Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ವಕೀಲರ ದಿನಾಚರಣೆ: ಸ್ವಯಂ ಪ್ರತಿಜ್ಞೆಯೊಂದಿಗೆ ವಕೀಲರ ಶುಭಾಶಯ

# ಪ್ರಜಾಪ್ರಭುತ್ವವೆಂದರೆ ಬರೇ ನಿರಾಳವಾಗಿ ಉಸಿರಾಡಲು ಮಾತ್ರವಲ್ಲ, ಅನ್ಯಾಯದ ವಿರುದ್ಧ ಸೊಲ್ಲೆತ್ತಲು ಇರುವ ಮುಕ್ತ ಅವಕಾಶ. ಎಲ್ಲಿ ಹೋರಾಟವಿಲ್ಲವೋ, ಅಲ್ಲಿ ಬಸಲಾವಣೆ, ಸುಧಾರಣೆ ಸಾಧ್ಯವಿಲ್ಲ.

ಕಾನೂನು ಬಗ್ಗೆ ಸಮಗ್ರ ಮಾಹಿತಿ ಕೊಡುವ ಮುಖಾಂತರ ಅನೇಕ ಸಂಘರ್ಷ ತಪ್ಪಿಸಿಕೊಲ್ಳಬಹುದು. ಸರಕಾರದ ವಿವಿಧ ಸೌಲಭ್ಯಗಳು ಜನರಿಗೆ ಸರಿಯಾದ ರೀತಿಯಲ್ಲಿ ಸಿಗಬೇಕಾದರೆ ಎಲ್ಲರೂ ಕಾನೂನು ಕಲಿಯಬೇಕು. ಕೇವಲ ಕಲಿತವರಿಗೆ ಮಾತ್ರ ಕಾನೂನು ಇದೆ ಎಂಬ ನಂಬಿಕೆಯನ್ನು ಜನಸಾಮಾನ್ಯರು ಬಿಡಬೇಕು. ಹುಟ್ಟಿದ ಮಗುವಿನಿಂದ ಹಿಡಿದು ಸಾಯುವರೆಗೂ ಕೂಡಾ ಪ್ರತಿ ವ್ಯಕ್ತಿ ಕಾನೂನಿನ ಚೌಕಟ್ಟಿನಲ್ಲೇ ಬಾಳಬೇಕು.

ಕಾನೂನು, ಸಂವಿಧಾನ ಗೌರವಿಸಿ ಅದರಂತೆ ನಡೆಯುವ ವಕೀಲನಿಗೆ ಸಾಮಾಜಿಕ ಜವಾಬ್ದಾರಿ ಪಾಲಿಸುವ ಗುರುತರ ಹೊಣೆಗಾರಿಕೆ ಇದೆ. ಜನಸಾಮಾನ್ಯರ ಧ್ವನಿಯಾಗಬೇಕಾದ ಅಗತ್ಯತೆ ನ್ಯಾಯವಾದಿಯದ್ದು. ತಮ್ಮ ವೃತ್ತಿ ಜೀವನದ ಜತೆ ಸಮಾಜ ಚಿಂತನೆ ಮಾಡಿ, ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಎಲ್ಲಾ ವಕೀಲ ಸಮುದಾಯದ ಆದ್ಯ ಕರ್ತವ್ಯ. ವಕೀಲ ದಿನಾಚರಣೆಯ ಶುಭ ದಿನದ ಇಂದು ಎಲ್ಲಾ ವಕೀಲರಿಗೂ ಶುಭಾಶಯಗಳು.

– ಪಿ.ಆರ್.ಭಂಡಾರ್ಕರ್, ನ್ಯಾಯವಾದಿ, ಉಡುಪಿ, ಮೊಬೈಲ್: 09886163575.

