Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಪ್ರಪಾತಕ್ಕೆ ಬಿದ್ದ ಮ್ಯಾಕ್ಸಿಕ್ಯಾಬ್: ಶಿಕ್ಷಕ ಮೃತ್ಯು, ಚಾಲಕನಿಗೆ ಗಂಭೀರ, 20 ವಿದ್ಯಾರ್ಥಿಗಳಿಗೆ ಗಾಯ

ಕಾರ್ಕಳ: ಮಾಳ ಎಸ್.ಕೆ ಬಾರ್ಡರ್ ನ ಪ್ರಪಾತಕ್ಕೆ ಮ್ಯಾಕ್ಸಿಕ್ಯಾಬ್ (ಕೆಎ 25 8854) ಉರುಳಿ ಬಿದ್ದಿದ್ದು, ಅಪಘಾತದಿಮದಾಗಿ ಶಿಕ್ಷಕರೊಬ್ಬರು ಮೃತಪಟ್ಟು, ಚಾಲಕ ಗಂಭಿರವಾಗಿ ಗಾಯಗೊಂಡಿದ್ದು, 20 ಮಂದಿ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಡಿಸೆಂಬರ್ 24ರ ಸಂಜೆ ಸಂಭವಿಸಿದೆ.

ಧಾರವಾಡ ಜಿಲ್ಲೆ ಕಲಘಟಕಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ವಾರ್ಷಿಕ ಪ್ರವಾಸದ ಸಂದರ್ಭದಲ್ಲಿ ಈ ಭೀಕರ ಅಪಘಾತ ನಡೆದಿದೆ. ಡಿಸೆಂಬರ್ 23ರ ನಸುಕಿನ ಜಾವ 28 ಮಂದಿ ವಿದ್ಯಾರ್ಥಿಗಳು, ಇಬ್ಬರು ಶಾಲಾ ಶಿಕ್ಷಕರು ಹಾಗೂ 3 ಮಂದಿ ಎಸ್.ಡಿ.ಎಂ.ಸಿ. ಸದಸ್ಯರಿದ್ದ ಮಂದಿಯ ತಂಡವು 2 ಮ್ಯಾಕ್ಸಿಕ್ಯಾಬ್ ಗಳಲ್ಲಿ ಕಲಕಟ್ಟಿಗೆ ಬೆಂಡಲಗಟ್ಟಿಯಿಂದ ಗೋಕರ್ಣ, ಉಡುಪಿ, ಶೃಂಗೇರಿ, ಹೊರನಾಡುನಿಂದ ಧರ್ಮಸ್ಥಳ ಕ್ಷೇತ್ರಕ್ಕೆ ಪ್ರವಾಸ ಹೊರಟಿತ್ತು. ನಿನ್ನೆ ಸಂಜೆ ತಾಂತ್ರಿಕ ದೋಷಕ್ಕೊಳಗಾದ ವಾಹನ, ಚಾಲಕನ ನಿಯಂತ್ರಣ ಕಳೆದುಕೊಂಡು ಎಸ್.ಕೆ ಬಾರ್ಡರ್ ನ ಪ್ರಪಾತಕ್ಕೆ ಉರುಳಿ ಬಿದ್ದಿದೆ.

ಅಪಘಾತದ ಪರಿಣಾಮವಾಗಿ ಶಾಲಾ ಶಿಕ್ಷಕ ಬಸವರಾಜ (35) ಎಂಬವರು ದಾರುಣವಾಗಿ ಮೃತಪಟ್ಟಿದ್ದಾರೆ. ಚಾಲಕನ ತಲೆ ಮತ್ತು ಭುಜಕ್ಕೆ ತೀವ್ರ ತರದ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. 20 ಮಂದಿ ವಿದ್ಯಾರ್ಥಿಗಳು ಸಣ್ಣ ಪುಟ್ಟ ರೀತಿಯಲ್ಲಿ ಗಾಯಗೊಂಡಿದ್ದಾರೆ.

sk border-2sk border-1

ಮಾಹಿತಿ ತಿಳಿಯುತ್ತಿದ್ದಂತೆಯೇ 108 ಅಂಬುಲೆನ್ಸ್ ಮತ್ತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕೃಷ್ಣಮೂರ್ತಿ ನೇತೃತ್ವದ ಪೊಲೀಸ್ ಪೊಲೀಸರ ತಂಡ ಘಟನಾ ಸ್ಥಳಕ್ಕೆ ತೆರಳಿ ತುರ್ತು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ದಾರಿಹೋಕರು ಹಾಗೂ ಸ್ಥಳೀಯ ನಾಗರಿಕರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವಲ್ಲಿ ನೆರವಾಗಿದ್ದಾರೆ. ಈ ಬಗ್ಗೆ, ಚಂದ್ರಶೇಖರಯ್ಯ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಸಚಿವ, ಮಾಜಿ ಶಾಸಕ ಭೇಟಿ: ಸಂತ್ವಾನ

ನಗರಾಭಿವೃದ್ಧಿ ಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ, ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ಹೆಗ್ಡೆ, ಪುರಸಭಾ ಅಧ್ಯಕ್ಷೆ ರಹಮತ್ ಎಸ್.ಶೇಖ್ ಮೊದಲಾದವರು ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳಿಗೆ ಧೈರ್ಯ ತುಂಬಿದರು.

sk border-4sk border-3

Leave a Reply

Your email address will not be published. Required fields are marked *