Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ರಾಷ್ಟ್ರೀಯ ಹೆದ್ದಾರಿ ನಾದುರಸ್ತಿ ಪ್ರತಿಭಟಿಸಿ ಮುಖ್ಯಂಮಂತ್ರಿಗೆ ಕರಿ ಪತಾಕೆ ಪ್ರದರ್ಶನ !

ಉಪ್ಪಳ: : ರಾಷ್ಟ್ರೀಯ ಹೆದ್ದಾರಿಯ ಶೋಚನೀಯಾವಸ್ಥೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರಿಗೆ ಕರಿ ಪತಾಕೆ ಪ್ರದರ್ಶಿಸಿ, ನಾಗರಿಕರು ಪ್ರತಿಭಟನೆ ನಡೆಸಿದ ವಿದ್ಯಾಮಾನ ುಪ್ಪಳದಲ್ಲಿ ನಡೆದಿದೆ.

ಉಪ್ಪಳದಲ್ಲಿ ನಡೆದ ಐಕ್ಯರಂಗ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಆಗಮಿಸಿದ ಮುಖ್ಯಮಂತ್ರಿಯವರಿಗೆ ಕುಂಬಳೆ, ಆರಿಕ್ಕಾಡಿ ಮತ್ತು ಶಿರಿಯಾ ಸೇತುವೆ ಬಳಿ ‘ರಾಷ್ಟ್ರೀಯ ಹೆದ್ದಾರಿ ಕ್ರಿಯಾ ಸಮಿತಿ’ ವತಿಯಿಂದ ಕರಿ ಪತಾಕೆ ಪ್ರದರ್ಶಿಸಿ ಪ್ರತಿಭಟನೆ ಸಲ್ಲಿಸಲಾಯಿತು.

ಕ್ರಿಯಾ ಸಮಿತಿ ಸದಸ್ಯರು ಕುಂಬಳೆಯಿಂದ ಉಪ್ಪಳ ತನಕ ಹೆದ್ದಾರಿಯ ಪಕ್ಕದಲ್ಲಿ ಕಪ್ಪು ಪತಾಕೆ ಕಟ್ಟಿದ್ದರು. ಇದನ್ನು ಅಕ್ಟೋಬರ್ 19ರ ಬೆಳಗ್ಗೆ ಪೊಲೀಸರು ತೆಗೆದು ಹಾಕಿದ್ದರು. ಪೊಲೀಸರ ಈ ಕ್ರಮವನ್ನು ಪ್ರತಿಭಟಿಸಿ, ನೂರಾರು ಮಂದಿ ನಾಗರಿಕರು ಕರಿ ಪತಾಕೆಯನ್ನು ಹಿಡಿದು ಆರಿಕ್ಕಾಡಿ ಮತ್ತು ಶಿರಿಯ ಹೆದ್ದಾರಿ ಬದಿಯಲ್ಲಿ ಕುಳಿತು ಪ್ರತಿಭಟನೆ ನಡೆಸಿದರು.

ಕರಿಪತಾಕೆ ಪ್ರತಿಭಟನೆಯಿಂದ ಹಿಂದಕ್ಕೆ ಸರಿಯಬೇಕೆಂದು ಡಿವೈಎಸ್ಪಿ ಸುಕುಮಾರನ್ ನೇತೃತ್ವದ ಪೊಲೀಸರ ತಂಡ ನಾಗರಿಕರನ್ನು ಭಿನ್ನವಿಸಿದರೂ ಪ್ರತಿಭಟನಾಕಾರರು ಮಣಿಯಲಿಲ್ಲ. ಪ್ರತಿಭಟನಾ ನಿರತ ನಾಗರಿಕರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯುತ್ತಿದ್ದಂತೆಯೇ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರು ಬಂದರು. ಪ್ರತಿಭಟನಾಕಾರರು ಕಪ್ಪು ಪತಾಕೆಯನ್ನು ಬೀಸಿದರು.
ಚುನಾವಣಾ ಪ್ರಚಾರ ನಡೆದ ಉಪ್ಪಳ ಪರಿಸರದಲ್ಲೂ ಕೆಲವೆಡೆ ಕರಿಪತಾಕೆ ಕಂಡು ಬಂದಿದ್ದು, ಅದನ್ನು ಬಳಿಕ ಪೊಲೀಸರು ತೆರವುಗೊಳಿಸಿದರು.

karipatake-2

Leave a Reply

Your email address will not be published. Required fields are marked *