# ಯಾವನೇ ಒಬ್ಬ ವಕೀಲನ ಯಶಸ್ಸಿನ ಹಾದಿಗೆ ಹದಿನೆಂಟು ಅಂಶಗಳು ಪ್ರಮುಖ ಕಾರಣಗಳಾಗುತ್ತವೆ. ಧೈರ್ಯ, ಆತ್ಮ ವಿಶ್ವಾಸ, ನಿಶ್ಚಿತ ಗುರಿ, ಸಂಯಮ, ಶ್ರದ್ಧೆ, ಆಶಾವಾದ, ನೈತಿಕ ಪ್ರಜ್ಞೆ, ಅರ್ಪಣಾ ಭಾವನೆ, ಜ್ಞಾನಕ್ಕೆ/ಕಾನೂನಿಗೆ ಸಂಬಂಧಿಸಿದ ತರ್ಕ, ಸ್ಥಿತ ಪ್ರಜ್ಞತೆ, ಸಮಯ ಪಾಲನೆ, ಸೃಜನಶೀಲತೆ, ಛಲ, ಕರುಣೆ, ಅನುಕಂಪ, ಹಾಸ್ಯ ಪ್ರಜ್ಞೆ, ಮಾನವೀಯ ಮೌಲ್ಯ ಮತ್ತು ಸಮಾಜದ ಸೌಖ್ಯ ಚಿಂತನೆ.

ಗೆಲುವಿಗೆ ಮೂಲಾಧಾರ ಸ್ಥಿರ ಚಿತ್ತ ಮತ್ತು ಏಕಾಗ್ರತೆ. ತನಗೂ ಬೇರೆ ವಕೀಲರಿಗೂ ನಡುವೆ ಇರುವ ಅಭಿಪ್ರಾಯ ಬೇಧಗಳನ್ನು ಗೌರವಿಸುವುದು ವಕೀಲ ಧರ್ಮದ ಪರಾಕಾಷ್ಠೆ. ಸೋಲು, ಗೆಲುವು ವಕೀಲರಿಗೆ ಇದ್ದದ್ದೆ. ಸೋ ಹೋಗುತ್ತೇನೆಂಬ ಭಯವನ್ನು ಗೆಲ್ಲುವುದೇ ನಿಜವಾದ ಜಯ.

ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವವನ್ನು ಒಂದಿರುವ ನಮ್ಮ ದೇಶದ ಸಂವಿಧಾನವು ಪ್ರತಿ ಪ್ರಜೆಯೂ ಅನ್ಯಾಯಕ್ಕೊಳಗಾದಾಗ ಯಾವುದೇ ತಾರತಮ್ಯಕ್ಕೊಳಗಾಗದೆ ನ್ಯಾಯ ದೊರಕಿಸಿಕೊಳ್ಳುವ ಸಮಾನ ಅವಕಾಶದ ಭರವಸೆಯನ್ನು ಕೊಡಮಾಡಿದೆ. ನಮ್ಮ ಸಂವಿಧಾನವೆಂಬುದು ಧರ್ಮಗ್ರಂಥ. ಧರ್ಮದ ಶ್ರದ್ಧಾಳುಗಳಾಗಿ ತಮ್ಮ ಧರ್ಮಗ್ರಂಥಕ್ಕೆ ಗೌರವವನ್ನು ಸಲ್ಲಿಸುವಂತೆ ಈ ದೇಶದ ನಾಗರಿಕರಾಗಿ ನಮ್ಮ ದೇಶದ ಸಂವಿಧಾನಕ್ಕೆ ಗೌರವ ಸಲ್ಲಿಸುವುದು ಎಲ್ಲಾ ವಕೀಲರುಗಳ ಅದರಲ್ಲೂ ಯುವ ವಕೀಲರುಗಳ ಪವಿತ್ರ ಕರ್ತವ್ಯ.

