Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಸಮುದ್ರ ದಡದಲ್ಲಿ ಅಪರಿಚಿತ ಯುವಕನ ಶವಪತ್ತೆ: ಶಂಕೆ

ಉಡುಪಿ: ಕೊಡವೂರು ಗ್ರಾಮದ ಶಿವಪಂಚಾಕ್ಷರಿ ಭಜನಾ ಮಂದಿರದ ಬಳಿಯ ಸಮುದ್ರದ ದಡದಲ್ಲಿ ಸುಮಾರು 25-26 ವರ್ಷ ಪ್ರಾಯದ ಅಪರಿಚಿತ ಯುವಕನ ಶವ ಪತ್ತೆಯಾಗಿದೆ.

ಮೃತ ದೇಹದ ಬಲಕೈ ತೋಳಿನ ಮೇಲೆ 5-10 ಇಂಚಿನ ಉದ್ದದ ಹೂವಿನ ಚಿತ್ರ ಟ್ಯಾಟೂ ಹಾಕಿದ ಮಾರ್ಕ್ ಇದ್ದು, ಅದರ ಬಳಿ A-S-B ಎಂದು ಟ್ಯಾಟೂನಿಂದ ಬರೆದಿದೆ. ಅಪರಿಚಿತ ಯುವಕ ಸಮುದ್ರಕ್ಕೆ ಹಾರಿ ದೇಹಹತ್ಯೆ ಮಾಡಿಕೊಂಡಿರಬಹದೇ, ಈಜುವಾಗ ಅಕಸ್ಮಾತ್ ನೀರಿನ ಸೆಳೆತಕ್ಕೆ ಒಳಗಾಗಿ ಮುಳುಗಿ ಮೃತಪಟ್ಟಿರಬಹುದೇ, ಯಾರಾದರೂ ಕೊಲೆಗೈದು ಸಮುದ್ರಕ್ಕೆ ಎಸೆದಿರಬಹುದೇ ಎಂಬಿತ್ಯಾದಿ ವಿಷಯಗಳು ಪೊಲೀಸರು ಮುಂದೆ ಸರಿಯಾಗಿ ತನಿಖೆ ನಡೆಸಿದರೆ ಬಹಿರಂಗಕ್ಕೆ ಬರುವ ಸಾಧ್ಯತೆ ಇದೆ.

ಈ ಬಗ್ಗೆ; ಭಜನಾ ಮಂದಿರದ ಬಳಿಯ ನಿವಾಸಿ ಮೋಹನ್ ಕಾಂಚನ್ ನೀಡಿದ ದೂರಿನಂತೆ ಮಲ್ಪೆ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *