Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ರಾಸಾಯನಿಕ ಹಗರಣ – ಕೊನೆಗೂ ಲೋಕಾಯುಕ್ತದಿಂದ ಕೋರ್ಟಿಗೆ ಚಾರ್ಜ್ ಶೀಟ್: ಡಾ.ಆನಂದ ನಾಯಕ್, ಡಾ.ದಯಾನಂದ ನಾಯಕ್, ಡಾ.ಚಂದ್ರಶೇಖರ ಅಡಿಗ ಆರೋಪಿಗಳು !

ಉಡುಪಿ: ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾದ ಲಕ್ಷಾಂತರ ರು. ಮೊತ್ತದ ರಾಸಾಯನಿಕ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಸುಧೀರ್ಘ 20 ತಿಂಗಳ ಬಳಿಕ ಉಡುಪಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸಿದ್ದಾರೆ.

ಜಿಲ್ಲಾಸ್ಪತ್ರೆಯ ಸರ್ಜನ್ ಆಗಿದ್ದು, ಪ್ರಸ್ತುತ ನಿಧನರಾಗಿರುವ ಡಾ.ದಯಾನಂದ ನಾಯಕ್, ಜಿಲ್ಲಾ ಸರ್ಜನ್ ಆಗಿದ್ದು, ಪ್ರಸ್ತುತ ವೃತ್ತಿಯಿಂದ ನಿವೃತ್ತರಾಗಿರುವ ಡಾ.ಆನಂದ ನಾಯಕ್ ಹಾಗೂ ಹಾಲಿ ಫಿಸಿಶಿಯನ್ ಡಾ.ಚಂದ್ರಶೇಖರ ಅಡಿಗ ಎಂಬವರನ್ನು ದೋಷಾರೋಪಣಾ ಪಟ್ಟಿಯಲ್ಲಿ ರಾಸಾಯನಿಕ ಖರೀದಿ ಹಗರಣದ ಆರೋಪಿಗಳು ಎಂದು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ.

ಲೋಕಾಯುಕ್ತ ಪೊಲೀಸ್ ವಿಭಾಗದ ಮಂಗಳೂರು ಮತ್ತು ಉಡುಪಿ ವಿಭಾಗಗಳ ಅಧಿಕಾರಿಗಳಾಗಿದ್ದ ಡಿವೈಎಸ್ಪಿ ಉಮೇಶ್ ಶೇಟ್, ಇನ್ಸ್ ಪೆಕ್ಟರ್ ಗಳಾಗಿದ್ದ ಮೋಹನ ಕೊಠಾರಿ, ದಿಲೀಪ್ ಕುಮಾರ್, ವಿಜಯ ಪ್ರಕಾಶ್ ಹಾಗೂ ಇತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು 2014ರ ಮಾರ್ಚ್ 14ರಂದು ಜಿಲ್ಲಾಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಯ ಮಕ್ಕಳ ವಿಭಾಗದ ಆಸ್ಪತ್ರೆಗೆ ದಿಢೀರ್ ದಾಳಿ ನಡೆಸಿ ರಾಸಾಯನಿಕ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕಡತಗಳನ್ನು ಹಾಗೂ ರಾಸಾಯನಿಕಗಳನ್ನು ಪರಿಶೀಲನೆ, ತಪಾಸಣೆಗೆ ಒಳಪಡಿಸಿದ್ದರಲ್ಲದೆ, ದಾಳಿ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಆಗಿದ್ದ ಡಾ.ಆನಂದ ನಾಯಕ್ ಸಹಿತ ಸಂಬಂಧಪಟ್ಟ ಇತರರನ್ನು ವಿಚಾರಣೆಗೆ ಒಳಪಡಿಸಿದ್ದರು. ಅಗತ್ಯ ದಾಖಲೆಗಳನ್ನು ಮತ್ತು ರಾಸಾಯನಿಕಗಳ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಹಗರಣದ ತನಿಖೆಯನ್ನು ಆರಂಭದಲ್ಲಿ ಇನ್ಸ್ ಪೆಕ್ಟರ್ ಮೋಹನ ಕೊಠಾರಿ ಹಾಗೂ ಬಳಿಕ ಹಾಲಿ ಇನ್ಸ್ ಪೆಕ್ಟರ್ ಕೃಷ್ಣಾನಂದ ನಾಯಕ್ ಅವರು ನಡೆಸಿದ್ದರು.

karnataka lokayukta

ಸೂಪರ್ ಸ್ಪೆಷಾಲಿಟಿ ಹೈಟೆಕ್ ಲ್ಯಾಬ್ ಎಂಬ ಹೆಸರಲ್ಲಿ ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ಕೋಲಾರ, ಚಾಮರಾಜನಗರ, ಧಾರಾವಾಡ, ಹಾವೇರಿ, ಗುಲ್ಬರ್ಗ, ಕೊಪ್ಪಳ, ಬೀದರ್, ರಾಯಚೂರು, ಮಂಡ್ಯ, ಚಿಕ್ಕಬಳ್ಳಾಪುರ ಮತ್ತು ಗದಗ ಹೀಗೆ ರಾಜ್ಯದ 19 ಜಿಲ್ಲೆಗಳ ವಿವಿಧ ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಿಗೆ ಟೆಂಡರ್ ಕರೆಯದೆ ವಿದೇಶದಿಂದ ಎಂಆರ್ಪಿ ದರ ನಮೂದಿಲ್ಲದ ಯಂತ್ರೋಪಕರಣಗಳನ್ನು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖರೀದಿಸಲಾಗುತ್ತಿದೆ. ಇದಕ್ಕೆ ನಿರಂತರವಾಗಿ ವಿದೇಶದಿಂದಲೇ ರಾಸಾಯನಿಕಗಳನ್ನು ಖರೀದಿಸಲಾಗುತ್ತಿದೆ. ಸಂಬಂಧಿಸಿದ ಯಂತ್ರೋಪಕರಣಗಳು ಮತ್ತು ರಾಸಾಯನಿಕಗಳು ದೇಶದಲ್ಲಿಯೇ ಲಭ್ಯವಿದ್ದರೂ, ಉದ್ಧೇಶಪೂರ್ವಕವಾಗಿಯೇ ವಿದೇಶದಿಂದಲೇ ಖರೀದಿ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಐಎಎಸ್ ಅಧಿಕಾರಿಗಳ ಸಹಿತ ಆರೋಗ್ಯ ಇಲಾಖೆಯ ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಬಹುಕೋಟಿ ಹಗರಣ ನಡೆಸಿ ಸರಕಾರಕ್ಕೆ ನಷ್ಟ ಉಂಟುಮಾಡಿದ್ದಾರೆ. ಆದುದರಿಂದ ಲೋಕಾಯುಕ್ತ ಅಥವಾ ಇತರ ಯಾವುದೇ ಉನ್ನತ ಮಟ್ಟದ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ತಪ್ಪಿತಸ್ಥರನ್ನು ಗುರುತಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ಅವರು 2014ರ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಆರೋಗ್ಯ ಸಚಿವ ಯು.ಟಿ.ಖಾದರ್, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ (ಈಗ ನಿವೃತ್ತರು) ಮದನ್ ಗೋಪಾಲ್ ಮೊದಲಾದವರಿಗೆ ಮನವಿ ನೀಡಿದ್ದರು. ಮಾತ್ರವಲ್ಲ, ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹವನ್ನೂ ನಡೆಸಿದ್ದರು.

ಸರಕಾರಕ್ಕೆ ಹೀಗೆ ಮನವಿ ನೀಡಲಾದ ವಿಷಯವನ್ನು ಪತ್ರಿಕೆಗಳಿಗೆ ಬಿಡುಗಡೆಗೊಳಿಸಲಾಗಿತ್ತು, ಪತ್ರಿಕಾ ಪ್ರಕಟಣೆ ‘ವಿಜಯವಾಣಿ’, ‘ಜಯಕಿರಣ’ ಮತ್ತು www.udupibits.in ಗಳಲ್ಲಿ ಪ್ರಕಟವಾಗಿತ್ತು. ಈ ಪತ್ರಿಕಾ ವರದಿ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ರಾಸಾಯನಿಕ ಹಗರಣದ ಸಂಬಂಧ ಉಡುಪಿ ಜಿಲ್ಲಾ ಸರಕಾರೀ ಆಸ್ಪತ್ರೆಗೆ ಸೀಮಿತವಾಗಿ ಸುಮೊಟೋ ಆಗಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದರು.

chemical case patrika varadi

* 2014ರಲ್ಲಿ ಪ್ರಕಟವಾದ ಪತ್ರಿಕಾ ವರದಿ.

20 ತಿಂಗಳ ಸುಧೀರ್ಘ ತನಿಖೆಯ ಬಳಿಕ ಇದೀಗ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ದಿ.ಡಾ.ದಯಾನಂದ ನಾಯಕ್, ಡಾ.ಆನಂದ ನಾಯಕ್ ಹಾಗೂ ಡಾ.ಚಂದ್ರಶೇಖರ ಅಡಿಗ ಅವರನ್ನು ಹಗರಣದ ಆರೋಪಿಗಳೆಂದು ಗುರುತಿಸಲಾಗಿದೆ. ಆದರೆ, ಗುತ್ತಿಗೆದಾರರ ಸಹಿತ ಜಿಲ್ಲಾಸ್ಪತ್ರೆಯ ಇತರ ಅಧಿಕಾರಿಗಳನ್ನು ಆರೋಪಿಗಳ ಪಟ್ಟಿಯಲ್ಲಿ ಗುರುತಿಸದೆ ಇರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

ಹಗರಣ ರಾಜ್ಯದ 19 ಜಿಲ್ಲೆಗಳಲ್ಲಿ ನಡೆದಿದೆ. ಲೋಕಾಯುಕ್ತ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸಿದ್ದು ಉಡುಪಿ ಜಿಲ್ಲಾಸ್ಪತ್ರೆಗೆ ಮಾತ್ರ ಸೀಮಿತವಾಗಿ. ಈಗ ನಡೆಸಲಾದ ತನಿಖೆಯಲ್ಲಿ, ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಹಗರಣ ನಡೆದಿರುವುದು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪಣಾ ಪಟ್ಟಿಯಿಂದ ದೃಢಪಟ್ಟಿದೆ. ಹಾಗಾಗಿ ಇನ್ನು ಇನ್ನಷ್ಟೂ ವಿಳಂಬಿಸದೆ, ಆರೋಪಿಗಳು ನಿವೃತ್ತರಾಗುವುದನ್ನು, ಮೃತಪಡುವುದನ್ನು ಕಾಯದೆ ಸರಕಾರ ಮತ್ತು ಲೋಕಾಯುಕ್ತ ಅಧಿಕಾರಿಗಳು ಇತರ 18 ಜಿಲ್ಲೆಗಳಲ್ಲಿ ನಡೆಸಲಾದ ಬಹುಕೋಟಿ ರಾಸಾಯನಿಕ ಹಗರಣದ ತನಿಖೆಯನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲಾಸ್ಪತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿಯಾಗಿದ್ದ ಡಾ.ಶರತ್ ಕುಮಾರ್ ರಾವ್ ಅವರು ಮೊತ್ತ ಮೊದಲ ಬಾರಿಗೆ 2013ರ ಫೆಬ್ರವರಿ ಮತ್ತು ಮಾರ್ಚ್ ತಿಂಗಳುಗಳಲ್ಲಿ ರಾಸಾಯನಿಕ ಖರೀದಿ ಪ್ರಕ್ರಿಯೆಯಲ್ಲಿ ವ್ಯತ್ಯಯ ಕಂಡುಬರುತ್ತಿರುವ ಗಂಭೀರ ವಿಷಯವನ್ನು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಮದನ್ ಗೋಪಾಲ್ ಸಹಿತ ಇತರ ಕೆಲವು ಮಂದಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು.

dr.sharath kumar rao j. copy

* ಡಾ.ಶರತ್ ಕುಮಾರ್ ರಾವ್

ಈ ಬಗ್ಗೆ, ಆರೋಗ್ಯ ಇಲಾಖೆಯ ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿಗಳಾಗಿದ್ದ ಡಾ.ಕೆ.ಎಚ್,ನರಸಿಂಹಮೂರ್ತಿ ಅವರು ರಾಜ್ಯದ 19 ಜಿಲ್ಲೆಗಳಿಗೂ ತೆರಳಿ ತನಿಖೆ ನಡೆಸಿ ಹಗರಣ ನಡೆದಿರುವುದು ನಿಜ ಎನ್ನುವುದನ್ನು ದಾಖಲಿಸಿ ಸರಕಾರಕ್ಕೆ ಸಮಗ್ರವಾದ ತನಿಖಾ ವರದಿಯನ್ನು 2013ರಲ್ಲಿಯೇ ಸಲ್ಲಿಸಿದ್ದರು. ಈ ತನಿಖಾ ವರದಿಯನ್ನು ಮುಚ್ಚಿಹಾಕುವ ಸಲುವಾಗಿಯೇ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ವೈದ್ಯಕೀಯ ನಿರ್ದೇಶಕರಾದ ಡಾ.ಕೆ.ಬಿ.ಈಶ್ವರಪ್ಪ ಎಂಬವರ ಮುಖಾಂತರ ಕೇವಲ ಉಡುಪಿ ಜಿಲ್ಲಾಸ್ಪತ್ರೆಗೆ ಮಾತ್ರ ಸೀಮಿಗೊಳಿಸಿ ಕೆಲವೇ ಕೆಲವು ಮಂದಿಯ ಹೇಳಿಕೆಗಳನ್ನು ದಾಖಲಿಸಿ ತನಿಖಾ ನಾಟಕ ನಡೆಸಿ ಹಗರಣ ನಡೆದಿಲ್ಲ ಎಂಬ ಒಂದು ವರದಿಯನ್ನು ಪೂರ್ವ ನಿಯೋಜಿತ ಸಂಚಿನಂತೆ ಸಿದ್ದಪಡಿಸಿ ಸರಕಾರಕ್ಕೆ ಸಲ್ಲಿಸುವಂತೆ ಮಾಡಿ ಇಡೀ ಹಗರಣವನ್ನೇ ಮುಚ್ಚಿ ಹಾಕಿದ್ದರು.

dr.k.h.narasimhamurthy

* ಡಾ.ಕೆ.ಎಚ್.ನರಸಿಂಹಮೂರ್ತಿ

ಆರೋಗ್ಯ ಸಚಿವರಾಗಿದ್ದ ಅರವಿಂದ ಲಿಂಬಾವಳಿ, ಬಿ.ಶ್ರೀರಾಮುಲು, ಯು.ಟಿ.ಖಾದರ್ ಸಹಿತ 20ಕ್ಕೂ ಅಧಿಕ ಮಂದಿ ಸಚಿವರು, ಮಾಜಿ ಸಚಿವರು, ಐಎಎಸ್ ಅಧಿಕಾರಿಗಳ ಸಹಿತ ಹಲವಾರು ಮಂದಿ ರಾಜ್ಯ ಮಟ್ಟದ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು, ವೈದ್ಯರುಗಳನ್ನು ಈ ಬಹುಕೋಟಿ ರಾಸಾಯನಿಕ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಒಳಪಡಿಸುವ ಅಗತ್ಯವಿದ್ದು, ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಡಾ.ನರಸಿಂಹಮೂರ್ತಿ ತನಿಖಾ ವರದಿಯನ್ನು ಮುಚ್ಚಿಟ್ಟು, ಉನ್ನತ ಮಟ್ಟದ ತನಿಖೆಗೆ ಆದೇಶಿಸದೆ ಮುಚ್ಚಿ ಹಾಕಿರುವುದು ಹಗರಣದ ವ್ಯಾಪಕತೆಗೆ, ಹಗರಣದಲ್ಲಿ ಶಾಮೀಲಾಗಿರುವವರ ಪ್ರಭಾವಕ್ಕೆ ಸಾಕ್ಷಿಯಾಗಿದೆ.

u.t.khader-1madan gopal ias

* ಯು.ಟಿ.ಖಾದರ್                               * ಮದನ್ ಗೋಪಾಲ್

ರಾಸಾಯನಿಕ ಹಗರಣವನ್ನು ಮೊದಲ ಬಾರಿಗೆ ಸರಕಾರದ ಗಮನಕ್ಕೆ ತಂದ ಡಾ.ಶರತ್ ಕುಮಾರ್ ರಾವ್ ಅವರನ್ನು ಬಳಿಕ ಅತ್ಯಂತ ವ್ಯವಸ್ಥಿತವಾಗಿ ಅವರ ವಿರುದ್ಧ ಮಹಿಳೆಯೊಬ್ಬರಿಂದ ಸುಳ್ಳು ದೂರು ಕೊಡಿಸುವ ಮುಖಾಂತರ ಪರಮ ಭ್ರಷ್ಟ ಮತ್ತು ಪರಮ ದುಷ್ಟ ಅಧಿಕಾರಿಗಳು ಹಾಗೂ ಇತರ ಕೆಲವು ಮಂದಿ ಪ್ರಭಾವಶಾಲಿಗಳು ಸೇರಿಕೊಂಡು ಅಮಾನತು ಆಗುವಂತೆ ಮಾಡಿದ್ದೂ ಅಲ್ಲದೆ, ಉಡುಪಿ ಜಿಲ್ಲಾಸ್ಪತ್ರೆಯಿಂದ ವರ್ಗಾವಣೆಗೊಳಿಸುವಲ್ಲಿ ಯಶಸ್ವಿಯಾಗಿರುವುದನ್ನು ಇಲ್ಲಿ ಗಮನಿಸಬಹುದು.

dr,dhanya kumardr.m.te.reju ias

* ಡಾ.ಧನ್ಯ ಕುಮಾರ್                                            * ಡಾ.ಎಂ.ಟಿ.ರೇಜು

Leave a Reply

Your email address will not be published. Required fields are marked *