ಕ್ಷಿಪ್ರಗತಿಯ ನ್ಯಾಯ ನೀಡಿಕೆಯು ಸಾಮಾಜಿಕ ನ್ಯಾಯದ ಪ್ರಮುಖ ಅಂಗವೆಂಬುದಾಗಿ ತಿಳಿದು, ಎಲ್ಲಾ ನ್ಯಾಯವಾದಿಗಳು, ಅದರಲ್ಲೂ ಯುವ ನ್ಯಾಯವಾದಿಗಳು ತಿಳಿಯತಕ್ಕದ್ದು ಮತ್ತು ಈ ನಿಟ್ಟಿನಲ್ಲಿ ನ್ಯಾಯಾಲಯಗಳಿಗೆ ತಮ್ಮ ಸಂಪೂರ್ಣ ಸಹಕರವನ್ನು ನೀಡುವುದು ಪ್ರತಿಯೊಬ್ಬ ನ್ಯಾಯವಾದಿಯ ಪರಮ ಕರ್ತವ್ಯ. ಇಂದಿನ ವಕೀಲರ ಪವಿತ್ರ ದಿನದಂದು ನಾವು ಈ ಸಿದ್ಧಾಂತಕ್ಕೆ ಕಂಕಣಬದ್ಧರಾಗೋಣ.

– ಪ್ರವೀಣ್ ಎಂ.ಪೂಜಾರಿ, ನ್ಯಾಯವಾದಿ, ಉಡುಪಿ, ಮೊಬೈಲ್: 9845702258.

# ಸತ್ಯ ಯಾವುದೆಂದು ಗೊತ್ತಿದ್ದೂ ಆ ಕೆಲಸವನ್ನು ಮಾಡದಿರುವುದಕ್ಕೆ ಮುಖ್ಯ ಕಾರಣ, ಧೈರ್ಯ ಇಲ್ಲದಿರುವುದು. ಪುಕ್ಕಲುಗಳಾಗುವುದು ಬೇಡ. ಇದರಿಂದ ಸತ್ಯಕ್ಕೆ ಸಾವಾಗಬಹುದು. ನಾನೊಬ್ಬ ಯುವ ನ್ಯಾಯವಾದಿಯಾಗಿ; ಸತ್ಯಕ್ಕಾಗಿ, ಅನ್ಯಾಯದ ವಿರುದ್ಧ ನಿರಂತರ ಹೋರಾಟ ನಡೆಸುವುದು ನನ್ನ ಆದ್ಯ ಪರಮ ಕರ್ತವ್ಯವೆಂದು ವಕೀಲರ ದಿನಾಚರಣೆಯ ಸಂಭ್ರಮದ ಈ ದಿನದಂದು ಪರಿಗಣಿಸುತ್ತೇನೆ. ಅನ್ಯಾಯದೊಡನೆ ರಾಜಿ ಮಾಡಿಕೊಳ್ಳುವುದಕ್ಕಿಂತ ದೊಡ್ಡ ಅಪರಾಧ ಇನ್ನೊಂದಿಲ್ಲ.

vivek pai
– ವಿವೇಕ್ ಪೈ ಸಿ., ನ್ಯಾಯವಾದಿ, ಉಡುಪಿ, ಮೊಬೈಲ್: 9886481160.

@ ದಿನಾಂಕ 03.12.2015ರಂದು ವಕೀಲರ ದಿನಾಚರಣೆ. ವಕೀಲರ ದಿನಾಚರಣೆಯ ಶುಭ ಸಂದರ್ಭದಲ್ಲಿ ಉಡುಪಿಯ ದಕ್ಷ, ಪ್ರಾಮಾಣಿಕ, ಸತ್ಯ ನಿಷ್ಠುರ ವಕೀಲರು ನೀಡಿದ ಸಂದೇಶ/ಪ್ರತಿಜ್ಞೆಗಳನ್ನು ಇಲ್ಲಿ ಪ್ರಕಟಿಸಲಾಗಿದೆ. – ಸಂಪಾದಕ.

Leave a Reply

Your email address will not be published. Required fields are marked *