Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪತ್ರಕರ್ತ ಸುಂದರ ಬಂಗೇರ ಸಹಿತ ಐವರು ಸಾಧಕರಿಗೆ ಸನ್ಮಾನ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಇತ್ತೀಚೆಗೆ ಚಿಕ್ಕಮಗಳೂರಿನಲ್ಲಿ ‘ಸುವರ್ಣ ಕನ್ನಡ ಸಾಹಿತ್ಯ ಭವನ’ದ ಉದ್ಘಾಟನೆ, ‘ಕನ್ನಡ ವರ್ಷಾಚರಣೆ’ ಮತ್ತು ‘ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವ ಸಂಭ್ರಮಾಚರಣೆ’ ಜರುಗಿತು.

ಪತ್ರಿಕಾ ರಂಗದಲ್ಲಿನ ಸಾಧನೆಗಾಗಿ ಕಳೆದ ಒಂದೂವರೆ ದಶಕದಿಂದ ಮೂಡಿಗೆರೆಯಿಂದ ಕನ್ನಡ ಪತ್ರಿಕೆಯನ್ನು ಪ್ರಕಾಶಿಸುತ್ತಿರುವ ಕವಿ, ಲೇಖಕ ಸುಂದರ ಬಂಗೇರ ಹಳೆಕೋಟೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಗೀತ ಕ್ಷೇತ್ರದ ಸಾಧನೆಗಾಗಿ ಕನ್ನಡಶ್ರೀ ಭಗವಾನ್ ತರಿಕೆರೆ, ಕಿರುತೆರೆ ನಿರ್ದೇಶಕರಾದ ರಮೇಶ್ ಬೇಗಾರ್ ಶೃಂಗೇರಿ, ಸಮಾಜ ಸೇವಾ ಕ್ಷೇತ್ರದಲ್ಲಿನ ಸಾಧನೆಗಾಗಿ ಎನ್.ಆರ್.ಪುರದ ಸುಬ್ಬಣ್ಣ ನಾಡಿಗ್ ಹಾಗೂ ಸಾಹಿತ್ಯ ಮತ್ತು ಸಂಘಟನಾ ಕ್ಷೇತ್ರದಲ್ಲಿನ ಸಾಧನೆಗಾಗಿ ಚಿಕ್ಕಮಗಳೂರಿನ ಶ್ರೀಮತಿ ವಾಣಿ ಚಂದ್ರಯ್ಯ ನಾಯ್ಡು ಇವರನ್ನು ಚಿಕ್ಕಮಗಳೂರು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಅಭಯಚಂದ್ರ ಜೈನ್, ಶಾಸಕ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯರುಗಳಾದ ಶ್ರೀಮತಿ ಮೋಟಮ್ಮ ಹಾಗೂ ಗಾಯತ್ರಿ ಶಾಂತೇ ಗೌಡ ಅವರು ಸಾಧಕರನ್ನು ಸನ್ಮಾನಿಸಿದರು. ಜಿ.ಪಂ.ಅಧ್ಯಕ್ಷೆ ಕವಿತಾ ಬೆಳ್ಳಿ ಪ್ರಕಾಶ್, ಜಿಲ್ಲಾಧಿಕಾರಿ ಷಡಾಕ್ಷರ ಸ್ವಾಮಿ, ಅಸಿಸ್ಟೆಂಟ್ ಕಮಿಷನರ್ ರಾಮಚಂದ್ರನ್, ಸಿಇಓ ಡಾ.ರಾಗಪ್ರಿಯ, ಕಸಾಪ ಜಿಲ್ಲಾಧ್ಯಕ್ಷ ನಾ.ಸು.ಶಿವ ಸ್ವಾಮಿ, ಡಾ.ಜೆ.ಪಿ.ಕೃಷ್ಣೇ ಗೌಡ, ಬಿ.ಆರ್.ಜಗದೀಶ್, ಶಿವಾನಂದ ಸ್ವಾಮಿ, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಸಿ.ಗೀತಾ, ಎಸ್.ಎಸ್.ವೆಂಕಟೇಶ್, ನಗರಸಭಾಧ್ಯಕ್ಷ ಮುತ್ತಯ್ಯ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎಂ.ರಾಜಶೇಖರ್, ಕರಾವೆ ಅಧ್ಯಕ್ಷ ತೇಗೂರು ಜಗದೀಶ್ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *