Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪ್ರತ್ಯೇಕ ಘಟನೆ: ನೀರಲ್ಲಿ ಮುಳುಗಿ ಇಬ್ಬರು ಮೃತ್ಯು

ಉಡುಪಿ: ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ವ್ಯಕ್ತಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ನಿವಾಸಿ ವಿಜಿತ್ ಸುವರ್ಣ (29) ಎಂಬವರು ಗೆಳೆಯರೊಂದಿಗೆ ಕುರ್ಕಾಲು ಮಣಿಪುರ ಹೊಳೆಯಲ್ಲಿ ಈಜುತ್ತಿದ್ದಾಗ ನೀರಿನ ಸುಳಿಗೆ ಸಿಲುಕಿ ಮುಳುಗಿ ಮೃತಪಟ್ಟಿದ್ದಾರೆ. ಇವರ ಮೃತದೇಹ ಬಳಿಕ ಕುರ್ಕಾಲು ಅಣೆಕಟ್ಟು ಬಳಿ ಪತ್ತೆಯಾಯಿತು.

ಈ ಬಗ್ಗೆ, ಮೃತರ ಮಾವ ಕೆಮ್ತೂರು ನಿವಾಸಿ ರವಿ ಪೂಜಾರಿ ನೀಡಿದ ಹೇಳಿಕೆಯಂತೆ ಶಿರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇನ್ನೊಮದು ಘಟನೆಯಲ್ಲಿ, ಶಿರ್ವ ಮಾರಿಗುಡಿ ಬಳಿ ಇರುವ ಹೊಳೆಯಲ್ಲಿ ಗೆಳೆಯರೊಂದಿಗೆ ಸ್ನಾನ ಮಾಡುತ್ತಿದ್ದ ರಾಘವ ಧ್ಯಾನ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೃತ ರಾಘವ ಧ್ಯಾನ್ ನವ ದೆಹಲಿಯವರಾಗಿದ್ದು, ಮಣಿಪಾಲದ ಎಂಐಸಿ ಕಾಲೇಜಿನ ವಿದ್ಯಾರ್ಥಿಯಾಗಿ ಕಾಲೇಜಿನ ಹಾಸ್ಟೆಲಿನಲ್ಲಿ ವಾಸವಾಗಿದ್ದರು. ಶಿರ್ವದ ಪದವು ಬಳಿ ಇರುವ ಗೆಳೆಯ ಕ್ರಿಸ್ಟನ್ ಮಚಾದೊ ಎಂಬವರ ಮನೆಗೆ ಬಂದು ಉಳಿದುಕೊಂಡಿದ್ದು, ಕ್ರಿಸ್ಟನ್ ಹಾಗೂ ಮತ್ತೊಬ್ಬ ಗೆಳೆಯ ಆಯುಷ್ ಮಾಸ್ಟರ್ ಜೊತೆಗೆ ಈಜಲು ಹೋದಾಗ ದುರ್ಘಟನೆ ಸಂಭವಿಸಿದೆ.

ಈ ಬಗ್ಗೆ, ಕ್ರಿಸ್ಟನ್ ನೀಡಿದ ಹೇಳಿಕೆಯಂತೆ ಶಿರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *