Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಹದಿಹರೆಯ: ಮಕ್ಕಳಲ್ಲಿನ ಬದಲಾವಣೆ, ಸ್ಕೋಲಿಯೋಸಿಸ್, ರಕ್ಷಕ-ಶಿಕ್ಷಕರ ಗೊಂದಲ ಇತ್ಯಾದಿ…

ಭಾಗ-2

# ಡಾ.ಶ್ರೀಗಣೇಶ್ ರವರು, ಟೀಚರ್ ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಲಾರರಂಭಿಸಿದರು…
ಮಕ್ಕಳ ಶಾಲಾ ಬ್ಯಾಗ್ ಬಗ್ಗೆ ಟೀಚರ್ ರವರ ಕಾಳಜಿ ಸ್ವಾಗತಾರ್ಹವೇ ಆಗಿತ್ತು. ಅದೊಂದು ನಿಜವಾಗಿಯೂ ಬಹಳ ಪ್ರಮುಖವಾದ ವಿಚಾರವೇ ಆಗಿದೆ.

ಯಾಕೆಂದರೆ, ಹಲವಾರು ಮಂದಿ ಸಣ್ಣ ಮಕ್ಕಳು ಸ್ಕೂಲ್ ಬ್ಯಾಗ್ ನ್ನು ಹೊತ್ತುಕೊಂಡು ಶಾಲೆಗೆ ಹೋಗುವುದರ ಪರಿಣಾಮವಾಗಿ ಮೂಳೆ ಸ್ನಾಯುಗಳ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ‘ಸ್ಕೋಲಿಯೊಸಿಸ್’ ಎಂಬ ಒಂದು ಸಮಸ್ಯೆ, ಮಕ್ಕಳಿಗೆ ಬಹಳ ಭಾರದ ಬ್ಯಾಗ್ ಗಳನ್ನು ಹೊತ್ತುಕೊಳ್ಳುವುದರಿಂದ ಉಂಟಾಗುತ್ತದೆ.

ಮೂಳೆರೋಗ ತಜ್ಞರ ಪ್ರಕಾರ, ಮಗುವಿನ ತೂಕದ ಶೇಕಡ ೧೦ ಶಾಲೆಯ ಬ್ಯಾಗ್ ನ ತೂಕವಿರಬೇಕು. ಹೆಚ್ಚು ತೂಕವಿದ್ದಲ್ಲಿ, ಮಗು ಮುಂದಕ್ಕೆ ಬಗ್ಗಿ ಸ್ಕೋಲಿಯೋಸಿಸ್ ಉಂಟಾಗುತ್ತದೆ. ಶಾಲೆಗಳು ಆದಷ್ಟು ಮಟ್ಟಿಗೆ ಕಡಿಮೆ ಪುಸ್ತಕಗಳನ್ನು ಮನೆಯಿಂದ ತರಿಸಿಕೊಂಡು, ಆದಷ್ಟು ಶಾಲೆಯಲ್ಲಿ ಓದು ಬರಹ ಮುಗಿಸುವುದು ಸೂಕ್ತ ಎಂದು ಡಾ.ಶ್ರೀಗಣೇಶ್ ತಿಳಿಸಿದರು.

ಒಂದು ಬೆಂಚ್ ನಲ್ಲಿ ಎಷ್ಟು ಜನ ಕುಳಿತುಕೊಳ್ಳುವುದು ಸೂಕ್ತ ? ಎನ್ನುವ ಪ್ರಶ್ನೆಗೆ, ಮಕ್ಕಳು ಕುಳಿತುಕೊಳ್ಳಲು ಇಕ್ಕಟ್ಟು ಆಗುತ್ತದೆಂದು ತಿಳಿಸಿದರೆ; ಅದರತ್ತ ಶಾಲೆಯು ಗಮನ ಕೊಡಲೇಬೇಕು. ಈ ತರಹದ ಪ್ರಶ್ನೆಗಳು ಶಾಲೆಯ ಆಡಳಿತ ಮಂಡಳಿಗೆ ಬೇಸರ ತರಬಹುದು. ಆದರೆ, ಮಕ್ಕಳು ಕುಳಿತುಕೊಳ್ಳುವ ಪೀಠೋಪಕರಣ ಮಕ್ಕಳಿಗೆ ಆರಾಮದಾಯಕವಾಗಿರಬೇಕು, ಇಲ್ಲದಿದ್ದರೆ ಅವರ ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ ಎಂದು ಡಾ.ಶ್ರೀಗಣೇಶ್ ಹೇಳಿದರು.

ಮಕ್ಕಳ ಶೋಷಣೆಯ ಬಗೆಗಿನ ಪ್ರಶ್ನೆಗಳು ಬಂದಾಗ, ಡಾ.ಶ್ರೀಗಣೇಶರಿಗೆ ತುಂಬಾ ಖುಷಿಯುಂಟುಮಾಡಿತು. ಯಾಕೆಂದರೆ, ಅವರಿಗೆ ಈ ಹಳ್ಳಿಯಲ್ಲಿ ಇಂತಹ ಪ್ರಶ್ನೆಗಳು ಯಾರಾದರು ಕೇಳಬಹುದು ಎಂದು ನಿರೀಕ್ಷೇ ಇರಲಿಲ್ಲ. ಮಕ್ಕಳಿಗೆ ಒಂದನೇ, ಎರಡನೆಯ ತರಗತಿಯಲ್ಲಿಯೇ ಗುಡ್ ಯಾ ಬ್ಯಾಡ್ ಟಚ್  ಬಗ್ಗೆ ಮಾಹಿತಿ ಕೊಡಬೇಕು. ಏಕೆಂದರೆ, ಹಲವು ಮಂದಿ ವಿಕೃತಕಾಮಿಗಳು; ಏನು ತಿಳಿಯದ ಮುಗ್ಧ ಮಕ್ಕಳಿಗೆ ಲೈಂಗಿಕವಾಗಿ ಶೋಷಿಸುತ್ತಾರೆ. ಈ ಮಕ್ಕಳಿಗೆ ತಮ್ಮ ತಾಯಿ ತಂದೆ ಹೊರತುಪಡಿಸಿ ಯಾರೇ ಆಗಲಿ ತಮ್ಮ ಎದೆ, ತೊಡೆಗಳ ನಡುವೆ ಗುಪ್ತಾಂಗಗಳನ್ನು ಮುಟ್ಟಲು ಬಿಡಬಾರದೆಂದು ಮಾಹಿತಿ ಇರಬೇಕು. ವೈದ್ಯರು ಕೂಡ ತಾಯಿ ತಂದೆಯರ ಸಮ್ಮುಖದಲ್ಲಿ ಪರೀಕ್ಷೆ ಮಾಡಬೇಕು ಎಂಬುದು ತಿಳಿದಿರಬೇಕು ಎಂದು ವಿವರ ನೀಡಿದರು.

ಡಾ.ಶ್ರೀಗಣೇಶ್ ರಿಗೆ ಬಹಳ ಪ್ರಿಯವಾದ ಪ್ರಶ್ನೆ, ಪಠ್ಯೆತರ ಚಟುವಟಿಕೆಗಳ ಬಗ್ಗೆ ಶಶಿಕಲಾ ಟೀಚರ್ ಕೇಳಿದ ಪ್ರಶ್ನೆಯಾಗಿತ್ತು. ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ವಿಷಯಗಳ ಅವಧಿಗಳು ಸಮಾನವಾಗಿರಬೇಕು. ಮಕ್ಕಳ ಸೃಜನಶೀಲತೆ ಹೆಚ್ಚಿಸುವಲ್ಲಿ ಪಠ್ಯೇತರ ಚಟುವಟಿಕೆಗಳ ಪಾತ್ರ ಹೆಚ್ಚು ಎಂಬುದನ್ನು ಅವರು ಮನವರಿಕೆ ಮಾಡಿಕೊಟ್ಟರು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯವೆಂದು ತಮ್ಮ ಸ್ವಂತ ಅನುಭವದಿಂದ ಅವರು ತಿಳಿಸಿಕೊಟ್ಟರು.

ಒಟ್ಟಾರೆ, ಹಳ್ಳಿಯ ಶಾಲೆಗಳಲ್ಲಿ ಮಕ್ಕಳಿಗೆ, ಪೋಷಕರಿಗೆ ಹಾಗೂ ಶಿಕ್ಷಕರಿಗೆ ಈ ಎಲ್ಲಾ ವಿಚಾರಗಳ ಬಗ್ಗೆ ಮಾಹಿತಿ ನೀಡಬೇಕು ಎಂಬ ಡಾಕ್ಟರ್ ರವರ ಆಶಯ ಈಡೇರಿತು. ಇದೊಂದು ಅವಿಸ್ಮರಣೀಯ ಅನುಭವವಾಗಿಯೂ ಡಾಕ್ಟರ್ ಡೈರಿಯಲ್ಲಿ ದಾಖಲಾಯಿತು.

Leave a Reply

Your email address will not be published. Required fields are marked *