Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ನಟಭೈರವ ವಜ್ರಮುನಿ

 # ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ‘ಮಲ್ಲಮ್ಮನ ಪವಾಡ’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟ ಉದಯಕುಮಾರ್ ನಟಿಸಬೇಕಿತ್ತು. ಆದರೆ ಪುಟ್ಟಣ್ಣನವರು ಆ ಪಾತ್ರಕ್ಕೆ ವಜ್ರಮುನಿಯವರೇ ಸೂಕ್ತ ಎಂದು ಭಾವಿಸಿ ಅವರನ್ನು ಕರೆತಂದರು.
ಕಣಗಾಲ್ ಪ್ರಭಾಕರ್ ಶಾಸ್ತ್ರಿ ರಚಿಸಿದ್ದ ‘ಪ್ರಚಂಡ ರಾವಣ’ ನಾಟಕದ ಶೀರ್ಷಿಕೆ ಪಾತ್ರ ವಜ್ರಮುನಿ ಅವರಿಗೆ ದೊಡ್ಡ ಜನಪ್ರಿಯತೆ ತಂದುಕೊಟ್ಟಿತ್ತು. ದಿಟ್ಟ ನಿಲುವು, ಚೂಪು ನೋಟ, ಗಟ್ಟಿ ದನಿಯಿಂದ ವಜ್ರಮುನಿ ಪಾತ್ರಕ್ಕೆ ಘನತೆ ಒದಗಿಸಿದ್ದರು.
ನಾಟಕ ನೋಡಿ ಪ್ರಭಾವಿತರಾದ ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರು, ‘ಸಾವಿರ ಮೆಟ್ಟಿಲು’ ಚಿತ್ರಕ್ಕೆ ವಜ್ರಮುನಿ ಹೆಸರನ್ನು ಶಿಫಾರಸು ಮಾಡಿದರು. ಕಾರಣಾಂತರಗಳಿಂದ ಈ ಚಿತ್ರ ಸ್ಥಗಿತಗೊಂಡಿದ್ದರಿಂದ ‘ಮಲ್ಲಮ್ಮನ ಪವಾಡ’ ವಜ್ರಮುನಿಯವರ ಮೊದಲ ಚಿತ್ರವಾಯ್ತು.
‘ಮಲ್ಲಮ್ಮನ ಪವಾಡ’ದಲ್ಲಿ ವಜ್ರಮುನಿ ಪಾತ್ರ ಯಶಸ್ವಿಯಾಯ್ತು. ನಿರ್ದೇಶಕ ಪುಟ್ಟಣ್ಣನವರ ನಿರೀಕ್ಷೆಯನ್ನು ವಜ್ರಮುನಿ ಹುಸಿ ಮಾಡಲಿಲ್ಲ. ಮುಂದೆ ವಜ್ರಮುನಿ ಸಾಲು ಸಾಲು ಸಿನಿಮಾಗಳಲ್ಲಿ ಖಳನಟನಾಗಿ ಅಭಿನಯಿಸಿ ಚಿತ್ರ ಪ್ರೇಮಿಗಳ ಮನಗೆದ್ದರು.
ಅದರಲ್ಲೂ, ಡಾ.ರಾಜ್ ಚಿತ್ರಗಳಲ್ಲಿ ವಜ್ರಮುನಿ ಪಾತ್ರಕ್ಕೆ ವಿಶೇಷ ಮಹತ್ವವಿರುತ್ತಿತ್ತು. ಸಿನಿಮಾಟೋಗ್ರಫಿ ಪದವಿ ಪಡೆದ ವಜ್ರಮುನಿಯವರಿಗೆ ರಂಗಭೂಮಿ ಉತ್ತಮ ಅಡಿಪಾಯ ಹಾಕಿಕೊಟ್ಟಿತ್ತು. ಮುಂದೆ ಅವರು ಕನ್ನಡ ಚಿತ್ರರಂಗದ ದೊಡ್ಡ ನಟನಾಗಿ ವಿಜೃಂಭಿಸಿದರು.
ಪ್ರಮುಖ ಸಿನಿಮಾಗಳು : ಮಲ್ಲಮ್ಮನ ಪವಾಡ, ಸಂಪತ್ತಿಗೆ ಸವಾಲ್, ಗೆಜ್ಜೆ ಪೂಜೆ, ಬಹದ್ದೂರ್ ಗಂಡು, ಕಿಲಾಡಿ ಕಿಟ್ಟು, ಮಯೂರ, ದಾರಿ ತಪ್ಪಿದ ಮಗ, ಗಿರಿಕನ್ಯೆ, ಶಂಕರ್ ಗುರು, ಸಿಪಾಯಿ ರಾಮು, ಆಪರೇಷನ್ ಡೈಮಂಡ್ ರಾಕೆಟ್, ಸಾಂಗ್ಲಿಯಾನ, ಸಿ.ಬಿ.ಐ.ಶಂಕರ್, ಒಂದೇ ಗುರಿ, ಅಂತ, ತಾಳಿಯ ಭಾಗ್ಯ, ಊರಿಗೆ ಉಪಕಾರಿ, ಸಾಹಸ ಸಿಂಹ, ಚಾಣಕ್ಯ, ರಣಭೇರಿ, ಟೈಗರ್, ಚಕ್ರವ್ಯೂಹ, ಬೆಂಕಿಯ ಬಲೆ, ತಿರುಗು ಬಾಣ, ಅಪೂರ್ವ ಸಂಗಮ, ಬಬ್ರುವಾಹನ, ಬಿಡುಗಡೆ, ಬಂಗಾರದ ಮನುಷ್ಯ …
vajramuni
(ಫೋಟೋ: ಹಿರಿಯ ಸಿನಿಮಾ ಸ್ಥಿರ ಚಿತ್ರ ಛಾಯಾಗ್ರಾಹಕ ಭವಾನಿ ಲಕ್ಷ್ಮೀನಾರಾಯಣ ಅವರು ಚಿಕ್ಕಬಳ್ಳಾಪುರದ ತಮ್ಮ ಮನೆಯಲ್ಲಿ ಕ್ಲಿಕ್ಕಿಸಿದ ಫೋಟೋ ಇದು. 60-70ರ ದಶಕದ ಹಲವಾರು ಸಿನಿಮಾ ನಟ-ನಟಿಯರ ಫೋಟೋ ಶೂಟ್, ಚಿಕ್ಕಬಳ್ಳಾಪುರದ ‘ಭವಾನಿ’ ಸ್ಟುಡಿಯೋದಲ್ಲಿ ನಡೆದಿತ್ತು ಎನ್ನುವುದು ದಾಖಲಾರ್ಹ ಸಂಗತಿ)

 

Leave a Reply

Your email address will not be published. Required fields are marked *