Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಅಪಘಾತ: ದಂಪತಿಗಳ ಮೃತ್ಯು- ಪ್ರಯಾಣಿಕರಿಗೆ ಗಂಭೀರ ಗಾಯ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66ರ ಹೊಸಂಗಡಿ ಬಳಿಯ ವಾಮಂಜೂರು ಚೆಕ್ ಪೋಸ್ಟ್ ಬಳಿ ಇಂದು ಸಂಜೆ ಕಾರು, ಟ್ಯಾಂಕರ್ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ದಂಪತಿಗಳು ಮೃತಪಟ್ಟು ಇತರ ನಾಲ್ವರು ಗಾಯಗೊಂಡ ಘಟನೆ ನಡೆದಿದೆ.

ಮಂಗಳೂರು ಕಡೆಯಿಂದ ಬಂದ್ಯೋಡು ಕಡೆಗೆ ಸಾಗುತ್ತಿದ್ದ ಆಲ್ಟೋ ಕಾರು, ವಾಮಂಜೂರು ಚೆಕ್ ಪೋಸ್ಟ್ ಬಳಿ ಟ್ಯಾಂಕರ್ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆಯಿತು. ಇದರಿಂದಾಗಿ ಕಾರಲ್ಲಿದ್ದ ಬಂದ್ಯೋಡು ಬಳಿಯ ಹೇರೂರು ನಿವಾಸಿ ಉಮೇಶ್ (65) ಹಾಗೂ ಇವರ ಪತ್ನಿ ಶಾರದಾ (62) ಮೃತಪಟ್ಟರು.

apaghatha-2

ಶಾರದಾ ಸ್ಥಳದಲ್ಲೇ ಮೃತರಾದರೆ, ಉಮೇಶ್ ಆಸ್ಪತ್ರೆಯಲ್ಲಿ ಮೃತರಾದರು. ಸಹ ಪ್ರಯಾಣಿಕರಾದ ಶೋಭಾ (19), ಸಂಗೀತಾ(6), ಮನ್ವಿತಾ(3) ಗಾಯಗೊಂಡಿದ್ದು, ಮಂಗಳೂರು ಖಾಸಗೀ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ.

ನಿತ್ಯ ಅಪಘಾತ

ವಾಮಂಜೂರು ಚೆಕ್ ಪೋಸ್ಟ್ ಪರಿಸರ ನಿತ್ಯ ಅಪಘಾತಗಳ ಕೇಂದ್ರವಾಗುತ್ತಿದ್ದು, ಹೆದ್ದಾರಿ ಪ್ರಯಾಣಿಕರಿಗೆ ತೀವ್ರ ಆತಂಕಕ್ಕೆ ಕಾರಣವಾಗುತ್ತಿದೆ. ಅವ್ಯವಸ್ಥಿತವಾಗಿ ತಪಾಸಣಾ ಹೆಸರಲ್ಲಿ ನಿಲ್ಲಿಸಲಾಗುವ ವಾಹನಗಳ ಕಾರಣ, ಹೆದ್ದಾರಿ ಸಂಚಾರ ದುರ್ಗಮವಾಗುತ್ತಿದ್ದು, ಅಧಿಕಾರಿಗಳು ಕಣ್ಣೆತ್ತಿಯೂ ನೋಡುವ ಗೊಡವೆಗೆ ಹೋಗುತ್ತಿಲ್ಲವೆಂಬ ದೂರುಗಳು ಹಲವು ವೇಳೆ ಕೇಳಿ ಬಂದಿದೆ.

Leave a Reply

Your email address will not be published. Required fields are marked *