Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಕ್ಕಳಾಗದ ಚಿಂತೆ: ಯಲ್ಲಾಪುರದ ವಿವಾಹಿತೆ ಹೆಬ್ರಿ ಬಳಿ ನೇಣಿಗೆ ಶರಣು

ಉಡುಪಿ: ಕಾರ್ಕಳ ತಾಲೂಕು ಶಿವಪುರ ಖಜಾನೆ ಎಂಬಲ್ಲಿ ಬಾಡಿಗೆ ಮನೆ ನಿವಾಸಿ ಪ್ರಕಾಶ್ ರವರ ಪತ್ನಿ ಲಕ್ಷ್ಮಿ (22) ಎಂಬಾಕೆ ನೇಣು ಬಿಗಿದು ದೇಹಹತ್ಯೆ ಮಾಡಿಕೊಂಡಿದ್ದಾಳೆ.
ಮದುವೆಯಾಗಿ ಎಂಟು ತಿಂಗಳಾದರೂ ಮದುವೆಯಾಗಿಲ್ಲ ಎಂಬ ಕೊರಗು ಇದಕ್ಕೆ ಕಾರಣವೆನ್ನಲಾಗಿದೆ. ಈಕೆ, ಮೂಲತಹ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಮುಂಡಗೋಡು ರಸ್ತೆಯ ರವೀಂದ್ರ ನಗರ ನಿವಾಸಿ ಹನುಮಂತ ಎಂಬವರ ಪುತ್ರಿಯಾಗಿದ್ದಾಳೆ. ಮೂಲತಹ ಕಾರವಾರ ನಿವಾಸಿಯಾಗಿದ್ದು, ಪ್ರಸ್ತುತ ಶಿವಪುರದ ಕೃಷರ್ ಒಂದರಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿರುವ ಪ್ರಕಾಶ್ ರನ್ನು ಪ್ರೀತಿಸಿ ಮದುವೆಯಾಗಿದ್ದಳು. ಈಕೆ 15 ದಿನಗಳ ಹಿಂದೆಯಷ್ಟೇ ಶಿವಪುರದ ಬಾಡಿಗೆ ಬಂದಿದ್ದಳು.
ಘಟನೆ ಬಗ್ಗೆ, ಮೃತ ಲಕ್ಷ್ಮಿಯ ಅಣ್ಣ ತಪ್ಪಣ್ಣ ನೀಡಿದ ಹೇಳಿಕೆಯಂತೆ ಹೆಬ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *