Realtime blog statisticsweb statistics
udupibits.in
Breaking News
ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಮರಣ ?

ಅಕ್ಟೋಬರ್ 14-22: ಕಡಿಯಾಳಿ ದೇವಸ್ಥಾನದಲ್ಲಿ ನವರಾತ್ರಿಯ ಸಾಂಸ್ಕೃತಿಕ ವೈವಿಧ್ಯ

ಉಡುಪಿ: ಉಡುಪಿ – ಮಣಿಪಾಲ ರಸ್ತೆಯ ಕಡಿಯಾಳಿಯಲ್ಲಿರುವ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಅಕ್ಟೋಬರ್ 14ರಿಂದ 22ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನವರಾತ್ರಿ ಮಹೋತ್ಸವವು ಜರುಗಲಿದೆ.

ಪ್ರತೀ ದಿನ ಸಂಜೆ ಗಂಟೆ 6ರಿಂದ 8.30ರ ವರೆಗೆ ದೇವಿಯ ಸನ್ನಿಧಿಯಲ್ಲಿ ಊರ ಮತ್ತು ಪರಊರ ಕಲಾ ಸಂಸ್ಥೆಗಳಿಂದ ಹಾಗೂ ಕಲಾವಿದರಿಂದ ವಿವಿಧ ಸಾಂಸ್ಕೃತರಿಕ ಕಾರ್ಯಕ್ರಮಗಳು ನಡೆಯಲಿವೆ.

ಅ.14ರಂದು ಸಂಜೆ ಪಂಚಸ್ವನಂ ತಂಡದಿಂದ ಸಂಗೀತಾ ಪರಿಕರ ಗೋಷ್ಠಿ, ಅ.15ರಂದು ಸಂಜೆ ಬೆದ್ರೆಯ ‘ನಮ್ಮ ಕಲಾವಿದೆರ್’ ಇವರಿಂದ ‘ಆತೇ ಪನೊಡಾತೆ’ ತುಳು ಹಾಸ್ಯ ನಾಟಕ, ಅ.16ರಂದು ಸಂಜೆ ತಂತ್ರಾಡಿಯ ಮಕ್ಕಳ ಮೇಳದಿಂದ ‘ಗಣಪತಿ ಮಹಿಮೆ’ ಯಕ್ಷಗಾನ (ಪ್ರಾಯೋಜಕರು: ಉಡುಪಿ ಜಿಲ್ಲಾ ಮುಜರಾಯಿ ದೇವಾಲಯಗಳ ಅರ್ಚಕ ಸಂಘ ಮತ್ತು ಶ್ರೀ ಕ್ಷೇತ್ರ ಕಡಿಯಾಳಿ ಹಿತರಕ್ಷಣಾ ಸಮಿತಿ ಪರವಾಗಿ ಶ್ರೀಶ ಉಪಾಧ್ಯ ಲಕ್ಷ್ಮೀಂದ್ರ ನಗರ), ಅ.17ರಂದು ಸಂಜೆ ರಾಜ್ಯ ಪ್ರಶಸ್ತಿ ಪುರಸ್ಕೃತೆ ಅಂಧ ಕಲಾವಿದೆ ಕು.ಕಸ್ತೂರಿ ಇವರಿಂದ ಸಂಗೀತ, ಅ.18ರಂದು ಸಂಜೆ ವಿದುಷಿ ಶ್ರೀಮತಿ ಪಲ್ಲವಿ ಶ್ರೀಪತಿ ಇವರಿಂದ ಶಾಸ್ತ್ರೀಯ ಸಂಗೀತಾ ಮತ್ತು ಡಾ.ರಮೇಶ ಗಳಿಕೆರೆ ಹಾಗೂ ಚಿನ್ಮಯಿ ಗಳಿಗೆಕೆರೆ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತಾ ನಡೆಯಲಿದೆ.

ಅ.19ರಂದು ಸಂಜೆ ಪೆರ್ಡೂರು ಎಲ್ಲಾರೆಯ ಇರ್ವತ್ತೂರು ಹರೀಶ್ ನಾಯಕ್ ಇವರಿಂದ ದಾಸವಾಣಿ ಭಕ್ತಿಗೀತೆ, ಅ.20ರಂದು ಸಂಜೆ ಕಡಿಯಾಳಿ ಮಹಿಷಮರ್ದಿನೀ ಅಂಗನವಾಡಿ ಮಕ್ಕಳಿಂದ ನೃತ್ಯ ವೈವಿಧ್ಯ ಮತ್ತು ಕರಂಬಳ್ಳಿಯ ಶ್ರೀ ವೆಂಕಟರಮಣ ಯಕ್ಷಗಾನ ಮಂಡಳಿಯವರಿಂದ ‘ತುಳಸಿ ಜಲಾಂಧರ’ ಯಕ್ಷಗಾನ, ಅ.21ರಂದು ಸಂಜೆ ಶಿವಮೊಗ್ಗದ ವಿದ್ವಾನ್ ರಾಮು ಹಾಗೂ ಬಳಗದವರಿಂದ ನಾದಸ್ವರ ವಾದನ ಮತ್ತು ಉಡುಪಿಯ ದರ್ಪಣ ಸ್ಕೂಲ್ ಆಫ್ ಫರ್ ಫಮ್ಮಿಂಗ್ಸ್ ಆರ್ಟ್ ಇವರಿಂದ ನೃತ್ಯಾರ್ಪಣಾ, ಅ.22ರಂದು ಸಂಜೆ ಉಡುಪಿಯ ಸೃಷ್ಠಿ ನೃತ್ಯ ಕಲಾ ಕುಟೀರದವರಿಂದ ನೃತ್ಯ ವೈವಿಧ್ಯ ನಡೆಯಲಿದೆ.

Leave a Reply

Your email address will not be published. Required fields are marked *