Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ಮೆಹಂದಿಯಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದವರ ರಿಕ್ಷಾ ಅಪಘಾತ: ಚಾಲಕ ಮೃತ್ಯು

ಉಡುಪಿ: ನಾಯಿ ಅಡ್ಡ ಬಂದ ಕಾರಣ, ರಿಕ್ಷಾ ಚಾಲಕ ದಿಢೀರನೇ ಬ್ರೇಕ್ ಹಾಕಿದ ಪರಿಣಾಮ, ಚಾಲಕ ರಸ್ತೆಗೆ ಬಿದ್ದು, ಚಾಲಕನ ಮೇಲೆ ರಿಕ್ಷಾ ಮಗುಚಿ ಬಿದ್ದು ಚಾಲಕ ಮೃತಪಟ್ಟ ಘಟನೆ ಬ್ರಹ್ಮಾವರ – ಪೇತ್ರಿ ರಸ್ತೆಯ ಕುಂಜಾಲು ಬಳಿ ಫೆಬ್ರವರಿ 10ರ ಮಧ್ಯರಾತ್ರಿ ಸಂಭವಿಸಿದೆ.
ಉಡುಪಿ ತಾಲೂಕು ಕೊಡವೂರು ಗ್ರಾಮ ನಿವಾಸಿ ಭೋಜ ಕರ್ಕೇರ ಮೃತ ದುರ್ದೈವಿ. ಕೆಎ 20 ಎ 8461 ನಂಬ್ರದ ರಿಕ್ಷಾ ವನ್ನು ಭೋಜ ಕರ್ಕೇರರವರು ಚಲಾಯಿಸುತ್ತಿದ್ದು, ಇವರ ಸಂಬಂಧಿಗಳಾದ ಸುರೇಶ್ ಬಿ.ಕರ್ಕೇರ ಹಾಗೂ ಸೂರಪ್ಪ ಕರ್ಕೇರ ಅವರೂ ರಿಕ್ಷಾದಲ್ಲಿದ್ದರು. ಪೇತ್ರಿಯಲ್ಲಿ ಮೆಹಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮನೆಗೆ ಮರಳುತ್ತಿದ್ದಾಗ ಅಪಘಾತ ನಡೆದಿದೆ.
ಈ ಬಗ್ಗೆ, ಸುರೇಶ್ ಬಿ. ಕರ್ಕೇರ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *