Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಗಾಯತ್ರೀ ಎಲ್ಲರನ್ನೂ ಪಾಲಿಸುತ್ತದೆ, ಪೋಷಿಸುತ್ತದೆ

# ವೇದಗಳ ಮಾತೆ ಎಂದೆನಿಸಿದ ಗಾಯತ್ರೀ ವೈದಿಕ ಕಾಲದಿಂದ ಇಂದಿನವರೆಗೂ, ಬಹಶಃ ಮುಂದೆ ಎಂದೆದೂ ಮಹಾಮಂತ್ರವಾಗಿಯೇ ಉಳಿಯುತ್ತದೆ. ಅದರ ಪ್ರತಿಯೊಮದು ಅಕ್ಷರ, ಶಬ್ದ, ಪಾದ, ಒಟ್ಟು ಮಂತ್ರದ ಬಗ್ಗೆ ವಿವರಣೆ, ಭಾಷ್ಯಗಳ ಮಹಾಪೂರವೇ ಹರಿದು ಬಂದಿದೆ.

ಇತಿಹಾಸ, ಪುರಾಣಗಳ ಗಣ್ಯ ವ್ಯಕ್ತಿಗಳು ಗಾಯತ್ರೀಯನ್ನೇ ತಮ್ಮ ಅವಲಂಬನವಾಗಿ ಸ್ವೀಕರಿಸಿದ್ದರು. ತಮ್ಮ ಸ್ತುತಿ, ಪೂಜೆ, ಉಪಾಸನೆಗಳಿಗೆ ಇದನ್ನು ಧಾರಾಳವಾಗಿ ಬಳಸುವ ಜನ ಸಾಮಾನ್ಯರು ಮಾತ್ರವಲ್ಲದೆ ವಿವಿಧ ಶ್ರೇಣಿಯ ಸಾಧಕರು, ತಮ್ಮ ಸಂಕಲ್ಪ ಹಾಗೂ ಅನುಕೂಲತೆಗಳಿಗೆ ಅನುಗುಣವಾಗಿ ಈ ಮಂತ್ರವನ್ನು ತಮ್ಮದಾಗಿಸಿದರು.

ಇತ್ತೀಚೆಗಿನ ವರ್ಷಗಳಲ್ಲೂ ಗಾಯತ್ರೀಯ ಸೃಷ್ಟ್ಯಾತ್ಮಕ ಗುಣವನ್ನು ತಮ್ಮ ಊರುಗೋಲಾಗಿಸಿಕೊಂಡ ಶ್ರೀರಾಮ ಶರ್ಮರಂತಹ ಘನ ವಿದ್ವಾಂಸರು ಸುಧೀರ್ಘ ಸಾಧನೆಯ ಮೂಲಕ ಶಾಂತಿ ಕುಂಜವೆಂಬ ಗಾಯತ್ರೀ ಪೀಠವನ್ನು ಸ್ಥಾಪಿಸಿದರು. ಇದನ್ನು ಬೆಳೆಸಿ ಒಂದು ಶ್ರೇಷ್ಠ ಜ್ಞಾನ ಕೇಂದ್ರವಾಗಿಸಿದ ಕೀರ್ತಿ ಅವರಿಗೂ ಅವರ ನಿಷ್ಠಾವಂತ ಹಿಂಬಾಲಕರಿಗೂ ಸಲ್ಲಬೇಕು.

ವೈಯಕ್ತಿಕ ನೆಲೆಯಲ್ಲಿ ಗಾಯತ್ರೀಯನ್ನೇ ತಮ್ಮ ಉಪಾಸನೆ, ಧ್ಯಾನಗಳ ಗುರಿಯಾಗಿಸಿದ ಸ್ವಾಮೀ ಸುಂದರಾನಂದ, ವಿಶ್ವಬಂಧುಗಿರಿ (ಬಂಗಾಳೀ ಬಾಬಾ) ರಂತಹ ನೂರರ ಅಂಚಿನಲ್ಲಿರುವ ಶ್ರೇಷ್ಠ ಸಾಧಕರು ನಮ್ಮೆದುರಿಗೆ ಈಗಲೂ ಇರುವರು. ಆದರೆ ಇನ್ನೊಮದು ಧ್ರುವದಲ್ಲಿ ಇತರ ಸಾಧಕರ ಚೈತನ್ಯವನ್ನು ಹೀರುವ, ನಗರಗಳ ಪಾಖಂಡಿಗಳಿಗೆ ಸದಾ ಆಧಾರ ಸ್ತಂಭವೆನಿಸಿದ ವಾಮಮಾರ್ಗಿ ಅಘೋರಿ ಬಾಬಾಗಳೂ ತೆರೆ ಮರೆಯಲ್ಲಿ ಆಟವಾಡುತ್ತಿರುವರು. ವಿಶೇಷವೆಂದರೆ ಇವರೆಲ್ಲರಿಗೂ ಸಾಧನ ‘ಗಾಯತ್ರೀ’.

ಅಂದರೆ ಗಾಯತ್ರೀ ಒಂದು ಹತ್ಯಾರು, ಒಂದು ಬ್ರಹ್ಮಾಸ್ತ್ರ; ಅದು ರಾಮನಲ್ಲೂ ಇದೆ, ರಾವಣನಲ್ಲೂ ಇದೆ. ಅಸ್ತ್ರದ ಬಳಕೆ ಅದನ್ನು ಬಳಸುವವರ ಕೈಲಿದೆ. ಗಾಯತ್ರೀಗೆ ಸತ್ಪಾತ್ರ, ಅಪಾತ್ರವೆಂಬ ಭೇದವೇ ಇಲ್ಲ ! ಅದು ತನ್ನ ಆಶ್ರಯಕ್ಕೆ ಬಂದ ಎಲ್ಲರನ್ನೂ ಪಾಲಿಸುತ್ತದೆ, ಪೋಷಿಸುತ್ತದೆ.

– ”ಮಹಾಮಂತ್ರ” ಕೃತಿಯ ‘ಪ್ರವೇಶ’ದಲ್ಲಿ ಅನುವಾದಕ ರಾಜಗೋಪಾಲ ಎಂ.

Leave a Reply

Your email address will not be published. Required fields are marked *