದರಿಂದ ಕೋರೆಗಳು ತೀವ್ರ ಇಕ್ಕಟ್ಟಿಗೆ ಸಿಲುಕಿವೆ.

ಇಂದಿನಿಂದ ರಾಜ್ಯ ವ್ಯಾಪಿಯಾಗಿ ಅಧಿಕೃತ ಕೋರೆ ಮಾಲಕರ ಸಂಘ ಅನಿಧರ್ಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವುದರಿಂದ ವಿವಿಧ ಕಟ್ಟಡ ನಿರ್ಮಾಣಗಳು ನೆನೆಗುದಿಗೆ ಬೀಳಲಿದೆ. ಸಾವಿರಾರು ಕಾರ್ಮಿಕರೂ ಕೆಲಸವಿಲ್ಲದೆ ಅತಂತ್ರರಾಗುವ ಸ್ಥಿತಿ ನಿರ್ಮಾಣಗೊಂಡಿದೆ. ಕಾಸರಗೋಡು ಜಿಲ್ಲೆಯೊಂದರಲ್ಲೇ ಸಾವಿರಕ್ಕಿಂತ ಮಿಕ್ಕಿದ ಅನ್ಯ ರಾಜ್ಯಗಳ ಕಾರ್ಮಿಕರ ಸಹಿತ ಸ್ಥಳೀಯರು ದುಡಿಯುತ್ತಿದ್ದು, ಇವರ ಸ್ಥಿತಿ ಚಿಂತಾಜನಕವಾಗಲಿದೆ. ಕಬ್ಬಿಣ, ಸಿಮೆಂಟ್, ಮರಳು ಸಹಿತ ಒಟ್ಟು ವ್ಯಾಪಾರಗಳು ತೀವ್ರ ಕುಸಿಯುವ ಭೀತಿ ನಿರ್ಮಾಣವಾಗಿದೆ.

ಕೆಲಸವಿಲ್ಲದೆ ಕಂಗಲಾಗಲಿರುವ ಕಾರ್ಮಿಕರು ತಾತ್ಕಾಲಿಕವಾಗಿ ಕರ್ನಾಟಕದ ಕಲ್ಲು ಕೋರೆಗಳಿಗೆ ವಲಸೆ ಹೋಗುವ ಸಾಧ್ಯತೆ ಇದೆ.

* ಸಾಂದರ್ಭಿಕ ಚಿತ್ರ

Leave a Reply

Your email address will not be published. Required fields are marked *