Realtime blog statisticsweb statistics
udupibits.in
Breaking News
ಉಡುಪಿ: ಜೂನ್ 6 ಬೆಳಗ್ಗೆ 11ಕ್ಕೆ ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದಿಂದ ಮಾಹಿತಿ ಹಕ್ಕು ಅರ್ಜಿಗಳ ವಿಚಾರಣೆ.

ನಾಪತ್ತೆಯಾದ ವ್ಯಕ್ತಿಯ ಶವ ಪತ್ತೆ

ಉಡುಪಿ: ಉಡುಪಿ ತಾಲೂಕು ಶಿರ್ವ ಗ್ರಾಮದ ದಡ್ಡಿನಹಿತ್ಲುವಿನಲ್ಲಿರುವ ತಮ್ಮ ಮನೆಯಿಂದ ಫೆಬ್ರವರಿ 6ರ ಸಂಜೆ 6 ಗಂಟೆಗೆ ಉಡುಪಿಗೆ ಹೊಗಿ ಬರುವುದಾಗಿ ಹೇಳಿ ಬಳಿಕ ನಾಪತ್ತೆಯಾದ ಆಲ್ಬನ್ ಫೆರ್ನಾಂಡಿಸ್ (60) ಎಂಬವರ ಮೃದೇಹ, ಫೆಬ್ರವರಿ 7ರ ಮಧ್ಯಾಹ್ನ ಏಣಗುಡ್ಡೆ ಗ್ರಾಮದ ಸುಣ್ಣದ ಗೂಡು ಎಂಬಲ್ಲಿನ ರೈಲ್ವೆ ಸೇತುವೆ ಪಕ್ಕದ ಪಾಪನಾಶಿನಿ ನದಿ ಬದಿಯಲ್ಲಿ ಪತ್ತೆಯಾಗಿದೆ.
ಆಲ್ಬನ್ ನಾಪತ್ತೆಯಾದ ಬಗ್ಗೆ ಅವರ ಪತ್ನಿ ಹೆಲೆನ್ ಫೆರ್ನಾಂಡೀಸ್ ನೀಡಿದ ದೂರಿನಂತೆ ಶಿರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಶವ ಪತ್ತೆಯಾದ ಬಗ್ಗೆ ಮೃತರ ತಮ್ಮ ರಿಚರ್ಡ್ ಫೆರ್ನಾಂಡೀಸ್ ನೀಡಿದ ಹೇಳಿಕೆಯಂತೆ ಕಾಪು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *