Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಭಾರೀ ಪ್ರಮಾಣದ ನಿಷೇಧಿತ ಪಾಲಿಥೀನ್ ಚೀಲಗಳ ವಶ: ಆರೋಪಿ ಟಿ.ಕೆ.ಬಿಜು ಗೆ ನ್ಯಾಯಾಂಗ ಬಂಧನ

ಕಾರ್ಕಳ: ದುರ್ಗ ಗ್ರಾಮದ ತೆಳ್ಳಾರು ದರ್ಖಾಸು ಎಂಬಲ್ಲಿನ ವಿಲ್ಸನ್ ಎಂಬವರ ಮನೆಯ ಹಿಂಬದಿಯಲ್ಲಿರುವ ಶೆಡ್ ಗೆ ದಾಳಿ ನಡೆಸಿದ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ.ಸುಮನ್ ಡಿ.ಪಿ.ನೇತೃತ್ವದ ಪೊಲೀಸರ ತಂಡ, ಶೆಡ್ ನಲ್ಲಿ ಅನಧಿಕೃವಾಗಿ ಸಂಗ್ರಹಿಸಿಡಲಾಗಿದ್ದ ಬೃಹತ್ ಪ್ರಮಾಣದ ನಿಷೇಧಿತ ಅಮೋನಿಯಂ ನೈಟ್ರೆಟ್ ಸ್ಪೋಟಕ ಸಾಮಾಗ್ರಿಯನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಅಮೋನಿಯಂ ನೈಟ್ರೇಟ್ ತುಂಬಿದ್ದ 50 ಕೇಜಿ ತೂಕದ ಒಟ್ಟು 250 ಪಾಲಿಥೀನ್ ಚೀಲಗಳನ್ನು ಸಂಗ್ರಹಿಡಲಾಗಿತ್ತು. ಇದರ ಮೌಲ್ಯ 3 ಲಕ್ಷ ರು. ಎಂದು ಅಂದಾಜಿಸಲಾಗಿದೆ. ಯಾವುದೋ ದುಷ್ಕೃತ್ಯವೆಸಗಲು ಈ ಸ್ಪೋಟಕವನ್ನು ಸಂಗ್ರಹಿಸಿಟ್ಟಿರಬಹುದೆಂದು ಶಂಕಿಸಲಾಗಿದೆ.

ವಿಲ್ಸನ್ ಕೇರಳ ಮೂಲದವರಾಗಿದ್ದಾರೆ. ಕೇರಳ ಮೂಲದವನಾಗಿದ್ದು, ಪ್ರಸ್ತುತ ಮರ್ಣೆ ಗ್ರಾಮದಲ್ಲಿ ವಾಸವಾಗಿರುವ ಟಿ.ಕೆ.ಬಿಜು (45) ಎಂಬಾತ ಈ ಶೆಡ್ ನ್ನು ಕಳೆದ ಕೆಲವು ತಿಂಗಳುಗಳ ಹಿಂದೆ ಲೀಸ್ ಗೆ ಪಡೆದುಕೊಂಡಿದ್ದ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕಿರುವ ಪೊಲೀಸರು ಆತನನ್ನು ಸೆರೆ ಹಿಡಿದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಬಗ್ಗೆ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆರೋಪಿ ಬಿಜು ವಿರುದ್ಧ ಕಲಂ: 9 ಬಿ (1) (ಬಿ) ಸ್ಪೋಟಕ ಕಾಯ್ದೆ 1884 ಮತ್ತು ಕಲಂ 5 ಸ್ಪೋಟಕ ವಸ್ತುಗಳ ಕಾಯ್ದೆ 1908 ಮತ್ತು ನಿಯಮ 113 ಸ್ಪೋಟಕ ನಿಯಮ 1983 ಮತ್ತು ನಿಯಮ 11 ಅಮೋನಿಯಂ ನೈಟ್ರೇಟ್‌ ರೂಲ್ಸ್‌ 2012 ರಂತೆ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ.

ಈ ವಿಶೇಷ ಕಾರ್ಯಾಚರಣೆಯಲ್ಲಿ ಎಎಸ್ಪಿ ಡಾ.ಸುಮನಾ ಜೊತೆಗೆ ಕಾರ್ಕಳ ವೃತ್ತ ನಿರೀಕ್ಷಕರು, ಉಡುಪಿಯ ಡಿಸಿಐಬಿ ಪೊಲೀಸರು ಭಾಗಿಯಾಗಿದ್ದರು.

ಹಿಂದೆ ಕೂಡಾ ಪೊಲೀಸರು ಕಾರ್ಯಚರಣೆ ನಡೆಸಿದ್ದರು.

2007ರಲ್ಲಿ ಅಂದಿನ ಎಎಸ್ಪಿ ಲಾಬೂ ರಾಮ್ ಅವರು ಅಜೆಕಾರಿನಲ್ಲಿ ನಡೆಸಿದ ಕಾರ್ಯಚರಣೆಯೊಂದರಲ್ಲಿ ಬೃಹತ್ ಪ್ರಮಾಣದಲ್ಲಿ ಸ್ಪೋಟಕ ಪರಿಕರಗಳನ್ನು ವಶಪಡಿಸಿಕೊಂಡು ಆರೋಪಿ ಟಿ.ಕೆ.ಬಿಜುವನ್ನು ಬಂಧಿಸಿದ್ದರು.

2011ರಲ್ಲಿ ಕೇರಳ ಪೊಲೀಸರು ಕಾರ್ಕಳಕ್ಕೆ ಅಗಮಿಸಿ ಕಾರ್ಕಳ ಪೊಲೀಸರ ಸಹಕಾರದೊಂದಿಗೆ ಬಿಜುವನ್ನು ಬಂಧಿಸಿ ಕೇರಳಕ್ಕೆ ಕರೆದೊಯ್ಯಿದ್ದರು.

2014 ಮಾರ್ಚ್ ತಿಂಗಳಲ್ಲಿ ಅಂದಿನ ಕಾರ್ಕಳ ಎಎಸ್ಪಿ, ಹಾಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಕೆ.ಅಣ್ಣಾಮಲೈ ಐಪಿಎಸ್ ಅವರು ನಕ್ರೆ ಬಳಿಯ ವರ್ಣಬೆಟ್ಟು ಎಂಬಲ್ಲಿ ದಾಳಿ ನಡೆಸಿ 4 ಲೋಡ್ ನಷ್ಟು ಅಮೋನಿಯಂ ನೈಟ್ರೆಡ್ ಪತ್ತೆ ಮಾಡಿ ಪ್ರಕರಣದ ಆರೋಪಿ ಬಿಜು ಥೋಮಸ್ ನನ್ನು ಬಂಧಿಸಿದ್ದರು.

Leave a Reply

Your email address will not be published. Required fields are marked *