Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬೂತಯ್ಯ – ಶತ ದಿನೋತ್ಸವ

# ಇದು ಸ್ಥಿರಚಿತ್ರ ಛಾಯಾಗ್ರಾಹಕ ಪ್ರಗತಿ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಫೋಟೋ. ಬೆಂಗಳೂರಿನ ವುಡ್ ಲ್ಯಾಂಡ್ಸ್ ಹೋಟೆಲ್ ನಲ್ಲಿ ನಡೆದ ‘ಬೂತಯ್ಯನ ಮಗ ಅಯ್ಯು’ (1974) ಶತದಿನೋತ್ಸವದ ಸಂದರ್ಭ.
ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಡಾ.ರಾಜಕುಮಾರ್, ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್, ಚಿತ್ರ ಸಾಹಿತಿ ಹುಣಸೂರು ಕೃಷ್ಣಮೂರ್ತಿ ಚಿತ್ರದಲ್ಲಿದ್ದಾರೆ.
ಸಾಹಿತಿ ಗೊರೂರರ ‘ವಯ್ಯಾರಿ’ ಕಥಾ ಸಂಕಲನದ ಸಣ್ಣ ಕಥೆಯೊಂದನ್ನು ಆಧರಿಸಿದ ಸಿನಿಮಾ ಇದು. ನಿರ್ದೇಶಕ ಸಿದ್ದಲಿಂಗಯ್ಯನವರು ಅಸಾಂಪ್ರದಾಯಿಕ ಶೀರ್ಷಿಕೆಯೊಂದಿಗೆ ಚಿತ್ರ ಆರಂಭಿಸಿದಾಗ ಹಲವರು ಆಡಿಕೊಂಡಿದ್ದರಂತೆ. ಆದರೆ ಎಲ್ಲರ ನಿರೀಕ್ಷೆಯನ್ನು ಹುಸಿಯಾಗಿಸಿದ ಸಿನಿಮಾ, ಕನ್ನಡ ಚಿತ್ರರಂಗದ ಮೈಲುಗಲ್ಲು ಎನಿಸಿಕೊಂಡಿತು.
ನಿರ್ದೇಶಕ ಸಿದ್ದಲಿಂಗಯ್ಯ, ವರದಪ್ಪ, ಎನ್. ವೀರಾಸ್ವಾಮಿ ಮತ್ತು ಚಂದೂಲಾಲ್ ಜೈನ್ ನಾಲ್ವರೂ ಸೇರಿ ನಿರ್ಮಿಸಿದ ಈ ಚಿತ್ರಕ್ಕೆ, ಹುಣಸೂರು ಕೃಷ್ಣಮೂರ್ತಿಯವರ ಶ್ರೇಷ್ಠ ಸಂಭಾಷಣೆಯಿದೆ. ಡಿ.ವಿ.ರಾಜಾರಾಂ ಅವರ ಛಾಯಾಗ್ರಹಣ ತಂತ್ರಗಾರಿಕೆಗೆ ಚಿತ್ರದ ಅದ್ಭುತ ಕ್ಲೈಮ್ಯಾಕ್ಸ್ ಸಾಕ್ಷ್ಯ ನುಡಿಯುತ್ತದೆ.
ನಟರಾದ ವಿಷ್ಣುವರ್ಧನ್, ಲೋಕೇಶ್, ಎಂ.ಪಿ.ಶಂಕರ್, ಲೋಕನಾಥ್ ಹಾಗೂ ನಟಿಯರಾದ ಭವಾನಿ ಮತ್ತು ಎಲ್.ವಿ.ಶಾರದಾ ಅವರ ವೃತ್ತಿ ಬದುಕಿಗೆ ತಿರುವು ನೀಡಿದ ಚಿತ್ರವಿದು. ಚಿ.ಉದಯಶಂಕರ್ ಮತ್ತು ಆರ್.ಎನ್.ಜಯಗೋಪಾಲ್ ರಚಿಸಿದ ಗೀತೆಗಳಿಗೆ, ಜಿ.ಕೆ.ವೆಂಕಟೇಶ್ ಸಂಗೀತ ಸಂಯೋಜಿಸಿದ್ದಾರೆ.
chitra kate- 28.12.15

 

Leave a Reply

Your email address will not be published. Required fields are marked *