Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕೇರಳ-ಕರ್ನಾಟಕ ಗಡಿಗಳಲ್ಲಿ ರಿಕ್ಷಾ ಬಾಡಿಗೆ ಸಮಸ್ಯೆ !

ಪೆರ್ಲ: ಕೇರಳ – ಕರ್ನಾಟಕ ಗಡಿ ಪ್ರದೇಶವಾದ ಅಡ್ಕಸ್ಥಳದ ಅಟೋ ಚಾಲಕರಿಗೆ ಹಾಗೂ ಅಡ್ಯನಡ್ಕದ ಅಟೋ ಚಾಲಕರಿಗೆ ಪರಸ್ಪರ ವೈಮಸ್ಸುಗಳೇರ್ಪಟ್ಟು ಉದ್ವಿಗ್ನತೆಗೊಳಗಾದ ಘಟನೆ ಸೆಪ್ಟೆಂಬರ್ 16ರಂದು ನಡೆದಿದೆ.

ಕೇರಳದ ಅಡ್ಕಸ್ಥಳದ ಅಟೋ ಚಾಲಕರು ಗಡಿ ಪ್ರದೇಶದ ಶಾಲಾ ಮಕ್ಕಳ ಸಹಿತ ಗಡಿ ಭಾಗದ ಪ್ರಯಾಣಿಕರನ್ನು ನಿಗದಿತ ಸ್ಥಳಕ್ಕೆ ತಲುಪಿಸಲು ಅಡ್ಯನಡ್ಕ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಿಗೆ ಬಾಡಿಗೆ ಸಂಚರಿಸುತ್ತಾರೆ. ಅಂತೆಯೇ ಅಡ್ಯನಡ್ಕದ ಅಟೋ ಚಾಲಕರು ಕೇರಳದ ಪ್ರದೇಶಗಳಿಗೂ ಬಾಡಿಗೆ ನಡೆಸುತ್ತಾರೆ. ಕೂನೂನು ನಿಯಮಗಳ ಪ್ರಕಾರ ಅಟೋ ಸಾರಿಗೆಗೆ ಅಂತರರಾಜ್ಯ ಪರವಾನಿಗೆ ನೀಡಲಾಗುವುದಿಲ್ಲ. ಹಾಗೆಂದು ಗಡಿ ಪ್ರದೇಶದ ಅಟೋಗಳು ಗಡಿಯಿಂದಾಚೆ ಒಂದಷ್ಟು ಕಿಲೋಮೀಟರ್ ತೆರಳಬಹುದೆಂಬ ನಿಯಮ ಚಾಲ್ತಿಯಲ್ಲಿದೆ. ಆದರೆ ಅಪಘಾತಗಳಂತಹ ತುರ್ತು ಘಟನೆಗಳಾದರೆ ಕಾನೂನಾತ್ಮಕ ಹಕ್ಕುಗಳು ಲಭಿಸದು. ಅಂದರೆ, ವಿಮೆ ಸಹಿತ ಇತರ ಸವಲತ್ತುಗಳಿಂದ ಹೊರತಾಗುತ್ತಾರೆ. ಈ ದೃಷ್ಟಿಯಿಂದ ಅಂತರರಾಜ್ಯ ಪ್ರವೇಶಿಸದಂತೆ ಅಟೋಗಳಿಗೆ ಆರ್ ಟಿ ಓ ನಿಬಂಧನೆ ವಿಧಿಸುತ್ತದೆ. ಅದೂ ಗಡಿ ಪ್ರದೇಶಗಳಲ್ಲಿನ ಅಟೋಗಳಿರುವಲ್ಲಿಗೆ ತೆರಳಿ ನೇರವಾಗಿ ಅರ್ ಟಿ ಓ ದಂಡ ವಿಧಿಸುತ್ತಿಲ್ಲ.

ಆದರೆ; ಸೆ.16ರಂದು ಕನರ್ಾಟಕದ ಅಡ್ಯನಡ್ಕದಲ್ಲಿ ಅತ್ತ ತೆರಳಿದ ಕೇರಳದ ಅಡ್ಕಸ್ಥಳದ ಅಟೋಗಳಿಗೆ ದಂಡ ವಿಧಿಸಿರುವುದಾಗಿ ದೂರಲಾಗಿದೆ. ಇದರಿಂದಾಗಿ ಅಟೋ ಚಾಲಕರಿಗೆ ತೀವ್ರ ಆರ್ಥಿಕ ಹೊರೆ ಬಿದ್ದಿದ್ದು, ಮಕ್ಕಳನ್ನು ಕಳುಹಿಸುವ ಪಾಲಕರಿಗೆ ಕಾರು ಅಥವಾ ಇತರ ವಾಹನಗಳ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸಬೇಕಾದ ಸಂಕಷ್ಟ ಎದುರಾಯಿತು.

ಸಂಜೆ ಅಡ್ಯನಡ್ಕದಲ್ಲಿ ಕಲಿಯುತ್ತಿರುವ ಶಾಲಾ ವಿದ್ಯಾರ್ಥಿಗಳನ್ನು ಕರೆತರಲು ಅಡ್ಕಸ್ಥಳದ ಅಟೋ ಚಾಲಕರು ದೈರ್ಯ ತೋರದ ಕಾರಣ ಮಕ್ಕಳ ಪಾಲಕರು ತೀವ್ರ ಗಲಿಬಿಲಿಗೊಂಡರು.

ಕೇರಳದ ಬಾಯಾರು, ಮುಳಿಗದ್ದೆ, ಬೆರಿಪದವು, ಬಳ್ಳೂರು, ಕುರುಡಪದವು, ಆನೆಕಲ್ಲು ಮೊದಲಾದ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರು ಕೆಲವು ಸಂದರ್ಭದಲ್ಲಿ ಅಟೋಗಳನ್ನು ಆಶ್ರಯಿಸಬೇಕಾಗಿದ್ದು, ಈ ಪ್ರದೇಶಗಳಿಗೆ ಅಡ್ಕಸ್ಥಳದಿಂದ ಕರ್ನಾಟಕದ ಅಡ್ಯನಡ್ಕ, ಕುದ್ದುಪದವು, ಪೆರುವಾಯಿ, ಕನ್ಯಾನಗಳ ಮೂಲಕ ಸಂಚರಿಸಬೇಕಾಗುತ್ತದೆ. ಈ ದಾರಿಗಳು ಅತೀ ಹತ್ತಿರವಾಗಿದ್ದು, ಪ್ರಯಾಣಿಕರಿಗೂ ಅನುಕೂಲವಾಗಿರುತ್ತದೆ. ಆದರೆ ಕರ್ನಾಟಕದ ಅಧಿಕಾರಿಗಳು ತೀವ್ರ ದಂಡ ಹಾಕುವಂತಹ ಕಠಿಣ ಕ್ರಮಕ್ಕಿಳಿದರೆ ಇದು ಜನಸಾಮಾನ್ಯರಿಗೆ ತೀವ್ರ ಸಮಸ್ಯೆಗಳಾಗಿ ಕಾಡಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

adkasthala stand-2

Leave a Reply

Your email address will not be published. Required fields are marked *