Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕೇರಳದಲ್ಲಿ ಕಳವು ಕೃತ್ಯಕ್ಕಿಳಿದ ಕರ್ನಾಟಕ ಕಳ್ಳನ ಬಂಧನ

ಬದಿಯಡ್ಕ: ಇಲ್ಲಿನ ಮೊಬೈಲ್ ಅಂಗಡಿಯೊಂದರಿಂದ ಸೊತ್ತುಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ದ.ಕ.ಜಿಲ್ಲಾ ಬಂಟ್ವಾಳ ತಾಲೂಕು ಸಜಿಪ ಸಮೀಪದ ನಂದಾವರ ಸರಕಾರಿ ಶಾಲೆ ಬಳಿಯ ನಿವಾಸಿ ಉಮರಬ್ಬರವರ ಪುತ್ರ ಹಂಸ ಯಾನೆ ಅಬ್ದುಲ್ ಹಂಸ (19)ನನ್ನು ಪ್ರಕರಣಕ್ಕೆ ಸಂಬಂದಪಟ್ಟಂತೆ ಬಂಟ್ವಾಳ ಬಸ್ ನಿಲ್ದಾಣ ಪರಿಸರದಿಂದ ಪೊಲೀಸರು ಬಂಧಿಸಿದ್ದಾರೆ. ಈತನಿಂದ ಮೊಬೈಲ್ ನ್ನು ವಶಪಡಿಸಲಾಗಿದೆ.

ಜನವರಿ 1ರಂದು ರಾತ್ರಿ ಬದಿಯಡ್ಕ ಸರ್ಕಲ್ ಬಳಿಯ ರತೀಶ್ ವಳಮಲೆ ಅವರ ಮೊಬೈಲ್ ಅಂಗಡಿಯ ಶಟರ್ ಮುರಿದು ಮೊಬೈಲುಗಳು ಮತ್ತು ನಗದು ಕಳವುಗೈಯ್ಯಲಾಗಿತ್ತು. ಪ್ರಕರಣದಲ್ಲಿ ನೆಕ್ರಾಜೆ ಬಳಿಯ ಚೆನ್ನಡ್ಕ ನಿವಾಸಿ ಮಹಮ್ಮದ್ ಸುಹೈಲ್ ಎಂಬಾತನನ್ನು ಈಗಾಗಲೇ ಬಂಧಿಸಲಾಗಿತ್ತು.

ಬಂಧಿತ ಹಂಸನ ಅಣ್ಣ ಬದ್ರು ಎಂಬಾತ ಕೊಲೆ ಸಹಿತ ವಿವಿಧ ಕಳವು ಪ್ರಕರಣಗಳ ಆರೋಪಿಯಾಗಿದ್ದು, ಈತ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿದ್ದಾನೆ. ಈ ಹಿಂದೆ ಕಳವು ಪ್ರಕರಣದಲ್ಲಿ ಸಿಕ್ಕಿ ಬಿದ್ದಿದ್ದ ಮುಹಮ್ಮದ್ ಸುಹೈಲ್ ಕೂಡಾ ಇದೇ ಜೈಲಿನಲ್ಲಿ ಖೈದಿಯಾಗಿದ್ದನು. ಈ ಸಂದರ್ಭದಲ್ಲಿ ಅಬ್ದುಲ್ ಹಂಸ, ಅಣ್ಣ ಬದ್ರುವನ್ನು ಕಾಣಲೆಂದು ಜೈಲಿಗೆ ಬರುತ್ತಿದ್ದಾಗ ಸುಹೈಲ್ ನ ಪರಿಚಯವಾಯಿತು. ಸುಹೈಲ್ ಜೈಲಿನಿಂದ ಬಿಡುಗಡೆಗೊಂಡು ಊರಿಗೆ ಬಂದಿದ್ದನೆನ್ನಲಾಗಿದೆ. ಈತನನ್ನು ಕಾಣಲೆಂದು ಹಂಸ ಸುಹೈಲ್ ನ ಚೆನ್ನಡ್ಕದ ಮನೆಗೆ ಬರುತ್ತಿದ್ದನು. ಈ ಸಂದರ್ಭದಲ್ಲಿ ಇವರು ಮೊಬೈಲ್ ಅಂಗಡಿ ಕಳವಿಗೆ ಸ್ಕೆಚ್ ಹಾಕಿದರೆನ್ನಲಾಗಿದೆ.

ಬಂಧಿತ ಹಂಸ, ಕೇರಳದಲ್ಲಿ ಪ್ರಥಮ ಬಾರಿಗೆ ಕಳವು ಪ್ರಕರಣ ನಡೆಸಿದ್ದು, ಕರ್ನಾಟಕದಲ್ಲಿ ಈತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಈತನನ್ನು ಎರಡು ವಾರಗಳ ನ್ಯಾಯಾಂಗ ಕಸ್ಟಡಿಯಲ್ಲಿರಿಸಲು ಕಾಸರಗೋಡು ನ್ಯಾಯಾಲಯ ಆದೇಶಿಸಿದೆ. ಮೊಬೈಲ್ ಅಂಗಡಿ ಕಳವು ಪ್ರಕರಣದಲ್ಲಿ ಇವರಲ್ಲದೆ ಇನ್ನೋರ್ವ ಆರೋಪಿ ನೆಲ್ಲಿಕಟ್ಟೆ ಬಿಲಾಲ್ ನಗರ ನಿವಾಸಿಯನ್ನು ಬಂಧಿಸಲು ಬಾಕಿ ಇದೆ. ಬಂಧಿತ ಆರೋಪಿಗಳಿಂದ ಕಳವುಗೈದ ಇನ್ನೂ ಹಲವು ಮಾಲುಗಳನ್ನು ವಶಪಡಿಸಲು ಬಾಕಿಯಿದ್ದು, ಪ್ರಕರಣದ ಕುರಿತು ಇನ್ನಷ್ಟು ತನಿಖೆ ನಡೆಸಲು ಆರೋಪಿಗಳಿಬ್ಬರನ್ನು ಮರಳಿ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಹಂಸನ ಬಂಧನ ಕಾರ್ಯಾಚರಣೆಯಲ್ಲಿ ಬದಿಯಡ್ಕ ಠಾಣಾ ಎಸ್.ಐ. ದಾಮೋದರನ್ ರೊಂದಿಗೆ ಎ.ಎಸ್.ಐ. ಇ.ವಿ. ಥೋಮಸ್, ಸಿಬ್ಬಂದಿಗಳಾದ ಪಿಲಿಫ್ ಥೋಮಸ್, ಶ್ರೀರಾಘ ಸಹಕರಿಸಿದ್ದರು.

abdul hamsa

 

Leave a Reply

Your email address will not be published. Required fields are marked *