Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮನೆಗೆ ನುಗ್ಗಿ ಹೆತ್ತವರ ಎದುರೇ ಬಿಜೆಪಿ ಕಾರ್ಯಕರ್ತನ ಬರ್ಬರ ಕೊಲೆ: ಕಮ್ಯುನಿಸ್ಟ್ ಕಾರ್ಯಕರ್ತರ ಕೃತ್ಯ

ಕಾಸರಗೋಡು: ಕೇರಳದಲ್ಲಿ ಮತ್ತೆ ರಾಜಕೀಯ ಕೊಲೆ ನಡೆದಿದೆ. ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಎನ್ನಲಾದ ತಂಡವೊಂದು ಆರ್.ಎಸ್.ಎಸ್-ಬಿಜೆಪಿ ಕಾರ್ಯಕರ್ತನೋರ್ವನನ್ನು ಆತನ ಹೆತ್ತವರ ಸಮಕ್ಷಮವೇ ಬರ್ಬರವಾಗಿ ಕೊಲೆಗೈದಿದೆ.

ಕೃತ್ಯ ನಡೆದುದು ಕಣ್ಣೂರು ಜಿಲ್ಲೆಯಲ್ಲಿ. ಇಲ್ಲಿನ ಪಾಪಿನಶ್ಶೇರಿ ಸಮೀಪದ ಆಜಾದ್ ಕಾಲನಿಯ ನಿವಾಸಿ ಸುಜಿತ್ (27) ಕೊಲೆಗೀಡಾದವನು. ಈತನನ್ನು ಫೆಬ್ರವರಿ 15ರ ರಾತ್ರಿ ಮನೆಗೆ ನುಗ್ಗಿದ ತಂಡವೊಂದು ತಂದೆ ತಾಯಿಗಳ ಸಮಕ್ಷಮೇ ಕೊಲೆಗೈದಿದೆ.

ಕೊಲೆಗೈದವರು ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರೆಂದು ದೂರಲಾಗಿದೆ. ಕೊಲೆಗೀಡಾದ ಸುಜಿತ್ ಆರ್.ಎಸ್.ಎಸ್ ಮತ್ತು ಬಿಜೆಪಿಯ ಸಕ್ರಿಯ ಕಾರ್ಯಕರ್ತರನಾಗಿದ್ದಾನೆ.

 

Leave a Reply

Your email address will not be published. Required fields are marked *