Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕೆಲಸಕ್ಕೆಂದು ಮನೆಯಿಂದ ಹೊರಟ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ

ಉಡುಪಿ: ಉಡುಪಿ ತಾಲೂಕು ಕಾವಡಿ ಗ್ರಾಮದ ಮಾನಂಬಳ್ಳಿ ದರ್ಖಾಸ್ ಮನೆಯ ನಿವಾಸಿ ನಾಗರಾಜ್ (55) ಎಂಬವರ ಮೃತದೇಹ ಇಂದುಮಧ್ಯಾಹ್ನ ಮಾನಂಬಳ್ಳಿ ಬಾಬಣ್ಣ ಶೆಟ್ಟಿಯವರ ಮನೆ ಹಿಂಬದಿಯಲ್ಲಿರುವ ಬಾವಿಯಲ್ಲಿ ಪತ್ತೆಯಾಗಿದೆ.
ನಾಗರಾಜ್ ರವರು, ಫೆಬ್ರವರಿ 6ರ ಬೆಳಿಗ್ಗೆ ಗಂಟೆ 6.30ಕ್ಕೆ ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟಿದ್ದರೆನ್ನಲಾಗಿದೆ. ಆಕಸ್ಮಿಕವಾಗಿ ಬಾವಿಗೆ ಬಿದ್ದು ಇವರು ಮೃತಪಟ್ಟಿರಬಹುದೆಂದು ಭಾವಿಸಲಾಗಿದೆ.
ಈ ಬಗ್ಗೆ, ಮೃತರ ಪುತ್ರ ಮಹೇಶ್ ನೀಡಿದ ಹೇಳಿಕೆಯಂತೆ ಕೋಟ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *