Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಯುವತಿ ಕೊಲೆಗೈದ ಬಂಟ್ವಾಳ ನಿವಾಸಿಗೆ ಜೀವಾವಧಿ ಶಿಕ್ಷೆ, ಗಾಂಜಾ ಸಹಿತ ಸುಳ್ಯ ನಿವಾಸಿ ಬಂಧನ

ಮರಳು ಸಾಗಾಟ ಲಾರಿ ವಶಕ್ಕೆ

ಮಂಜೇಶ್ವರ: ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಲಾರಿಯನ್ನು ಮಂಜೇಶ್ವರ ಪೊಲೀಸರು ಹೊಸಂಗಡಿಯಿಂದ ವಶಪಡಿಸಿಕೊಂಡಿದ್ದು, ಚಾಲಕ ಕಲ್ಲಿಕೋಟೆ ನಿವಾಸಿ ಫಿರೋಜ್ (25)ನನ್ನು ಬಂಧಿಸಿದ್ದಾರೆ.

ಗಾಂಜಾ ಸಹಿತ ಬಂಧನ

ಕುಂಬಳೆ: 470 ಗ್ರಾಂ ಗಾಂಜಾ ಸಹಿತ ಸುಳ್ಯ ಕಾಂತಮಂಗಲದ ದೇವರಾಯ ಎಂಬವರ ಪುತ್ರ ಶರತ್ ಕುಮಾರ್ (54)ನನ್ನು ಶಿರಿಯಾ ಪರಿಸರದಿಂದ ಕುಂಬಳೆ ಪೊಲೀಸರು ಬಂಧಿಸಿದ್ದಾರೆ.

ಕುಂಬಳೆ ಸಿ.ಐ ಅನೂಪ್ ಕುಮಾರ್ ಗಸ್ತು ತಿರುಗುತ್ತಿದ್ದಾಗ ಸಂಶಯಾಸ್ಪದವಾಗಿ ನಿಂತಿದ್ದ ಶರತ್ ಕುಮಾರನನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ಬಳಿಕ ನಡೆಸಿದ ತಪಾಸಣೆಯಲ್ಲಿ 470 ಗ್ರಾಂ ಗಾಂಜಾ, 700 ರೂ. ನಗದು ಪತ್ತೆ ಹಚ್ಚಲಾಯಿತು. ಈ ಹಿನ್ನೆಲೆಯಲ್ಲಿ ಶರತ್ ಕುಮಾರ್ ನನ್ನು ಬಂಧಿಸಿ ದೂರು ದಾಖಲಿಸಲಾಗಿದೆ.

ಶರತ್ ಕುಮಾರ್ ವಿರುದ್ದ ಸುಳ್ಯ ಠಾಣೆಯಲ್ಲಿ 2011ರಲ್ಲಿ ಗಾಂಜಾ ಸಾಗಾಟ ಪ್ರಕರಣ ದಾಖಲಿಸಲಾಗಿತ್ತೆಂದು ತಿಳಿದುಬಂದಿದೆ.

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಮೃತ್ಯು

ಮಂಜೇಶ್ವರ: ತೆಂಗಿನ ಮರದಿಂದ ಬಿದ್ದು ಹೊಸಂಗಡಿ ಬಳಿಯ ಪಿರಾರಮೂಲೆ ನಿವಾಸಿ ರಾಮಚಂದ್ರ ಕೆ. (68) ಎಂಬವರು ಮೃತಪಟ್ಟಿದ್ದಾರೆ.

ಹೊಸಂಗಡಿ ಬಳಿಯ ಕೊಪ್ಪಳದಲ್ಲಿ ತೆಂಗಿನ ಮರದಿಂದ ತೆಂಗು ಕೀಳುತ್ತಿದ್ದಾಗ ಆಯ ತಪ್ಪಿ ಬಿದ್ದು ಗಂಭೀರ ಗಾಯಗೊಂಡಿದ್ದ ರಾಮಚಂದ್ರರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಪ್ರಯೋಜನವಾಗಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತರಾದರು. ಮೃತರು ಪತ್ನಿ, 3 ಮಂದಿ ಪುತ್ರರು, ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಫಾತಿಮತ್ ಸುಹರಾ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಕಾಸರಗೋಡು: ಕುಂಬಳೆ ಸಮೀಪದ ಉಜಾರು ನಿವಾಸಿ ಅಬೂಬಕ್ಕರ್ ರವರ ಪುತ್ರಿ ಫಾತಿಮತ್ ಸುಹರಾ (18) ಕೊಲೆ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ದ್ವಿತೀಯ) ಜೀವಾವಧಿ ಶಿಕ್ಷೆ ಮತ್ತು 30 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸದಿದ್ದಲ್ಲಿ ಆರು ತಿಂಗಳ ಹೆಚ್ಚುವರಿ ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ಹೇಳಲಾಗಿದೆ.

ಬಂಟ್ವಾಳ ತಾಲೂಕಿನ ಉಜಿರೆಕೆರೆ ಸಮೀಪದ ಬಳಾಲ ಗ್ರಾಮದ ಮುಂತಡ್ತಿಯಾರು ಹೌಸ್ ನ ಇಬ್ರಾಹಿಂ ಅವರ ಪುತ್ರ ಬಿ.ಎಂ.ಉಮ್ಮರ್ ಆಲಿಯಾಸ್ ಉಮ್ಮರ್ ಬ್ಯಾರಿ (33) ಶಿಕ್ಷೆಗೆ ಒಳಗಾದ ಕೊಲೆ ಕೃತ್ಯದ ಅಪರಾಧಿ.

2006ರ ಡಿಸೆಂಬರ್ 28ರಂದು ಮುಂಜಾನೆ ಉಜಾರು ಉಳುವಾರು ಗ್ರಾಮದಲ್ಲಿರುವ ಫಾತಿಮತ್ ಸುಹರಾಳನ್ನು ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾಗಿ ಪೊಲೀಸರು ಉಮ್ಮರ್ ವಿರುದ್ಧ ಕೇಸು ದಾಖಲಿಸಿದ್ದರು.

ಪ್ರೇಮ ನಿರಾಕರಿಸಿದ ಹಿನ್ನೆಲೆಯಲ್ಲಿ ಫಾತಿಮತ್ ಸುಹರಾಳ ಮನೆಯ ಹಿಂಭಾಗದ ಮರವೇರಿ ಹೆಂಚು ತೆಗೆದು ಒಳ ನುಗ್ಗಿದ ಆರೋಪಿ ನಿದ್ದೆಯಲ್ಲಿದ್ದ ಸುಹರಾಳ ಕುತ್ತಿಗೆಯನ್ನು ಚಾಕುವಿನಿಂದ ಕೊಯ್ದು ಕೊಲೆಗೈದನೆಂದು ಕುಂಬಳೆ ಪೊಲೀಸರು ದೂರು ದಾಖಲಿಸಿದ್ದರು.

Leave a Reply

Your email address will not be published. Required fields are marked *