Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ: ಕಾಸರಗೋಡು ಜಿಲ್ಲೆಯಲ್ಲಿ 2,652 ಮಂದಿ ಕಣದಲ್ಲಿ

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಗೆ ಸಂಬಂಧಿಸಿದಂತೆ ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2,652 ಮಂದಿ ತಮ್ಮ ಭವಿಷ್ಯವನ್ನು ನಿರ್ಣಯಿಸಲು ಕಣದಲ್ಲಿ ಉಳಿದುಕೊಂಡಿದ್ದಾರೆ.

ನಾಮಪತ್ರ ಹಿಂತೆಗೆತ ಪ್ರಕ್ರಿಯೆ ಅಕ್ಟೋಬರ್ 17 ರಂದು ಸಂಜೆ ಮುಕ್ತಾಯಗೊಂಡಿದ್ದು, ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಲಭಿಸಿದೆ. ಜಿಲ್ಲಾ ಪಂಚಾಯತ್, ಬ್ಲಾಕ್ ಪಂಚಾಯತ್, ಗ್ರಾಮ ಪಂಚಾಯತ್ ಮತ್ತು ನಗರಸಭೆಗಳ ಬಹುತೇಕ ವಾರ್ಡುಗಳಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಐಕ್ಯರಂಗ, ಎಡರಂಗ ಮತ್ತು ಬಿಜೆಪಿ ಅಭ್ಯರ್ಥಿಗಳ ಮಧ್ಯೆ ನೇರ ಸ್ಪರ್ಧೆ ನಡೆಯಲಿದೆ. ಕೆಲವೆಡೆ ಬಂಡುಕೋರರು ಸ್ಪರ್ಧಾ ಕಣದಲ್ಲಿರುವುದರಿಂದ, ಅಂತಹ ವಾರ್ಡುಗಳಲ್ಲಿ ಚತುಷ್ಕೋನ ಸ್ಪರ್ಧೆ ನಡೆಯಲಿದೆ. ಹಲವೆಡೆ ಸಾಕಷ್ಟು ಮಂದಿ ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಜಿಲ್ಲಾ ಪಂಚಾಯತ್ ನ 17 ಡಿವಿಷನ್ ಗಳಲ್ಲಿ 60 ಮಂದಿ ಸ್ಪರ್ಧಿಸುತ್ತಿದ್ದಾರೆ. 99 ನಾಮಪತ್ರಗಳು ಸಲ್ಲಿಸಲ್ಪಟ್ಟಿತ್ತು. 39 ಮಂದಿ ನಾಮಪತ್ರ ಹಿಂತೆಗೆದುಕೊಳ್ಳುವುದರೊಂದಿಗೆ ಸ್ಪರ್ದಾ ಕಣದಲ್ಲಿ 60 ಮಂದಿ ಉಳಿದಿದ್ದಾರೆ. 6 ಬ್ಲಾಕ್ ಪಂಚಾಯತ್ ಗಳಲ್ಲಿ ಒಟ್ಟು 260 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ. ನಾಮಪತ್ರ ಸಲ್ಲಿಸಿದ ಒಟ್ಟು 302 ಮಂದಿಯ ಪೈಕಿ 142 ಮಂದಿ ಹಿಂತೆಗೆದುಕೊಂಡಿದ್ದಾರೆ.

ಮಂಜೇಶ್ವರ ಬ್ಲಾಕ್ ಪಂಚಾಯತ್ ನಲ್ಲಿ 51, ಕಾಸರಗೋಡು ಬ್ಲಾಕ್ ಪಂಚಾಯತ್ ನಲ್ಲಿ 46, ಕಾಞಂಗಾಡ್ ಬ್ಲಾಕ್ ಪಂಚಾಯತ್ ನಲ್ಲಿ 39, ನೀಲೇಶ್ವರ ಬ್ಲಾಕ್ ಪಂಚಾಯತ್ ನಲ್ಲಿ 39, ಕಾರಡ್ಕ ಬ್ಲಾಕ್ ಪಂಚಾಯತ್ ನಲ್ಲಿ 40, ಪರಪ್ಪ ಬ್ಲಾಕ್ ಪಂಚಾಯತ್ ನಲ್ಲಿ 45 ಮಂದಿಯ ಭವಿಷ್ಯ ನಿರ್ಣಯವಾಗಲಿದೆ.

ಮೂರು ನಗರಸಭೆಗಳಲ್ಲಿ ಒಟ್ಟು 354 ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಕಾಸರಗೋಡು ನಗರಸಭೆಯಲ್ಲಿ 120, ಕಾಞಂಗಾಡ್ ನಗರಸಭೆಯಲ್ಲಿ 138, ನೀಲೇಶ್ವರ ನಗರಸಭೆಯಲ್ಲಿ 96 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.

ಬಂಡಾಯ

ಹಲವು ಪಂಚಾಯತ್ ಗಳಲ್ಲಿ ಬಂಡುಕೋರ ಅಭ್ಯರ್ಥಿಗಳಿಗೆ ಇನ್ನೊಂದು ಪಕ್ಷ ತನ್ನ ಅಭ್ಯರ್ಥಿಗಳನ್ನು ಹಿಂತೆಗೆದುಕೊಂಡು ಬೆಂಬಲ ನೀಡಿದೆ. ಬಂಡುಕೋರ ಅಭ್ಯರ್ಥಿಗಳಿಗೆ ನಾಮಪತ್ರ ಹಿಂತೆಗೆಯಲು ಸಂಬಂಧಪಟ್ಟ ಪಕ್ಷಗಳ ನೇತಾರರು ಗಡುವು ನೀಡಿದ್ದರೂ, ನಾಮಪತ್ರ ಹಿಂತೆಗೆದುಕೊಳ್ಳದೆ ಕಣದಲ್ಲಿ ಉಳಿದುಕೊಂಡು ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಸವಾಲಾಗಿದ್ದಾರೆ.

ಮಂಜೇಶ್ವರ ತಾಲೂಕಿನ ವರ್ಕಾಡಿ ಜಿಲ್ಲಾ ಪಂಚಾಯತ್ ಕ್ಷೇತ್ರದಿಂದ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಯಾಗಿ ಹರ್ಷದ್ ವರ್ಕಾಡಿ ಸ್ಪರ್ಧಿಸುತ್ತಿದ್ದಾರೆ. ಹರ್ಷದ್ ವರ್ಕಾಡಿ ನಿಕಟಪೂರ್ವ ತಾ.ಪಂ.ಸದಸ್ಯರಾಗಿದ್ದು, ಪತ್ರಕರ್ತರೂ ಆಗಿರುತ್ತಾರೆ. ಇವರ ವಿರುದ್ಧ ಬ್ಲಾಕ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾದ ಡಿ.ಎಂ.ಕೆ.ಮೊಹಮ್ಮದ್ ಅವರು ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ. ಇವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿಯು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಗೆ ಪತ್ರ ಬರೆದು ಸೂಚಿಸಿದೆ.

Leave a Reply

Your email address will not be published. Required fields are marked *