Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

SP ಅಣ್ಣಾಮಲೈ ಅವರನ್ನೇ ಉಡುಪಿಯಲ್ಲಿ ಮುಂದುವರಿಸುವಂತೆ ಸಚಿವ ಸೊರಕೆ CMಗೆ ಪತ್ರ

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿ ಕಳೆದ ಒಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಣ್ಣಾಮಲೈ ಐಪಿಎಸ್ ಅವರನ್ನು ಬರಲಿರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ವರೆಗೆ ಮುಂದುವರಿಸುವಂತೆ ಜಿಲ್ಲಾ ಉಸ್ತುವಾರೀ ಸಚಿವರೂ, ನಗರಾಭಿವೃದ್ಧಿ ಸಚಿವರೂ ಆದ ವಿನಯ ಕುಮಾರ್ ಸೊರಕೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕೋರಿಕೊಂಡಿದ್ದಾರೆ.

ಡಿಸೆಂಬರ್ 28ರಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸೊರಕೆಯವರು, ಜಿಲ್ಲೆಯಲ್ಲಿ ಕಾನೂನು ಯಾವುದೇ ಅಹಿತಕರ ಘಟನೆಗಳಿಗೆ ನೀಡದೆ ಬಹು ಎಚ್ಚರಿಕೆಯಿಂದ ಕಾರ್ಯ ಕೈಗೊಳ್ಳುತ್ತಿರುವುದರಿಂದ ಮತ್ತು ಚುನಾವಣೆ ಸಂದರ್ಭದಲ್ಲಿ ಇವರ ಸೇವೆ ಜಿಲ್ಲೆಗೆ ಅತ್ಯಗತ್ಯವಾಗಿರುವುದರಿಂದ ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಠಿಯಿಂದ ಅಣ್ಣಾಮಲೈ ಅವರನ್ನು ಉಡುಪಿ ಜಿಲ್ಲಾ ಎಸ್ಪಿಯಾಗಿ ಮುಂದುವರಿಸುವಂತೆ ಸಚಿವ ವಿನಯ ಕುಮಾರ್ ಸೊರಕೆ ಅವರು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ವಿನಂತಿಸಿಕೊಂಡಿದ್ದಾರೆ.

sorake

ಉಡುಪಿ ಶ್ರೀಕೃಷ್ಣ ದೇವಸ್ಥಾನದ ಭಾವೀ ಪರ್ಯಾಯ ಮಠಾಧೀಶರಾದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಯವರು, ಕಿಲ್ಪಾಡಿ ಚಂದ್ರಶೇಖರ ಭಟ್ ಎಬವರ ಮುಖಾಂತರ, ಅವರ ಪರಮಾಪ್ತರಾದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಒತ್ತಡ ಹಾಕಿ ಉಡುಪಿ ಎಸ್ಪಿ ಅಣ್ಣಾಮಲೈ ಅವರನ್ನು ವರ್ಗಾವಣೆಗೊಳಿಸಿ, ಅವರ ಸ್ಥಾನಕ್ಕೆ ಪ್ರಸ್ತುತ ಕಾರವಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದಿಲೀಪ್ ಎಂಬ ಬ್ರಾಹ್ನಣ ಅಧಿಕಾರಿಯನ್ನು ಉಡುಪಿ ಎಸ್ಪಿಯಾಗಿ ಬರುವಂತೆ ತೆರೆಮರೆಯಲ್ಲಿ ಅನಧೀಕೃತವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದು ಇದೀಗ ಸಾರ್ವತ್ರಿಕವಾಗಿ ಕೇಳಿ ಬರುತ್ತಿರುವ ಅಭಿಪ್ರಾಯವಾಗಿದೆ.

pejavara vishwesha theertha swameeji

ಇದರ ಜೊತೆಗೆ, ಜಿಲ್ಲೆಯಲ್ಲಿ ಭಾರೀ ಅಕ್ರಮ ವ್ಯವಹಾರ ನಡೆಸುತ್ತಿರುವ ಕೆಲವು ಮಂದಿ ರಾಜಕೀಯ ಪ್ರಭಾವಶಾಲಿ ಅದ್ಯಮಿಗಳು ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಕೇಂದ್ರ ಮಂತ್ರಿ ಆಸ್ಕರ್ ಫೆರ್ನಾಂಡಿಸ್ ಮುಖಾಂತರ ಮುಖ್ಯಮಂತ್ರಿಗಳ ಮೇಲೆ ಪ್ರಭಾವ ಬೀರಿ ಅಣ್ಣಾಮಲೈ ಅವರನ್ನು ವರ್ಗಾವಣೆಗೆ ಲಾಬಿ ನಡೆಸುತ್ತಿದ್ದಾರೆ ಎಂಬ ಮಾತುಗಳೂ ಕೇಳಿ ಬಂದಿವೆ.

oscar fernandes mp

ಈ ನಡುವೆ, ಜಿಲ್ಲೆಯ ಕೆಲವು ಸಂಘ ಸಂಸ್ಥೆಗಳು ಅಣ್ಣಾಮಲೈ ಅವರೇ ಜಿಲ್ಲಾ ಎಸ್ಪಿಯಾಗಿ ಮುಂದುವರಿಯಬೇಕು ಎಂದು ರಾಜ್ಯ ಸರಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಿದ್ದು, ವರ್ಗಾವಣೆಗೊಳಿಸಿದ್ದೇ ಆದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮುನ್ನೆಚ್ಚರಿಕೆ ನೀಡಿರುವ ವಿದ್ಯಾಮಾನವೂ ನಡೆದಿದೆ.

cm of karnataka

Leave a Reply

Your email address will not be published. Required fields are marked *