Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನರ್ಸಿಂಗ್ ವಿದ್ಯಾರ್ಥಿನಿ ನಾಪತ್ತೆ

ಉಡುಪಿ: ಕುಂದಾಪುರ ತಾಲೂಕು ಯಡ್ತರೆ ಗ್ರಾಮದ ಬೈಂದೂರು ಜ್ಯೂನಿಯರ್ ಕಾಲೇಜು ಬಳಿಯ ಗೀತಾ ನಿಲಯದ ನಿವಾಸಿ ಶರ್ಮಿಳಾ ರಾವ್ ಯಾನೆ ನಿಧಿ (21) ಎಂಬಾಕೆ ಡಿಸೆಂಬರ್ 7ರಂದು ಬೆಳಿಗ್ಗೆ 7 ಗಂಟೆಗೆ ಎಂದಿನಂತೆ ಕೋಟಾ ಆಶ್ರೀತಾ ನರ್ಸಿಂಗ್ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋದವಳು ಮನೆಗೆ ಮರಳದೆ ನಾಪತ್ತೆಯಾಗಿದ್ದಾಳೆ.
ನರ್ಸಿಂಗ್ ನಿದ್ಯಾರ್ಥಿನಿಯಾಗಿರುವ ಶರ್ಮಿಳಾ ರಾವ್, ಬೈಂದೂರು ಜ್ಯೀನಿಯರ್ ಕಾಲೇಜು ಬಳಿ ಇರುವ ತನ್ನ ದೊಡ್ಡಮ್ಮ ಶ್ರೀಮತಿ ಆಶಾ ಕಿಶೋರ್ ರವರ ಮನೆಯಲ್ಲಿ ವಾಸ್ತವ್ಯವಿದ್ದು, ಕಾಲೇಜಿಗೆ ಹೋಗುತ್ತಿದ್ದಳು.
ಈಕೆಯ ನಾಪತ್ತೆ ಪ್ರಕರಣದ ಬಗ್ಗೆ, ಆಶಾ ಕಿಶೋರ್ ನೀಡಿದ ದೂರಿನಂತೆ ಬೈಂದೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *